assemblyBREAKING NEWSHubballiLife StylePolitical newsTWINCITY
ನ್ಯಾಯಾಲಯಕ್ಕೆ ಹಾಜರಾದ ಅಜಿತ್ ಹನಮಕ್ಕನವರ್!
POWER CITY

POWER CITY NEWS :ಬೆಂಗಳೂರು:ಚಿಕ್ಕನಾಯಕನಹಳ್ಳಿ/ಕನ್ನಡದ ಹೆಸರಾಂತ ಸುದ್ದಿವಾಹಿನಿ ಏಷ್ಯಾನೆಟ್ ಸುವರ್ಣ ನ್ಯೂಸ್ ವಾಹಿನಿಯ ವಿರುದ್ಧ ಡಾ.ಪ್ರೇಮಾಕುಮಾರಿ ಎಂಬುವರು ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿ ದಂತೆ, ಏಷ್ಯಾನೆಟ್-ಸುವರ್ಣ ನ್ಯೂಸ್‌ನ ಪ್ರಧಾನ ಸಂಪಾದಕರಾದ ಅಜಿತ್ ಹನುಮಕ್ಕನವರ್ ಅವರು ಬೆಂಗಳೂರಿನ ಚಿಕ್ಕನಾಯಕನಹಳ್ಳಿಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ (JMFC) ನ್ಯಾಯಾಲಯದ ಮುಂದೆ ಹಾಜರಾದರು. ಇ ಹಿಂದೆ 2015ರಲ್ಲಿ ನ್ಯಾಯಾಲಯ ಹೊರಡಿಸಿದ್ದ ವಾರಂಟ್‌ಗೆ ಪ್ರತಿಕ್ರಿಯೆಯಾಗಿ ಅಜಿತ್ ಹನುಮಕ್ಕನವರ್ ಅವರು ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಶ್ರೀನಾಥ್ ಅವರ ಎದುರು ಹಾಜರಾಗಿದ್ದಾರೆ.
ಹಾಜರಾತಿಯನ್ನು ದಾಖಲಿಸಿಕೊಂಡ ನಂತರ, ಮ್ಯಾಜಿಸ್ಟ್ರೇಟ್‌ರವರು ಜಾಮೀನು ಮಂಜೂರು ಮಾಡಿ ಪ್ರಕರಣದ ವಿಚಾರಣೆಯನ್ನು ಮುಂದೂಡಿದರು. ಅಜಿತ್ ಅವರು ಈಗಾಗಲೇ, 2 ಲಕ್ಷ ರೂ. ಮೊತ್ತದ ಬಾಂಡ್ ಮತ್ತು ಸಮಾನ ಮೊತ್ತಕ್ಕೆ ಶ್ಯೂರಿಟಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.