assemblyBELAGAVIBREAKING NEWSUT KHADARVINAYKULKARNIರಾಜಕೀಯರಾಜ್ಯರಾಷ್ರ್ಟೀಯ

ಅಧಿವೇಶನದಲ್ಲಿ ಧ್ವನಿ ಎತ್ತಿದ“ವಿನಯ್ ಕುಲಕರ್ಣಿ”ಯು ಟಿ ಖಾದರ್ ಹೇಳಿದ್ದೇನು?

POWER CITYNEWS

POWER CITYNEWS :BELAGAVI

ಬೆಳಗಾವಿ:
ಧಾರವಾಡ ಗ್ರಾಮೀಣ ಶಾಸಕರಾದ ವಿನಯ್ ಕುಲಕರ್ಣಿ ಅವರು ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟದ ಸಮಗ್ರ‌ ಅಭಿವೃದ್ದಿ ಬಗ್ಗೆ ಚರ್ಚಿಸಿದ್ರು.
ಉತ್ತರ ಕರ್ನಾಟಕದ ಪ್ರಾಥಮಿಕ ಆರೋಗ್ಯ ಕೇಂದ್ರ ಆಸ್ಪತ್ರೆಗಳಲ್ಲಿ ಸರಿಯಾಗಿ ವೈದ್ಯರಿಲ್ಲಾ. ವಿದ್ಯಾಕಾಶಿ ಎಂದೆ ಪ್ರಸಿದ್ಧವಾಗಿರುವ ಧಾರವಾಡಕ್ಕೆ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬರುವುದು ಸಹಜ. ಆದರೆ ಅವರಿಗೆ ಸರಿಯಾದ ರೀತಿ ಹಾಸ್ಟೆಲ್ ಸಿಗುತ್ತಿಲ್ಲ.
ಹೊರ ಜಿಲ್ಲೆಯಿಂದ ಬರುವ ಕಡು ಬಡುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಿ ಕೊಡಬೇಕು ಮತ್ತು ಅತಿಯಾದ ಡೊನೇಷನ್ ವ್ಯವಸ್ಥೆ ರದ್ದು ಪಡಿಸಿ ಸರಕಾರದಿಂದ ಅದೇಶ ಹೋರಡಿಸಬೇಕು ಎಂದರು.

subscribe channel


ಇನ್ನೂ ಹಲವಾರು ಸರಕಾರಿ ಕಾಲೇಜು ಅವ್ಯವಸ್ಥೆ ಸರಿ ಮಾಡಬೇಕೆಂಬುದರ ಬಗ್ಗೆ ಪ್ರಸ್ತಾಪಿಸಿದ್ರು.‌ಗ್ರಾಮೀಣ ಭಾಗದಲ್ಲಿರುವ ಟಾಟಾ ಮಾರ್ಕೊಪೊಲೊದಲ್ಲಿ ಕೆಲಸ ಮಾಡುವ ನಮ್ಮ ಸ್ಥಳೀಯ ಜನರಿಗೆ ನ್ಯಾಯ ಸಿಗುತ್ತಿಲ್ಲಾ. ತುಪ್ಪರಿ ಹಳ್ಳ ಹಾಗೂ ಬೆಣ್ಣಿ ಹಳ್ಳಗಳ ಸಮಸ್ಯೆ ಹಾಗೂ ನಮ್ಮ ಧಾರವಾಡ ಜಿಲ್ಲೆಯ ಕೆರೆಗಳ ಸಂಪೂರ್ಣ ಅಭಿವೃದ್ಧಿಯ ಸುಧಾರಣೆ ಬಗ್ಗೆ ಸಭಾ ಅಧ್ಯಕ್ಷರಿಗೆ ವಿನಂತಿಸಿದರು.

ಕಬ್ಬಿಗೆ ಉತ್ತಮ ಬೆಂಬಲ ಬೆಲೆ ಘೋಷಣೆ ಮಾಡಬೇಕೆಂದು ಇದೇ ಸಂದರ್ಭದಲ್ಲಿ ಸರ್ಕಾರಕ್ಕೆ ಶಾಸಕ ವಿನಯ ಕುಲಕರ್ಣಿ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

Related Articles

Leave a Reply

Your email address will not be published. Required fields are marked *

Back to top button