5 ಕೈಗಾರಿಕಾ ನಗರಗಳಲ್ಲಿ ಹುಬ್ಬಳ್ಳಿ–ಧಾರವಾಡಕ್ಕೆ ಮೊದಲ ಆದ್ಯತೆ ನೀಡಿ: AAP ಮನವಿ!
DAKHANI

POWER CITY NEWS: ಧಾರವಾಡ: ಬೆಂಗಳೂರಿನ (bangaluru)ಹೊರಗೆ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಐದು ಕೈಗಾರಿಕಾ ನಗರಗಳ ಪಟ್ಟಿಯಲ್ಲಿ ಹುಬ್ಬಳ್ಳಿ–ಧಾರವಾಡಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ(AAP) ಧಾರವಾಡ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಹುಬ್ಬಳ್ಳಿ–ಧಾರವಾಡದಲ್ಲಿ ವಿಮಾನ ನಿಲ್ದಾಣ, ರೈಲು ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಪರ್ಕ, ಕೈಗಾರಿಕಾ ಪ್ರದೇಶಗಳು ಮತ್ತು ಪ್ರಮುಖ ಶಿಕ್ಷಣ ಸಂಸ್ಥೆಗಳಿದ್ದು, 6,042 ಎಕರೆ ಪ್ರದೇಶದ ಧಾರವಾಡ ಕೈಗಾರಿಕಾ ನೋಡ್ ಯೋಜನೆಯೂ ಇದೆ. ಹೀಗಿರುವಾಗ ಕೈಗಾರಿಕಾ ನಗರಗಳ ಪಟ್ಟಿಯಲ್ಲಿ ಧಾರವಾಡವನ್ನು(DHARWAD) ಕಡೆಗಣಿಸಬಾರದು ಎಂದು AAP ಒತ್ತಾಯಿಸಿದೆ.
ಕೈಗಾರಿಕೆ, ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ಮೂಲಕ ಉತ್ತರ ಕರ್ನಾಟಕದ ಯುವಕರ ವಲಸೆ ತಡೆಯಬೇಕು. Electronics, Automobile, Aerospace, Defence, Clean Mobility ಹಾಗೂ MSME ಕ್ಷೇತ್ರಗಳಲ್ಲಿ ಹೂಡಿಕೆ ಆಕರ್ಷಿಸಬೇಕು ಎಂದು ಪಕ್ಷ ಆಗ್ರಹಿಸಿದೆ.
“ಬೆಂಗಳೂರು ಮಾತ್ರ ಬೆಳೆಯಬೇಕು, ಉತ್ತರ ಕರ್ನಾಟಕ ಕಾಯಬೇಕು ಎಂಬ ಅಭಿವೃದ್ಧಿ ಮಾದರಿ ಇನ್ನು ನಡೆಯುವುದಿಲ್ಲ. ಹುಬ್ಬಳ್ಳಿ–ಧಾರವಾಡಕ್ಕೆ(KIADB) ಕೈಗಾರಿಕಾ ನಗರ ಸ್ಥಾನ ನೀಡುವುದು ಉತ್ತರ ಕರ್ನಾಟಕದ ನ್ಯಾಯಸಮ್ಮತ ಹಕ್ಕು” ಎಂದು AAP ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅವಿನಾಶ ಸದಾನಂದ ಹೇಳಿದ್ದಾರೆ.



