assemblyBJPBREAKING NEWSCITY CRIME NEWSDAVANGEREKukanurL&T

ಹಕ್ಕಿಗಾಗಿ ಮತ್ತೊಂದು ಕ್ರಾಂತಿಯ ಘೋಷಣೆ:ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ!

POWER CITYNEWS: DHARWAD/ನವಲಗುಂದ, ಜು.21: ರೈತರ ಬೆವರಿನ ಬೆಲೆ ಉಳಿಸಲು ಅಗತ್ಯವಿದ್ದರೆ ಯಾವುದೇ ಹೋರಾಟಕ್ಕೂ ಹಿಂದೆ ಸರಿಯುವುದಿಲ್ಲ. ನನ್ನ ದೇಹದಲ್ಲಿ ಉಸಿರಿರುವವರೆಗೂ ರೈತ ಸಮುದಾಯದ ಪರವಾಗಿ ಹೋರಾಟ ಮುಂದುವರಿಯಲಿದೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಘೋಷಿಸಿದರು.

ನವಲಗುಂದದ ಹುತಾತ್ಮ ರೈತ ಬಸಪ್ಪ ಲಕ್ಕುಂಡಿ ಅವರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ ಅವರು, ನವಲಗುಂದದ ಮಣ್ಣು ಸಾಮಾನ್ಯ ಮಣ್ಣಲ್ಲ, ಅದು ರೈತ ಹೋರಾಟದ ಇತಿಹಾಸ ಬರೆದ ‘ರೈತ ಕ್ರಾಂತಿಯ ಪವಿತ್ರ ಭೂಮಿ’ ಎಂದು ಬಣ್ಣಿಸಿದರು.

ಅನ್ನದಾತ ತನ್ನ ಕುಟುಂಬಕ್ಕಾಗಿ ಮಾತ್ರವಲ್ಲ, ಇಡೀ ರಾಜ್ಯದ ಜನರಿಗೆ ಅನ್ನ ನೀಡುವ ಸಂಕಲ್ಪದಿಂದ ಹೋರಾಡಿ ಪ್ರಾಣತ್ಯಾಗ ಮಾಡಿದ ಹುತಾತ್ಮ ರೈತರ ತ್ಯಾಗ ಎಂದಿಗೂ ವ್ಯರ್ಥವಾಗುವುದಿಲ್ಲ. ರೈತರ ಹಕ್ಕುಗಳನ್ನು ರಕ್ಷಿಸುವ ಹೋರಾಟವನ್ನು ಮತ್ತಷ್ಟು ಬಲಿಷ್ಠವಾಗಿ ಮುಂದುವರಿಸಲಾಗುವುದು ಎಂದು ಅವರು ಹೇಳಿದರು.

‘ಎಕರೆಗೆ ₹50 ಸಾವಿರ ಬರ ಪರಿಹಾರ ಘೋಷಿಸಿ’

ಭೀಕರ ಬರಗಾಲದಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದು, ಸರ್ಕಾರ ಕೂಡಲೇ ಪ್ರತಿ ಎಕರೆಗೆ ₹50 ಸಾವಿರ ಬರ ಪರಿಹಾರ ಘೋಷಿಸಿ ರೈತರ ನೆರವಿಗೆ ಬರಬೇಕು ಎಂದು ರಾಜ್ಯ ಸರ್ಕಾರವನ್ನು ಅವರು ಆಗ್ರಹಿಸಿದರು.

ರೈತರ ಮನವಿ ಸ್ವೀಕರಿಸಿ ಮಾತನಾಡಿದ ಮುನೇನಕೊಪ್ಪ, ಸರ್ಕಾರ ರೈತರ ಕಣ್ಣೀರು ಒರೆಸುವ ಕೆಲಸ ಮಾಡಬೇಕು. ರೈತರ ಸಂಕಷ್ಟವನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.

‘ಬೆಳೆವಿಮೆ ರೈತನ ಹಕ್ಕು; ನಿರ್ಲಕ್ಷ್ಯ ಸಹಿಸುವುದಿಲ್ಲ’

ಬೆಳೆವಿಮೆಯ ಹಣ ಪ್ರತಿಯೊಬ್ಬ ಅರ್ಹ ರೈತನಿಗೂ ತಲುಪಲೇಬೇಕು. ಕಂದಾಯ, ಕೃಷಿ, ಸಂಖ್ಯಾಶಾಸ್ತ್ರ ಹಾಗೂ ತೋಟಗಾರಿಕೆ ಇಲಾಖೆಗಳು ಯಾವುದೇ ಲೋಪವಾಗದಂತೆ ನಿಖರ ವರದಿ ಸಲ್ಲಿಸಬೇಕು. ಇಲಾಖೆಗಳ ನಿರ್ಲಕ್ಷ್ಯದಿಂದ ರೈತರಿಗೆ ಅನ್ಯಾಯವಾದರೆ ಅದನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಗುಡುಗಿದರು.

ರೈತರ ಹೊಟ್ಟೆಗೆ ಹೊಡೆಯುವಂತಹ ಯಾವುದೇ ಕ್ರಮವನ್ನು ಬಿಜೆಪಿ ಸಹಿಸುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕಳಸಾ-ಬಂಡೂರಿ ಯೋಜನೆಗೆ ವೇಗ ನೀಡುವ ಭರವಸೆ

ಉತ್ತರ ಕರ್ನಾಟಕದ ಮಹತ್ವಾಕಾಂಕ್ಷಿ ಕಳಸಾ-ಬಂಡೂರಿ ಯೋಜನೆ ಶೀಘ್ರ ಜಾರಿಗೆ ಬರಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿಸಿದ ಮುನೇನಕೊಪ್ಪ, ಯೋಜನೆಗೆ ಅಡ್ಡಿಯಾಗಿರುವ ತಾಂತ್ರಿಕ ಹಾಗೂ ಕಾನೂನು ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

“ಕಳಸಾ-ಬಂಡೂರಿ ನೀರು ಉತ್ತರ ಕರ್ನಾಟಕದ ರೈತರ ಜಮೀನಿಗೆ ಹರಿಯುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ರೈತರ ಬೆನ್ನಿಗೆ ಸದಾ ನಿಲ್ಲುತ್ತೇನೆ” ಎಂದು ಅವರು ಭರವಸೆ ನೀಡಿದರು.

ನೂರಾರು ರೈತರ ಸಮ್ಮುಖದಲ್ಲಿ ರೈತ ಶಕ್ತಿ ಪ್ರದರ್ಶನ

ಕಾರ್ಯಕ್ರಮದಲ್ಲಿ ನೂರಾರು ರೈತರು ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿ ರೈತ ಒಗ್ಗಟ್ಟಿನ ಶಕ್ತಿಯನ್ನು ಪ್ರದರ್ಶಿಸಿದರು.

ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ರೈತ ಮೋರ್ಚಾ ಅಧ್ಯಕ್ಷ ರಾಘವೇಂದ್ರಗೌಡ ಪಾಟೀಲ, ಬಸವರಾಜ ಕುಂದಗೋಳಮಠ, ಶಂಕರಗೌಡ ಬಾಳಗೌಡ್ರ, ಷಣ್ಮುಖ ಗುರಿಕಾರ, ಗಂಗಣ್ಣ ಮನಮಿ, ಬಸಣ್ಣ ಬೆಳವಣಕಿ, ಮಲ್ಲನಗೌಡ ರಾಟಿಮನಿ, ಸಿದ್ದಣ್ಣ ಕಿಟಗೇರಿ, ಸಿದ್ದನಗೌಡ ಪಾಟೀಲ, ಮಹಾದೇವಗೌಡ್ರ ಬಾಳಗೌಡ್ರ, ಅಣ್ಣಪ್ಪ ಬಾಗಿ, ರಾಯನಗೌಡ ಪಾಟೀಲ, ಸಾಯಿಬಾಬಾ ಆನೇಗುಂದಿ, ಎನ್.ಪಿ. ಕುಲಕರ್ಣಿ, ನಿಂಗಯ್ಯ ಬಣ್ಣದನೂಲಮಠ, ಮಂಜು ಇಮ್ಮಡಿ, ಮಂಜು ಅಕ್ಕಿ, ಬಿ.ಎಲ್. ಪೂಜಾರಿ, ಮಲ್ಲನಗೌಡ ಪಾಟೀಲ, ಫಕೀರಪ್ಪ ಜಕ್ಕನ್ನವರ, ಬಸವರಾಜ ಕಾತರಕಿ, ಷಣ್ಮುಖ ಇಂಡಿ, ಮಲ್ಲಿಕಾರ್ಜುನಗೌಡ ಸಂಗನಗೌಡ್ರ, ಅರುಣ ಮೆಣಸಿನಕಾಯಿ, ಆನಂದ ಚವಡಿ, ಮಂಜು ಗಣಿ, ಶಿವಯೋಗಿ ಮಂಟೂರಶೆಟ್ರ, ರೋಹಿತ ಮತ್ತಿಹಳ್ಳಿ, ಸಂತೋಷ ಜೀವನಗೌಡ್ರ, ಸೋಮು ಪಟ್ಟಣಶೆಟ್ಟಿ, ಸದಾನಂದ ಗಾಳಪ್ಪನವರ, ತಾಪಂ ಮಾಜಿ ಸದಸ್ಯ ಮುತ್ತು (ಫಕ್ಕೀರಪ್ಪ) ಚಾಕಲಬ್ಬಿ, ಪ್ರಭು ಬುಳಗಣ್ಣವರ, ಗಂಗಣ್ಣ ದುಂದೂರ, ಮಂಜು ಗುಡೇನಕಟ್ಟಿ, ರಾಜುಗೌಡ ಪಾಟೀಲ ಸೇರಿದಂತೆ ಅಪಾರ ಸಂಖ್ಯೆಯ ರೈತರು ಹಾಗೂ ಮುಖಂಡರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *