
POWER CITY NEWS : HUBBALLI ಹುಬ್ಬಳ್ಳಿ : ಅವಳಿನಗರದ ಸಾರ್ವಜನಿಕ ವಲಯದಲ್ಲಿನ ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕಲು ಅವಳಿನಗರದ ಪೊಲೀಸರು ಹಗಲಿರುಳು ಶ್ರಮಿಸುತ್ತಿರುವ ಕಾರ್ಯ ಒಂದೆಡೆಯಾದರೆ ಇತ್ತ ಭೂಗಳ್ಳರು ಮಾತ್ರ ಫುಲ್ ಆಕ್ಟೀವ್ ಆಗಿದ್ದಾರೆ.
ಅದ್ರಲ್ಲೂ ಯಾರದೋ ಆಸ್ತಿಯನ್ನ ಇನ್ಯಾರದೋ ಹೆಸರಿಗೆ ವರ್ಗಾಯಿಸಲು ಬೇಕಾಗುವ ದಾಖಲೆಗಳನ್ನ ಕಿಂಚಿತ್ತೂ ಕಾನೂನು ಭಯವಿಲ್ಲದೆ ಕಾಪಿ ಎಡಿಟ್ ಮಾಡುತ್ತಿರುವ ಖತರ್ನಾಕ್ ಗ್ಯಾಂಗ್‌ನ ಕರಾಳ ಸತ್ಯವನ್ನು ನಿಮ್ಮ “ಪವರ್ ಸಿಟಿ ನ್ಯೂಸ್” ಬಹಿರಂಗ ಪಡಿಸುತ್ತಿದೆ. ಇದಕ್ಕೆ ಬೇಕಾದ ಎಲ್ಲವನ್ನೂ ತನ್ನದೆ ಆದ ತನಿಖಾ ವರದಿಯನ್ನು ಸಿದ್ದಪಡಿಸಿದೆ.
ಇದರಲ್ಲಿ ಭೂಗಳ್ಳತನಕ್ಕೆ ಬಳಸಲಾದ ದಾಖಲೆಗಳು,ವ್ಯಕ್ತಿ, ಜಮೀನಿನ ಕುರಿತು ಇಲಾಖೆಗೆ ನೀಡಿರುವ ನಕಲಿ ಮಾಹಿತಿ ಅಷ್ಟೇ ಅಲ್ಲದೆ ತನ್ನದೆ ಸಂಭಂದಿಕರಿಗೆ ಆಮಿಷ ನೀಡಿರುವ ಹಾಗೂ ಕಾನೂನು ನಿಯಮಗಳೊಂದಿಗೆ ರಾಜಾರೋಷವಾಗಿ ಆಟವಾಡಲು ನಿಂತಿರುವ ಈ ಅಬೇಪಾರಿ ಹುಬ್ಬಳ್ಳಿಯ ದುಂಡು ಮುಖದ ಶೋಕಿಲಾಲನ ಕುರಿತು ಸಂಪೂರ್ಣ ವರದಿಗಾಗಿ ಕಾದು ನೋಡಿ!
ಇದು “ಪವರ್ ಸಿಟಿ ನ್ಯೂಸ್” ಲೋಕಲ್ ಅಲ್ವೋ ಭಂಡ – “ಸತ್ಯ ಸದಾಕಾಲ”