BREAKING NEWSCITY CRIME NEWSDHARWADHubballiUncategorized

ಕಿಮ್ಸ್ ಸಿಬ್ಬಂದಿಯ ಅನುಮಾನಸ್ಪದ ಸಾವು!

DEATH SECRATE!

POWERCITY : HUBLI

ಹುಬ್ಬಳ್ಳಿ

ಕಿಮ್ಸ್ ಆಸ್ಪತ್ರೆಯಲ್ಲಿ ಶುಶ್ರೂಷಕರಾಗಿ ಸೇವೆ ಸಲ್ಲಿಸುತ್ತಿದ್ದ ಮಹಿಳಾ ಸಿಬ್ಬಂದಿಯೊಬ್ಬರು ಅನುಮಾನಾಸ್ಪದ ಸಾವಿಗಿಡಾದ ಘಟನೆ ಕಿಮ್ಸ್ ಕ್ವಾಟರ್ಸ್ ನಲ್ಲಿ ನಡೆದಿದೆ.

ಮೃತ ಸಿಬ್ಬಂದಿಯನ್ನು ಶಕೀಲಾ ಬಾನು (40) ಎಂದು ಗುರುತಿಸಲಾಗಿದೆ.ಅವರಿಗೆ ಒಬ್ಬ ಪುತ್ರನಿದ್ದು ಧಾರವಾಢದ ಸಂಗೊಳ್ಳಿ ರಾಯಣ್ಣ ನಗರದಲ್ಲಿ ಇತ್ತೀಚೆಗೆ ಎರಡು ವರ್ಷಗಳ ಹಿಂದೆ ಹೊಸ ಮನೆ ಮಾಡಿದ್ದರು ಅಲ್ಲಿ ಅವರ ತಾಯಿ ಹಾಗೂ ಮಗ ವಾಸವಾಗಿದ್ದರು ಎನ್ನಲಾಗಿದೆ.

ಎಂದಿನಂತೆ ರಾತ್ರಿ ವೇಳೆ ಮನೆಯಲ್ಲಿದ್ದ ಶಕೀಲಾ ಅವರಿಗೆ ಮಗ ರಾತ್ರಿಯಿಂದಲೂ ಕರೆ ಮಾಡಿದರು ಸ್ವಿಕರಿಸದ ಹಿನ್ನೆಲೆಯಲ್ಲಿ ಬೆಳಿಗ್ಗೆ ಕಿಮ್ಸ್ ಆವರಣದಲ್ಲಿರುವ ಕ್ವಾಟರ್ಸ ಮನೆಗೆ ಬಂದು ನೋಡಿದಾಗ ಹೊರಗಡೆ ಚಿಲಕ ಅರ್ಧ ಲಾಕ್ ಇದ್ದುದನ್ನ ಕಂಡು ಒಳಗೆ ಹೋಗುತ್ತಲೆ ತಾಯಿ ಶವವಾಗಿ ಬಿದ್ದುದನ್ನ ಕಂಡು ಗಾಬರಿಯಾದ ಮಗ ಅಕ್ಕಪಕ್ಕದವರಿಗೆ ವಿಷಯ ತಿಳಿಸಿದ್ದಾನೆ.

ಇನ್ನೂ ಘಟನಾ ಸ್ಥಳಕ್ಕೆ ವಿದ್ಯಾನಗರ ಪೊಲಿಸರು ಭೇಟಿ ನೀಡಿದ್ದು ತನಿಖೆ ಮುಂದುವರೆಸಿದ್ದಾರೆ.ಇದೀಗ ಸಾವಿಗೆ ನಿಖರ ಕಾರಣವೇನೆಂಬುದನ್ನ ಪೊಲೀಸರ ತನಿಖೆಯಿಂದಷ್ಟೆ ತಿಳಿಯಬೆಕಿದೆ!

Related Articles

Leave a Reply

Your email address will not be published. Required fields are marked *

Back to top button