
POWERCITY NEWS: GADAG
ಗದಗ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬನ ಭೀಕರ ಹತ್ಯೆ ನಡೆದಿದ್ದು ನಂತರ ಕತ್ತು ಕತ್ತರಿಸಿ ರುಂಡ ಹೊತ್ತೊಯ್ದಿದ್ದಾರೆ.
ಗದಗ ತಾಲೂಕಿನ ತಿಮ್ಮಾಪೂರ ಗ್ರಾಮದ ಮೆಣಸಿನಕಾಯಿ ಹೊಲದಲ್ಲಿ ನಿನ್ನೆ ರಾತ್ರಿ ದುಷ್ಕರ್ಮಿಗಳು ಮೆಣಸಿನಕಾಯಿಯ ಬೆಳೆಯನ್ನು ಕಾಯಲು ಗುಡಿಸಲಿನಲ್ಲಿ ಇರುತ್ತಿದ್ದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆಮಾಡಲಾಗಿದೆ. ಅಷ್ಟೇ ಅಲ್ಲದೆ ಮಾರಾಕಾಸ್ತ್ರಗಳಿಂದ ಕತ್ತು ಕತ್ತರಿಸಿ ರುಂಡದೊಂದಿಗೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಕೊಲೆಗೀಡಾದ ವ್ಯಕ್ತಿಯನ್ನು ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಾಳೆಕೊಪ್ಪ ಗ್ರಾಮದ ನಿವಾಸಿ ಸಣ್ಣ ಹನಮಂತಪ್ಪ ವಜ್ರದ (45) ಎಂದು ತಿಳಿದು ಬಂದಿದೆ.ಆದರೆ ಇಷ್ಟೊಂದು ಕ್ರೂರವಾಗಿ ಕೊಲೆಗೈದಿರುವುದರ ಹಿಂದಿನ ಕಾರಣ ಮಾತ್ರ ಇನ್ನು ತಿಳಿದುಬಂದಿಲ್ಲ.
ಇನ್ನೂ ಎಂದಿನಂತೆ ಹೊಲದತ್ತ ಬಂದಿತ್ತ ಜಮಿನು ಮಾಲಿಕ ಗುಡಿಸಲಿನ ಬಳಿ ಬಂದು ನೋಡಿದಾಗ ರುಂಡ ವಿಲ್ಲದ ದೇಹ ಕಂಡು ಬೆಚ್ಚಿಬಿದ್ದಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಗದಗ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆದರೆ ಈ ಭೀಕರ ಕೊಲೆಯಿಂದಾಗಿ ಸುತ್ತಮುತ್ತಲಿನ ರೈತರು ಭಯಭಿತರಾಗಿದ್ದಾರೆ.ಗದಗ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು ಪೊಲಿಸರು ಆರೋಪಿಗಳ ಪತ್ತೆಗಾಗಿ ಜಾಲಬಿಸಿದ್ದಾರೆ.
Gadag
