assemblyBELAGAVIBHAIRATI SURESHBJPBREAKING NEWSDHARWADJDSL&TPolitical news

“L&T”ನೀರು ಸರಬರಾಜು ಕಂಪನಿಗೆ ಬಿಸಿ ಮುಟ್ಟಿಸಿದ ಸಚಿವ : ಭೈರತಿ ಸುರೇಶ!

Political news!

POWERCITY NEWS : HUBBALLI

ಹುಬ್ಬಳ್ಳಿ/ಬೆಳಗಾವಿ: ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವರಾದ ಶ್ರೀ ಬಿ.ಎಸ್. ಸುರೇಶ(ಬೈರತಿ) ಅವರ ಅಧ್ಯಕ್ಷತೆಯಲ್ಲಿ ನಡೆದ ವಿಶ್ವಬ್ಯಾಂಕ್ ನರೆವಿನ “ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆ” (KUWSMP) ಪ್ರಗತಿ ಪರಿಶೀಲನಾ ಸಭೆಯು ದಿನಾಂಕ 11-12-2023 ರಂದು ‌ಸುವರ್ಣ ವಿಧಾನ ಸೌಧ, ಬೆಳಗಾವಿಯಲ್ಲಿ ಜರುಗಿತು.

ಇ ವೇಳೆ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ಜನವಸತಿ ಪ್ರದೇಶಗಳಲ್ಲಿ ನಿರಂತರ ಕುಡಿಯುವ ನೀರು ಸರಬರಾಜು ಮಾಡುವ ಕಾರ್ಯವನ್ನು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಮೂಲಕ ಎಲ್ ಅಂಡ್‌ ಟಿ ಸಂಸ್ಥೆ ಗುತ್ತಿಗೆ ಪಡೆದಿದೆ.ಆದರೆ ಸಮರ್ಪಕವಾಗಿ ಕೆಲಸ ನಿರ್ವಹಿಸದ ಕಾರಣ ಸಚಿವರಾದ ಶ್ರೀ ಬೈರತಿ ಸುರೇಶ ಅವರು ಎಲ್ ಎಂಡ್ ಟಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಹೆಸರಿಗಷ್ಟೆ ದೊಡ್ಡ ಸಂಸ್ಥೆ, ಆದರೆ ಕಾಮಗಾರಿಗಳು ಮಾತ್ರ ಕಳಪೆ ಮಟ್ಟದ್ದಾಗಿದೆ. ಅದನ್ನು ಸರಿಪಡಿಸುವ ಕೆಲಸ ಆಗಬೇಕು ಎಂದು ಸಚಿವರು ಖಡಕ್ ಧ್ವನಿಯಲ್ಲೆ ಎಚ್ಚರಿಸಿದರು.

ಕಾಮಗಾರಿಗಳು ಗುಣಮಟ್ಟ ದಿಂದ ಕೂಡಿದರೆ ಮಾತ್ರ ಬಾಕಿ ಇರುವ ಬಿಲ್ ಅನ್ನು ಪಾವತಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಲ್ಕು ತಿಂಗಳಾದರೂ ಪೈಪ್ ಲೈನ್ ಹಾಕಲ ಸಾಧ್ಯವಾಗದಿರಲೂ ಕಾರಣವೇನು ಎಂದು ಪ್ರಶ್ನಿಸಿದ ಸಚಿವರು ಸಮಸ್ಯೆ ಇದ್ದಲ್ಲಿ ತಿಳಿಸಿ ಎಂದು ಸೂಚಿಸಿದರು. ಅದಕ್ಕೆ ಉತ್ತರಿಸಿದ ಎಲ್ ಅಂಡ್‌ ಟಿ ಸಂಸ್ಥೆಯವರು ಇದೇ ತಿಂಗಳ 22ರ ಒಳಗೆ ಪೈಪ್ ಗಳು ಬರಲಿದೆ ಎಂದಾಗ, ಅದರ ಮೇಲೆ ನಿಗಾ ವಹಿಸಲು ಅಧಿಕಾರಿಗಳಿಗೆ ಶ್ರೀ ಬೈರತಿ ಸುರೇಶ ಅವರು ಸೂಚಿಸಿದಲ್ಲದೆ, ಇದೇ ಶನಿವಾರ ನಮ್ಮ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಅಳವಡಿಸಿರುವ ಕಳಪೆ ಗುಣಮಟ್ಟದ ಪೈಪ್ ಗಳನ್ನು ತೆಗೆದು ಉತ್ತಮ ಗುಣಮಟ್ಟದ ಪೈಪ್ ಗಳನ್ನು ಅಳವಡಿಸಲು ಗುತ್ತಿಗೆ ಪಡೆದ ಸಂಸ್ಥೆಗೆ ತಾಕೀತು ಮಾಡಿದರು.

ಮತ್ತೆ ಒಂದು ತಿಂಗಳಲ್ಲಿ ಸಭೆ ‌ನಡೆಸಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಲಾಗುತ್ತದೆ. ನಡೆದಿರುವ ಕಾಮಗಾರಿಯಲ್ಲಿ ಮತ್ತೆ ಕಳಪೆ ಕಂಡಲ್ಲಿ ಕ್ರಮ ಜರುಗಿಸುವ ಎಚ್ಚರಿಕೆಯನ್ನು ಶ್ರೀ ಬೈರತಿ ಸುರೇಶ ಅವರು ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಮೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಿಧಾನ ಸಭಾ ಕ್ಷೇತ್ರದ ಶಾಸಕರುಗಳಾದ ಅಲ್ಲಮಪ್ರಭು ಪಾಟೀಲ, ಎನ್.ಹೆಚ್. ಕೋನರೆಡ್ಡಿ, ಅಬ್ಬಯ್ಯ GC ಪ್ರಸಾದ್, ವಿನಯ್ ಕುಲಕರ್ಣಿ, ಅಭಯ್ ಪಾಟೀಲ, ಮಹೇಶ್ ತೆಂಗಿನಕಾಯಿ ಸಹ ಎಲ್ ಅಂಡ್‌ ಟಿ ಸಂಸ್ಥೆ ನಡೆಸಿರುವ ಕಾಮಗಾರಿ ತೃಪ್ತಿ ತಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

*ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಎಂ.ಎನ್. ಅಜಯ್ ನಾಗಭೂಷಣ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ‌ವ್ಯವಸ್ಥಾಪಕ ನಿರ್ದೇಶಕರಾದ ‌ದೀಪ ಚೋಳನ್, ಪೌರಾಡಳಿತ ನಿರ್ದೇಶನಾಲಯ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ, ಕೆಯುಐಡಿಎಫ್ಸಿ ಜಂಟಿ ನಿರ್ದೇಶಕ ‌ಲಕ್ಷ್ಮೀಕಾಂತ ರೆಡ್ಡಿ, ಬೆಳಗಾವಿ, ಹುಬ್ಬಳ್ಳಿ -ಧಾರವಾಡ ಮತ್ತು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button