BREAKING NEWSCITY CRIME NEWSL&TTechTWINCITY

ಕಾಲೇಜು ಕ್ಯಾಂಪಸ್‌ನಲ್ಲಿ ರಾಜಕೀಯ ಬೇಡ: ಎಬಿವಿಪಿ ಎಚ್ಚರಿಕೆ!

DAKHANI

POWER CITY NEWS :ಹುಬ್ಬಳ್ಳಿ: ಭಾರತ್ ಜೋಡೋ(jodo bharat) ಯುವ ಸಂಘಗಳ ನೋಂದಣಿಗೆ ಯುವಕರ ಮೇಲೆ ಒತ್ತಡ ಹೇರುತ್ತಿರುವುದು ಖಂಡನೀಯ ಎಂದು ಎಬಿವಿಪಿ(ABVP) ರಾಜ್ಯ ಕಾರ್ಯದರ್ಶಿ ದರ್ಶನ ಹೆಗಡೆ (HEAGADE)ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸಕ್ತ ಯುವಕರಿಗೆ ಮಾಹಿತಿ ನೀಡಿ ನೋಂದಣಿ ಮಾಡಿಸುವ ಬದಲು ಒತ್ತಡ ಹೇರುತ್ತಿರುವುದು ಸರಿಯಲ್ಲ. ಸರ್ಕಾರಿ ವಸತಿ ನಿಲಯಗಳಲ್ಲಿ ನೋಂದಣಿ(register) ಮಾಡದಿದ್ದರೆ ಊಟ ನೀಡುವುದಿಲ್ಲ ಎಂಬ ರೀತಿಯ ಒತ್ತಡದ ಆರೋಪಗಳು ಕೇಳಿಬರುತ್ತಿವೆ ಎಂದರು.
ಕಾಲೇಜು ಆವರಣಗಳನ್ನು ರಾಜಕೀಯ ಚಟುವಟಿಕೆಗಳಿಗೆ ಬಳಸಬಾರದು. ಕಾಂಗ್ರೆಸ್(congress) ಕಾರ್ಯಕರ್ತರು ಕಾಲೇಜುಗಳಲ್ಲಿ ಪ್ರಚಾರ ನಡೆಸುತ್ತಿರುವುದನ್ನು ಎಬಿವಿಪಿ ವಿರೋಧಿಸುತ್ತದೆ. ಈ ಸಮಸ್ಯೆಗಳ ವಿರುದ್ಧ ಸೆ.8ರಂದು ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಎಬಿವಿಪಿ ಕೇಂದ್ರೀಯ ಕಾರ್ಯಸಮಿತಿ ಸದಸ್ಯ ಸಚಿನ ಕುಳಗೇರಿ, ಕೆಪಿಎಸ್ಸಿ (KPSC)ಅಕ್ರಮದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಕೆಪಿಎಸ್ಸಿ ಪ್ರಕರಣದಲ್ಲಿ ಸರ್ಕಾರದ(GOVT) ಹೇಳಿಕೆಗಳು ಗೊಂದಲ ಮೂಡಿಸುತ್ತಿದ್ದು, ಎಲ್ಲಾ ಆರೋಪಿಗಳು ಹಾಗೂ ಅಧಿಕಾರಿಗಳ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದರು.
ರಾಜ್ಯಪಾಲರನ್ನು ಭೇಟಿಯಾಗಿ ಸಿಬಿಐ(CBI) ತನಿಖೆಗೆ ಒತ್ತಾಯಿಸುವುದಾಗಿ ಹಾಗೂ ಮುಂದಿನ ಕಾನೂನು ಹೋರಾಟದ ಕುರಿತು ತಜ್ಞರೊಂದಿಗೆ ಚರ್ಚಿಸುವುದಾಗಿ ಎಬಿವಿಪಿ ತಿಳಿಸಿದೆ.

Related Articles

Leave a Reply

Your email address will not be published. Required fields are marked *