ಯಾರ್ದೋ “ಸೈಟೂ” ಯಲ್ಲಮ್ಮನ ಜಾತ್ರೆ!
R D

POWER CITY NEWS :ಹುಬ್ಬಳ್ಳಿ/ಪವರ್ ಸಿಟಿ ನ್ಯೂಸ್ ಸುದ್ದಿ: ಅವಳಿನಗರದಲ್ಲಿನ ಖಾಲಿ ಸೈಟ್‌ಗಳಿಗೆ ರಾತ್ರೋ ರಾತ್ರಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಲಕ್ಷಾಂತರ ರೂ.ಗಳ ಮೌಲ್ಯದ ಆಸ್ತಿಗಳನ್ನು ಸಲಿಸಾಗಿ ದೋಚುತ್ತಿರುವ ಭೂಗಳ್ಳರು ಫುಲ್ ಆಕ್ಟೀವ್ ಆಗಿದ್ದಾರೆ.
ಇಂತಹ ಪ್ರಕರಣಗಳ ಬೆನ್ನುಹತ್ತಿರುವ “ಪವರ್ ಸಿಟಿ ನ್ಯೂಸ್” ತಂಡ ಮೊದಲಿಗೆ ಕೆಲವೊಂದು ಅನುಮಾನಸ್ಪದ ಖಾಲಿ ಸೈಟ್‌ಗಳಲ್ಲಿ ನಿರ್ಮಾಣವಾಗುತ್ತಿರುವ ಹಾಗೂ ನಿರ್ಮಾಣವಾಗಿ ನಿಂತಿರುವ ಕಟ್ಟಡಗಳ ದಾಖಲೆಗಳನ್ನು ಪರಿಸಿಲಿಸಿದಾಗ ಕಂಡುಬರುವ ಸಾಲು ಸಾಲು ನಕಲಿ ದಾಖಲೆಗಳು.
ಈಗಾಗಲೇ ಖೊಟ್ಟಿ ದಾಖಲೆಗಳನ್ನ ಸೃಷ್ಟಿಸಿ ಲಕ್ಷಾಂತರ ರೂಪಾಯಿಗಳನ್ನ ಲಪಟಾಯಿಸಿದ್ದ ಭೂಗಳ್ಳರನ್ನ ಉಪನಗರ ಠಾಣೆ ಪೊಲೀಸರು ಒದ್ದು ಜೈಲಿಗಟ್ಟಿದ್ದ 20ಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಆದರೆ ಜೈಲಿಗೆ ಹೋಗಿ ಹೊರಬಂದರು ಸಹ ಇವರಲ್ಲಿ ಯಾವೊಬ್ಬ ಖದಿಮನು ಕೂಡ ಪಾಠ ಕಲಿಯದೆ ಮತ್ತದೆ ಹಳೆ ಕಸಬು ಶುರು ಹಚ್ಕೊಂಡಿದ್ದಾರೆ.
ಇದೀಗ ದುಂಡು ಮುಖದ ಶೋಕಿಲಾಲ ಇ ಹಿಂದೆಯೂ ಜೈಲು ಕಂಡುಬಂದರು ತನ್ನ ಹಳೆ ಚಾಳಿ ಮುಂದು ವರೆಸಿದ್ದಾನೆ.
ಒಂದು ಸೈಟ್‌ಗೆ ಬೇಕಾದ ಎಲ್ಲ ದಾಖಲೆಗಳನ್ನು ಯಥೆಚ್ಛವಾಗಿ ಖೊಟ್ಟಿ ಮಾಡಿ ಅವುಗಳಿಗೆ ಅಧಿಕೃತ ವಾಗಿ ಸರ್ಕಾರಿ ಮೊಹರು ಒತ್ತಿಸ್ತಾನೆ ಅಂದ್ರೆ ಈತನ ಕೈಚಳಕಕ್ಕೆ ಕೆಲವು ಹಾಲಿ ಹಾಗೂ ನಿವೃತ್ತ ಸರ್ಕಾರಿ ಅಧಿಕಾರಿಗಳ ಬೆಂಬಲವೂ ಇದೆ ಎನ್ನುವ ಗುಟ್ಟು ಇದೀಗ ರಟ್ಟಾಗಿದೆ.
ಹಾಗಾದ್ರೆ ಹೆಗೇಲ್ಲ ಇ ಖೊಟ್ಟಿ ದಾಖಲೆಗಳು ಸೃಷ್ಟಿ ಗೊಂಡವು? ಯಾವೆಲ್ಲ ಸರ್ಕಾರಿ ಅಧಿಕಾರಿಗಳು ಅಧಿಕೃತವಾಗಿ ಮೊಹರು ಒತ್ತಿ ಕೊಟ್ಟಿದ್ದಾರೆ? ದುಂಡು ಮುಖದ ಶೋಕಿಲಾಲನ ಪಡು ರಾಜಕೀಯ ವ್ಯಕ್ತಿಗಳ ಹೆಸರು ಬಳಸಿಕೊಂಡದ್ಹೇಗೆ ? ಈತನ ಹಿಂದಿನ ಪ್ರಕರಣದಲ್ಲಿ ಪೋಲಿಸರು ಯಾವೇಲ್ಲ ಮಹಾನುಭಾವರನ್ನ ಠಾಣೆಗೆ ಬರಹೇಳಿದ್ದರೋ ಅವೆಲ್ಲವನ್ನ “ಹುಬ್ಬಳ್ಳಿ ಟೂ ಸೌದತ್ತಿ”ವಿಶೇಷ ಕಾರ್ಯಕ್ರಮದಲ್ಲಿ ವಿಕ್ಷಿಸಿ!
