BREAKING NEWSPolitical newsUncategorized

ಹುಬ್ಬಳ್ಳಿಯಲ್ಲಿ ಜೂನ್ 22ರಂದು ಕುರುಬ ಸಮಾಜದ ಪೂರ್ವಭಾವಿ ಸಭೆ!

Dakhani

POWER CITYNEWS : ಹುಬ್ಬಳ್ಳಿ: ಕುರುಬ ಸಮಾಜ ಅಭಿವೃದ್ಧಿ ವೇದಿಕೆ–ಕರ್ನಾಟಕ ವತಿಯಿಂದ, ನೂತನವಾಗಿ ಅವಿರೋಧವಾಗಿ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯ ಮಾ. ನಾಗರಾಜ್ ಅವರ ರಾಜ್ಯಮಟ್ಟದ ಅಭಿನಂದನಾ ಸಮಾರಂಭದ ಸಿದ್ಧತೆ ಕುರಿತು ಪೂರ್ವಭಾವಿ ಸಭೆಯನ್ನು ಜೂನ್ 22ರಂದು ಆಯೋಜಿಸಲಾಗಿದೆ.
ನಗರದ ಜೆ.ಸಿ. ನಗರದಲ್ಲಿರುವ ಅನಂತ ರೆಸಿಡೆನ್ಸಿಯಲ್ಲಿ ಸೋಮವಾರ ಬೆಳಿಗ್ಗೆ 11:00 ಗಂಟೆಗೆ ಸಭೆ ಜರುಗಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ಕುರುಬ ಸಮಾಜದ ಮುಖಂಡರು, ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಮಾಜ ಬಾಂಧವರು ಭಾಗವಹಿಸಲಿದ್ದಾರೆ.
ಮುಂದೆ ನಡೆಯಲಿರುವ ರಾಜ್ಯಮಟ್ಟದ ಅಭಿನಂದನಾ ಸಮಾರಂಭದ ರೂಪುರೇಷೆ, ಸಂಘಟನೆ, ಜವಾಬ್ದಾರಿ ಹಂಚಿಕೆ ಹಾಗೂ ಕಾರ್ಯಕ್ರಮದ ಯಶಸ್ವಿ ಆಯೋಜನೆ ಕುರಿತು ಈ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ತೀರ್ಮಾನಿಸಲಾಗುವುದು. ಆದ್ದರಿಂದ ಸಮಾಜದ ಎಲ್ಲಾ ಮುಖಂಡರು ಮತ್ತು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಅಗತ್ಯ ಸಲಹೆ–ಸೂಚನೆಗಳನ್ನು ನೀಡಬೇಕು ಎಂದು ಕಾರ್ಯಕ್ರಮದ ಸಂಚಾಲಕ ರವೀಂದ್ರನಾಥ್ ದಂಡಿನ ಹಾಗೂ ಸಂಯೋಜಕ ಮಂಜುನಾಥ್ ಮಕ್ಕಳಗೇರಿ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

DAKHANI

Related Articles

Leave a Reply

Your email address will not be published. Required fields are marked *