assemblyBJPBREAKING NEWSDHARWADPolitical newsಧಾರವಾಡ

ಕೇಂದ್ರ ಸಚಿವ ಜೋಷಿಯವರಿಂದ ದಿ!! ಎಸ್ ಆರ್ ಬೊಮ್ಮಾಯಿಯವರ ಕಂಚಿನ ಪುತ್ಥಳಿ ಅನಾವರಣ!

M K

POWER CITYNEWS: HUBLI ನವಲಗುಂದ/

ಇಂದು ನವಲಗುಂದ ವಿಧಾನಸಭಾ ಕ್ಷೇತ್ರದ ಹೆಬಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಕೋಲ್ ಇಂಡಿಯಾ ಲಿ. ನ ರೂ 62 ಲಕ್ಷ ಅನುದಾನದಡಿಯಲ್ಲಿ ನಿರ್ಮಿಸಲಾಗಿರುವ ನಾಲ್ಕು ಶಾಲಾ ಕೊಠಡಿಗಳನ್ನು ಉದ್ಘಾಟನೆ ಮಾಡಿ ಮಾಜಿ ಮುಖ್ಯಮಂತ್ರಿ ಶ್ರೀ ಎಸ್ ಆರ್ ಬೊಮ್ಮಾಯಿ ಅವರ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಲಾಯಿತು. ಇದೇ ವೇಳೆ ಎನ್.ಟಿ.ಪಿ.ಸಿ ಯ ಸಿ.ಎಸ್.ಆರ್. ಕಾರ್ಯಚಟುವಟಿಕೆಯಡಿ ಹೆಬಸೂರು ಗ್ರಾಮದ ಗಂಡು ಮಕ್ಕಳ ಹಾಗೂ ಹೆಣ್ಣು ಮಕ್ಕಳ ಸರಕಾರಿ ಶಾಲೆಗಳಿಗೆ 45 ಡೆಸ್ಕ್ ಗಳನ್ನು ವಿತರಿಸಲಾಯಿತು.

ವಿಕಸಿತ ಭಾರತದ ಕನಸು ಈಡೇರಿಸಲು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಬೇಕಲ್ಲದೇ ಅದಕ್ಕಾಗಿ ಉತ್ತಮ ವಾತಾವರಣವೂ ದೊರೆಯಬೇಕೆಂಬುದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಗುರಿ. ಇದರಂತೆ ನಾವು ಧಾರವಾಡ ಲೋಕಸಭಾ ಕ್ಷೇತ್ರದಲ್ಲೂ ಸರ್ಕಾರಿ ಶಾಲೆಗಳಲ್ಲಿ ಹೊಸ ಕೊಠಡಿಗಳನ್ನು ನಿರ್ಮಿಸಿ ಮೂಲಸೌಕರ್ಯಗಳನ್ನು ಒದಗಿಸುವುದರೆಡೆೆಗೆ ನಿರಂತರವಾಗಿ ಶ್ರಮಿಸುತ್ತಿದ್ದೇವೆ.

ಇಂದಿನ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪ.ಪೂ.ಸಿದ್ಧಯ್ಯ ಸ್ವಾಮಿಗಳು ವಹಿಸಿದ್ದು, ಕಾರ್ಯಕ್ರಮದಲ್ಲಿ ಸಂಸದರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಭೊಮ್ಮಾಯಿ ಶಾಸಕರಾದ ಶ್ರೀ ಎನ್.ಹೆಚ್. ಕೋನರಡ್ಡಿ, ಮಾಜಿ ಸಚಿವರಾದ ಶ್ರೀ ಶಂಕರಪಾಟೀಲ್ ಮುನೇನಕೊಪ್ಪ ಮಾಜಿ ಶಾಸಕರಾದ ಶ್ರೀ ಡಾ.ಆರ್.ಬಿ. ಶಿರಿಯಣ್ಣವರ, ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಮತ್ತು ಕಾಲೇಜು ಶಿಕ್ಷಣ ವೃಂದ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *