BREAKING NEWSCITY CRIME NEWSDHARWADರಾಜ್ಯ

ಹಳೆ ದ್ವೇಷಕ್ಕೆ ಮಚ್ಚಿನಿಂದ ಕೊಚ್ಚಿದ ಹಂತಕರು!

Murder in dharwad!

POWERCITY NEWS : ಧಾರವಾಢ

:ವಿದ್ಯಾಕಾಶಿ ಧಾರವಾಡದಲ್ಲಿ ಜನನಿ ಬಿಡ ಪ್ರದೇಶದಲ್ಲಿ ನಿರ್ಭಯವಾಗಿ ನಡುರಸ್ತೆಯಲ್ಲಿ ಮಾರಕಾಸ್ತ್ರ ಸಜ್ಜಿತ ತಂಡವೊಂದು ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿದ್ದಾರೆ.
ನಗರದ ಕೊಪ್ಪದ ಕೇರಿ ಬಳಿಯ ಶಿವಾಲಯ ದೇವಸ್ಥಾನದ ಎದುರು ಘಟನೆ ನಡೆದಿದೆ.

ಕೊಲೆಗಿಡಾದ ವ್ಯಕ್ತಿಯನ್ನು ನಿಂಗಪ್ಪ ಹಡಪದ(60).ಮೂಲತಃ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ನಿವಾಸಿಯಾಗಿದ್ದರು ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅವಳಿನಗರದ ಆಯುಕ್ತರು ಘಟನೆಯ ಕುರಿತು ಸ್ಥಳ ಪರಿಸಿಲಿಸಿ ಕೃತ್ಯವೆಸಗಿದ ಆರೋಪಿಗಳ ಪತ್ತೆಗಾಗಿ ಕಾನೂನು ಕ್ರಮ ಜರುಗಿಸಿದ್ದಾರೆ.

ಇತ್ತೀಚೆಗಷ್ಟೆ ಕೊಲೆಯಾದ ವ್ಯಕ್ತಿ ಹಾಗೂ ಆತನ ಸಹೋದರರ ನಡುವೆ ಆಸ್ತಿ ವಿಚಾರವಾಗಿ ವೈಮನಸ್ಸು ಮೂಡಿದ್ದರಿಂದ ಹೆಬ್ಬಳ್ಳಿಯಿಂದ ಧಾರವಾಡಕ್ಕೆ ಬಂದು ನೆಲೆಸಿದ್ದರು ಎನ್ನಲಾಗಿದೆ. ಆದರೆ ನಿನ್ನೆ ನಡೆದ ನಿಂಗಪ್ಪ ಹಡಪದನ ಕೊಲೆಗೆ‌ ಆಸ್ತಿ ವಿವಾದದ ಹಿನ್ನೆಲೆಯೆ ಕಾರಣವಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.

Related Articles

Leave a Reply

Your email address will not be published. Required fields are marked *

Back to top button