50ನೇ ಸಂಭ್ರಮದತ್ತ “ಕಲ್ವರಿ ಬ್ಯಾಪ್ಟಿಸ್ಟ್ ತೆಲಗು ಚರ್ಚ್” ಟ್ರಸ್ಟ್ !
POWER CITY

"Calvary Baptist Telugu Church" Trust celebrates 50th anniversarY
POWER CITY NEWS/HUBBALLIಹುಬ್ಬಳ್ಳಿ: ಹುಬ್ಬಳ್ಳಿಯ ಪ್ರತಿಷ್ಟಿತ ತೆಲಗು ನಿವಾಸಿಗಳ ತಾಣವಾಗಿರುವ ಗದಗ ರಸ್ತೆಯ ಪ್ರಕಾಶ್ ಕಾಲೂನಿಯಲ್ಲಿ ಚರ್ಚ ಒಂದಕ್ಕೆ ಇದೀಗ 50ರ ಶುಭ ಸಂಭ್ರಮ.
ಇಲ್ಲಿನ ಸಾಮೋಹಿಕ ಪ್ರಾರ್ಥನಾ ಮಂದಿರವು ಸ್ಥಾಪನೆಯಾಗಿ ಇಂದಿಗೆ ಬರೋಬ್ಬರಿ ಐವತ್ತು ವರ್ಷಗಳು ಗತಿಸಿವೆ.ಅಲ್ಲದೆ ಹಲವು ಕ್ರಿಶ್ಚಿಯನ್ ಕುಟುಂಬಗಳು ಇಲ್ಲಿ ಅನ್ಯೋನ್ಯ ಜೀವನ ನಡೆಸಿದ್ದು ಸದಾ ಎಲ್ಲಸಮುದಾಯಕ್ಕೂ ಒಳಿತು ಬಯಸುತ್ತವೆ.
ಇನ್ನೂ ಸಂಭ್ರಮಾಚರಣೆಯ ಅಂಗವಾಗಿ “ವಿಹಾನ್ ಹೃದಯ ಮತ್ತು ಸೂಪರ್ ಸ್ಪೇಶಾಲಿಟಿ ಆಸ್ಪತ್ರೆ ಹುಬ್ಬಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಸಾರ್ವಜನಿಕ ವಿವಿಧ ಆರೋಗ್ಯ ತಪಾಸಣಾ ಕಾರ್ಯಕ್ರಮ ಹಾಗೂ ನೇತ್ರ ತಪಾಸಣಾ ಮತ್ತು ಕನ್ನಡಕಗಳನ್ನು ನೀಡುವ ಮೂಲಕ ಸಾಮಾಜಿಕ ಕಳಕಳಿ ಮೇರೆದಿದ್ದಾರೆ.ಅಲ್ಲದೆ ಬೃಹತ್ ರಕ್ತ ಭಂಡಾರವನ್ನು “ಶಾ ದಾಮಜೀ ಜಾದವಜೀ ಛಡ್ಡಾ ಮೆಮೋರಿಯಲ್” ಹಾಗೂ “ರಾಷ್ಟ್ರೋತ್ಥಾನ ಬ್ಲಡ್ ಸೆಂಟರ್ ಹುಬ್ಬಳ್ಳಿ” ಇವರ ಸಹಯೋಗದಲ್ಲಿ ನಡೆಸಲಾಯಿತು.
ಇ ಸಂಧರ್ಭದಲ್ಲಿ ಕಲ್ವರಿ ಬ್ಯಾಪ್ಟಿಸ್ಟ್ ಚರ್ಚ್ ಟ್ರಸ್ಟ್ ಪಧಾದಿಕಾರಿಗಳು,ಪ್ರಕಾಶ್ ಕಾಲೋನಿಯ ನಿವಾಸಿಗಳು ಉಪಸ್ಥಿತರಿದ್ದರು.