BELAGAVIBREAKING NEWSCITY CRIME NEWSDHARWADTWINCITY
ಅವಳಿನಗರಕ್ಕೆ ಹೊಸ ‘ಬಾಸ್’: ಎನ್. ಶಶಿಕುಮಾರ್ ವರ್ಗಾವಣೆ!
Dakhani

POWER CITY NEWS: ಅವಳಿನಗರದ ಪೊಲೀಸ್ ಕಮಿಷನರ್ಎನ್. ಎನ್. ಶಶಿಕುಮಾರ್ ವರ್ಗಾವಣೆ: ಹೊಸಹುದ್ದೆ ತೋರಿಸದೆ ಸರ್ಕಾರ ಆದೇಶ!
ಹುಬ್ಬಳ್ಳಿ:HUBBALLI
ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದ ಎನ್. ಶಶಿಕುಮಾರ್ (IPS) ಅವರನ್ನು ರಾಜ್ಯ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ವಿಶೇಷವೆಂದರೆ, ವರ್ಗಾವಣೆಗೊಂಡಿರುವ ಎನ್. ಶಶಿಕುಮಾರ್ ಅವರಿಗೆ ಸರ್ಕಾರ ಯಾವುದೇ ಹೊಸ ಹುದ್ದೆಯನ್ನು (ಸ್ಥಳ ನಿಯೋಜನೆ) ತೋರಿಸಿಲ್ಲ. ಅವರ ಮುಂದಿನ ಪೋಸ್ಟಿಂಗ್ ಕುರಿತು ಶೀಘ್ರದಲ್ಲೇ ಆದೇಶ ಹೊರಬೀಳುವ ಸಾಧ್ಯತೆಯಿದೆ.
ನೂತನ ಪೊಲೀಸ್ ಕಮಿಷನರ ಆಗಿ ಭೂಷಣ್ ಭೋರ್ಸೆ ನೇಮಕ:
ಎನ್. ಶಶಿಕುಮಾರ್ ಅವರ ನಿರ್ಗಮನದಿಂದ ತೆರವಾದ ಜಾಗಕ್ಕೆ ಬೆಳಗಾವಿ ನಗರದ ಪೊಲೀಸ್ ಕಮಿಷನರ್ ಆಗಿದ್ದ ಬೋರ್ಸೆ ಭೂಷಣ್ ಗುಲಾಬರಾವ್ (IPS) ಅವರನ್ನು ಹುಬ್ಬಳ್ಳಿ-ಧಾರವಾಡ ಅವಳಿ ನಗರದ ನೂತನ ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡಿ ಸರ್ಕಾರ ಆದೇಶಿಸಿದೆ.



