BREAKING NEWSCITY CRIME NEWSDHARWADHubballiKMC HOSPITALPolice

ಕಿಮ್ಸ್ ಸಿಬ್ಬಂದಿಯ ನಿಗೂಢ ಸಾವಿಗೆ ಕಾರಣವೇನು?

Shakila death secrate!

POWERCITY NEWS : HUBBALLI

ಹುಬ್ಬಳ್ಳಿ: ಕಿಮ್ಸ್ ಸಿಬ್ಬಂದಿ ಸಾವಿನ ಸುದ್ದಿ ಇದೀಗ ಸಾರ್ವಜನಿಕ ವಲಯದಲ್ಲೂ ಕೂಡ ಸಾಕಷ್ಟು ಕುತೂಹಲ ಮೂಡಿಸುತ್ತಿದ್ದು ಕಿಮ್ಸ್ ಆವರಣದಲ್ಲಿ ಇದೀಗ ಸಾವಿಗೀಡಾದ ಮಹಿಳಾ ಸಿಬ್ಬಂದಿಯದ್ದೆ ಚರ್ಚೆ!

ಹೌದು ಸಿಬ್ಬಂದಿ ವರ್ಗದ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದ ಮೃತ ಶಕೀಲಾ ಬಾನು ಶೇಖ ಅವರ ನಿಗೂಢ ಸಾವಿಗೆ ಸಂಪೂರ್ಣ ಕಿಮ್ಸ್ ಸಿಬ್ಬಂದಿ ವರ್ಗವೆ ಮರಗುತ್ತಿದೆ.

ಕಿಮ್ಸ್ ಆವರಣದ ಐದನೆ ಕ್ವಾಟರ್ಸ‌ನಲ್ಲಿ ವಾಸವಾಗಿದ್ದ ಶಕೀಲಾ ನಿನ್ನೆ ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ರೂ.ಮೃತ ಶಕಿಲಾ ಅವರಿಗೆ ಒರ್ವ ಪುತ್ರ ಹಾಗೂ ಇಳಿ ವಯಸ್ಸಿನ ತಾಯಿ ಜೊತೆಗಿದ್ದರು.ಆದರೆ ಪತಿಯ‌ಬಗ್ಗೆ ಮಾಹಿತಿ ಇಲ್ಲವಾದರೂ ಇದ್ದ ಒಬ್ಬ ಮಗನಿಗೆ ಉತ್ತಮ ಶಿಕ್ಷಣ ನೀಡುವುದರಲ್ಲಿ ಯಶಸ್ಸು ಕಂಡಿದ್ದರು ಎನ್ನಲಾಗಿದೆ.

ಯಾರೊಂದಿಗೂ ಒರಟಾಗಿ ಮಾತನಾಡದ ಮೃದು ಸ್ವಭಾವ ಹೊಂದಿದ್ದ ಶಕೀಲಾ ಅವರ ಸಾವು ಇದೀಗ ಸಾಕಷ್ಟು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ ಎನ್ನುವುದರಲ್ಲಿ ಸಂದೇಹವೆ ಇಲ್ಲ ಎಂಬಂತಾಗಿದೆ.

ಕೆಲವರು ಆತ್ಮಹತ್ಯೆ ಮಾಡಿಕೊಂಡರಾ? ಎಂದು ಪ್ರಶ್ನೆ ಮಾಡಿಕೊಂಡರೆ ಇನ್ನೂ ಕೆಲವರು ಮನೆಯ ವಾತಾವರಣ ಕಂಡಂತಹ ಪ್ರತ್ಯಕ್ಷ ದರ್ಶಿಗಳು ಹಾಗೂ ಅಕ್ಕ ಪಕ್ಕದ ನಿವಾಸಿಗಳು ಶಕೀಲಾ ಅವರ ಮೊಬೈಲ್, ಕೊರಳಲ್ಲಿದ್ದ ಮಾಂಗಲ್ಯ ಹಾಗೂ ಕಪಾಟಿನ ಬಾಗೀಲ ತೆರದಿದ್ದರ ಹಿಂದಿನ ರಹಸ್ಯವೇನು? ಎಂಬುವುದರ ಕುರಿತು ತಮ್ಮನ್ನೆ ತಾವು ಪ್ರಶ್ನಿಸಿ ಕೊಳ್ಳುವಂತಾಗಿದೆ.

ಒಂದು ವೇಳೆ ಅದು ಕೊಲೆಯಾಗಿದ್ದರೆ! ಕೊಲೆಯ ಹಿಂದಿನ ಉದ್ದೇಶವೇನು ಎಂಬುವುದೆ ಇದೀಗ ಕಾಡುತ್ತಿರುವ ಯಕ್ಷ ಪ್ರಶ್ನೆಯಾಗಿದೆ.

ಆದರೆ ಕ್ವಾಟರ್ಸ್ ನಿರ್ವಹಣೆಗೆಂದೆ ಕೊಟಿ ಕೋಟಿ ಹಣ ಅನುದಾನ ಪಡೆಯುವ ಕಿಮ್ಸ್ ಆಡಳಿತ ಮಂಡಳಿಯ ಹಗಲು ದರೋಡೆ ಇದೀಗ ಇಲ್ಲಿನ ಕ್ವಾಟರ್ಸ್‌ನಲ್ಲಿ ವಾಸವಿದ್ದು ಸಾರ್ವಜನಿಕ ಸೇವೆಗೈಯುತ್ತಿರುವ ಶುಶ್ರೂಷಕರ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರು ವವರ ಜೀವನವಂತು ಯಾವುದೆ ನರಕಕ್ಕೂ ಕಡಿಮೆ ಇಲ್ಲ ಎನ್ನುವುದು ಇಲ್ಲಿನ ಸಿಬ್ಬಂದಿಗಳ ಅಳಲಾಗಿದೆ.ಇಲ್ಲಿನ ಕಾರ್ಮಿಕರ ಸಮಸ್ಯೆಗಳಿಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತ ನಿಮ್ಮ ಪವರ್ ಸಿಟಿ ನ್ಯೂಸ್ ಕಾರ್ಮಿಕ ಸಚಿವರ ಕಣ್ತೆರೆಸುವ ಕೆಲಸ ಮಾಡಲಿದೆ!

ವರದಿ: ಎಸ್ ಆರ್ ಶಾನವಾಡ

ಹುಬ್ಬಳ್ಳಿ

Related Articles

Leave a Reply

Your email address will not be published. Required fields are marked *

Back to top button