ಧಾರವಾಡ

ಉದಯೋನ್ಮುಖ ಪ್ರತಿಭೆ ಕುಮಾರಿ ವರ್ಷಿಣಿ ರಾಮಡಗಿ

ಧಾರವಾಡ

ವಿದ್ಯಾಕಾಶಿ, ಸಂಗೀತದ ತವರೂರು, ಕವಿ, ಸಾಹಿತಿಗಳ ಬೀಡು, ರುಚಿಕರ ಫೇಡಾ ನಗರಿ ಎಂಬೆಲ್ಲ ವಿಶೇಷಣಗಳನ್ನು ಮುಡಿಗೇರಿಸಿಕೊಂಡಿರುವ ಧಾರವಾಡದ ಯುವ ಪ್ರತಿಭೆ ಕುಮಾರಿ ವರ್ಷಿಣಿ ರಾಮಡಗಿಯವರನ್ನು ನಿಮಗೆ ಪರಿಚಯಿಸುತ್ತಿದ್ದೇವೆ.

ಹೆಸರು:-ಕುಮಾರಿ ವರ್ಷಿಣಿ ರಾಮಡಗಿ
ಊರು:ಧಾರವಾಡ
ವಿದ್ಯಾಭ್ಯಾಸ:ಟ್ರಾವೆಲ್ &ಟೂರಿಸಂ ಥರ್ಡ್ ಸೆಮಿಸ್ಟರ್ ನ್ನು ಧಾರವಾಡದ KCD ಕಾಲೇಜಿನಲ್ಲಿ ಓದುತ್ತಿದ್ದಾರೆ

ಕಲೆ ಅನ್ನೋದು ಇವರಿಗೆ ಜನ್ಮಜಾತವಾಗಿಯೇ ಬಂದಿದೆ. ಚಿಕ್ಕಂದಿನಿಂದಲೂ ಶಾಲೆಯ ಆಟೋಟದಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸದಾ ಮುಂದಾಗಿ ಭಾಗವಹಿಸಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು. 10ನೇ ತರಗತಿಯಲ್ಲಿ ಶಾಲೆಯ ವಾರ್ಷಿಕೋತ್ಸವದಲ್ಲಿ ಇಂಗ್ಲೀಷ ಭಾಷೆಯ Rap ಸಂಗೀತವನ್ನು ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತದನಂತರ ವಿದ್ಯಾಭ್ಯಾಸದೊಂದಿಗೆ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.


ಅವುಗಳೆಂದರೆ:-
1) 2019 ರಲ್ಲಿ ಪ್ರತಿಷ್ಟಿತ ವಿಜಯ ಕರ್ನಾಟಕ ಪೇಪರ್ ಏರ್ಪಡಿಸುವ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ವಿಕ ನವತಾರೆ ಎಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಫೈನಲ್ ಸ್ಪರ್ಧೆಗೆ ಅರ್ಹತೆ ಪಡೆದರು.

2) ಇದೇ ಸ್ಪರ್ಧೆ ಬೆಂಗಳೂರಿನಲ್ಲಿ ನಡೆದ ಫೈನಲ್ ಸ್ಪರ್ಧೆಯಲ್ಲಿ ಘಟಾನುಘಟಿಗಳ ಮಧ್ಯೆ ತೀವ್ರ ಪೈಪೋಟಿ ನೀಡಿ ಮಿಸ್ ಬಾಡಿ ಬ್ಯೂಟಿಫುಲ್ ಎಂಬ ಟೈಟಲ್ ನ್ನು ಪಡೆದರು.

3)2019 ರಲ್ಲಿ ನಡೆದ ಮಿಸ್ ಕರ್ನಾಟಕ ಸೌಂದರ್ಯ ಸ್ಪರ್ಧೆಯ ಫೈನಲಿಸ್ಟ ಸಹ ಆದರು.

4) 2018ರಲ್ಲಿ ನಡೆದ ಮಿಸ್ ನಾರ್ಥ್ ಕರ್ನಾಟಕ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ನಾರ್ಥ ಕರ್ನಾಟಕ ಬೆಸ್ಟ್ ವಾಕ್ ಎಂಬ ಟೈಟಲ್ ನ್ನು ಪಡೆದರು.

5) 2020 ರಲ್ಲಿ ನಡೆದ ಮಿಸ್ ಧಾರವಾಡ ಸೌಂದರ್ಯ ಸ್ಪರ್ಧೆಯಲ್ಲಿ ಅಂತಿಮವಾಗಿ ಮಿಸ್ ಧಾರವಾಡ ಆಗಿ ಹೊರಹೊಮ್ಮಿದರು.

6) 2019 ರಲ್ಲಿ ನಡೆದ ಜನನೀ ಜನ್ಮದಾತೆ ಎಂಬ ಸೌಂದರ್ಯ ಸ್ಪರ್ಧೆಯಲ್ಲಿ ತಮ್ಮ ತಾಯಿಯೊಂದಿಗೆ ಭಾಗವಹಿಸಿ ಕಿರೀಟವನ್ನು ಮುಡಿಗೇರಿಸಿಕೊಂಡರು.

7) 2019 ರಲ್ಲಿ ನಡೆದ ಮಾಮ್ ಆಂಡ್ ಮಿ ಎಂಬ ಸೌಂದರ್ಯ ಸ್ಪರ್ಧೆಯಲ್ಲಿ ತಾಯಿಯೊಂದಿಗೆ ಭಾಗವಹಿಸಿ ಅಲ್ಲಿಯೂ ಕಿರೀಟವನ್ನು ಮುಡಿಗೇರಿಸಿಕೊಂಡರು.

8) ಇನ್ನು 2018 ರಲ್ಲಿ ಹುಬ್ಬಳ್ಳಿ-ಧಾರವಾಡದ ದಸರಾ ಸುಂದರಿ ಎಂಬ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದರು.

9) 2019 ರ ಕ್ಯಾಲೆಂಡರ್ ಮಾಡೆಲ್ ಆದರು.

10) ಅನೇಕ ಕಡೆಗಳಲ್ಲಿ ಸೌಂದರ್ಯ ಸ್ಪರ್ಧೆಗೆ ಜಡ್ಜ ಆಗಿ ಸಹ ಕಾರ್ಯ ನಿರ್ವಹಿಸಿದ ಕೀರ್ತಿ ಇವರದಾಗಿದೆ.

11) ಇನ್ನು 2021 ರಲ್ಲಿ ನಡೆದ ಮಿಸ್ ಧಾರವಾಡ ಸೌಂದರ್ಯ ಸ್ಪರ್ಧೆಯಲ್ಲಿ 2 ನೇ ಬಾರಿ ಮಿಸ್ ಧಾರವಾಡ ಆಗಿ ವಿಜೇತರಾದರು.

12) ಹುಬ್ಬಳ್ಳಿಯ ಚೇತನಾ ಫೌಂಡೇಶನ್ ಅವರು 2021 ರ ಪ್ರತಿಷ್ಟಿತ ವನಿತಾ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

13) ಧಾರವಾಡದ DJ ಇವೆಂಟ್ಸನವರು ಏರ್ಪಡಿಸಿದ್ದ MISS DHARWAD GLAM BEAUTY ಎಂಬ ಸೌಂದರ್ಯ ಸ್ಪರ್ಧೆಯಲ್ಲಿ ಸೆಕೆಂಡ್ ರನ್ನರ್ ಅಪ್ ಆಗಿದ್ದಾರೆ.

14) ನವಕರ್ನಾಟಕ ಚಲನಚಿತ್ರ ಅಕ್ಯಾಡೆಮಿ (ರಿ) ಇವರು ದಿನಾಂಕ:20/11/2021 ರಂದು ಧಾರವಾಡದಲ್ಲಿ ಏರ್ಪಡಿಸಿದ್ದ MISS KIFF QUEEN-2021 ಬ್ಯೂಟಿ ಪ್ಯಾಜೆಂಟ್ ನಲ್ಲಿ (ಮಿಸ್ ಕಿಫ್ ಕ್ವೀನ್-2021) ಭಾಗವಹಿಸಿ MISS KIFF QUEEN-2021 ಆಗಿ ವಿಜೇತರಾದರು. 24 ಜನ ಸ್ಪರ್ಧಿಗಳಲ್ಲಿ ಅಂತಿಮವಾಗಿ ವಿಜೇತರಾದರು.

15) ನವಿಲುಗರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ(ರಿ) ಧಾರವಾಡ ಇವರು ದಿನಾಂಕ 20/11/2021 ರಂದು ಏರ್ಪಡಿಸಿದ್ದ *ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ *ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು* ನೀಡಿ ಗೌರವಿಸಿದ್ದಾರೆ.

16) ಇನ್ನು ವ್ಯಾಟ್ ಪ್ಯಾಡ್ ನಲ್ಲಿ ಇವರು ಬರೆಯುವ ಕಾದಂಬರಿಗೆ ಇದುವರೆಗೂ 84,000 ಜನ ಓದುಗರಿದ್ದಾರೆಂಬುದು ತುಂಬಾ ಹೆಮ್ಮೆಯ ವಿಷಯವೇ ಸರಿ.

17) ಇನ್ನು ಇವರದೇ ಆದ The Lifestyle Mosaic ಆಡಿಯೋ ಚಾನೆಲ್ ನ್ನೂ ಶುರು ಮಾಡಿದ್ದಾರೆ. ಅದರಲ್ಲಿ ಹಲವು ಪ್ರತಿಭೆಗಳನ್ನು ಹೊರತಂದಿದ್ದಾರೆ.

18) ಆನ್ಲೈನ್ ಮೂಲಕ ಜಪಾನೀಸ್ ಭಾಷೆಯನ್ನು ಸಹ ಕಲಿಯುತ್ತಿದ್ದಾರೆ.

19) ಇದಲ್ಲದೇ ಇನ್ನೂ ಅನೇಕ ಹವ್ಯಾಸಗಳೂ ಇವರಿಗಿದೆ ಅವುಗಳಲ್ಲಿ ಪೇಂಟಿಂಗ್, ನೃತ್ಯ ಮಾಡುವುದು, ಹಾಡು ಹೇಳುವುದು, ಕವಿತೆಗಳನ್ನು ಬರೆಯುವುದು, ಅನೇಕ ಲೇಖನಗಳನ್ನು ಬರೆದಿದ್ದಾರೆ, ಸಣ್ಣ ಕಥೆಗಳನ್ನು, ಸಹ ಬರೆಯುತ್ತಾರೆ. ಜೊತೆಗೆ ನಿತ್ಯ ಯೋಗಾಭ್ಯಾಸವನ್ನೂ ಮಾಡುತ್ತಾರೆ.

ಇಷ್ಟೆಲ್ಲಾ ಸಾಧನೆಗಳನ್ನು ಮಾಡಿದ ಇವರು 19 ವರ್ಷದವರಾಗಿದ್ದು ಈಗ ಟ್ರಾವೆಲ್ ಆಂಡ್ ಟೂರಿಸಂ ನಲ್ಲಿ 3ನೇ ಸೆಮಿಸ್ಟರ್ ಓದುತ್ತಿದ್ದಾರೆ. ಕಾಲೇಜಿನ ಅಧ್ಯಾಪಕರು, ವಿದ್ಯಾರ್ಥಿಗಳ, ಸ್ನೇಹಿತರ, ತಂದೆ-ತಾಯಿಯರ ಅಚ್ಚುಮೆಚ್ಚಿನವರಾಗಿದ್ದಾರೆ. ಈ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಉದಯೋನ್ಮುಖ ಪ್ರತಿಭೆಗೆ ಇನ್ನಷ್ಟು, ಮತ್ತಷ್ಟು ಅವಕಾಶಗಳು ಬರಲಿ, ಅಂತರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಅವರ ಮನೋಭಿಲಾಷೆಯೂ ಈಡೇರಲೆಂದು ಹಾರೈಸೋಣ.

Related Articles

Leave a Reply

Your email address will not be published. Required fields are marked *

Back to top button