Uncategorized

ಬರ್ಬರ ಕೊಲೆಗೆ ಸಾಕ್ಷಿಯಾಯ್ತು ಕಾಲೇಜ್ ಕ್ಯಾಂಪಸ್!

POWER CITYNEWS : HUBBALLI

ಹುಬ್ಬಳ್ಳಿ : ಯುವತಿಯೊರ್ವಳನ್ನ ಹಾಡಹಗಲೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಅವಳಿನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಬಿವಿಬಿ ಕಾಲೆಜ್ ಕ್ಯಾಂಪಸ್ ನಲ್ಲಿ ಇಂದು ನಡೆದಿದೆ.

ಘಟನೆಯಲ್ಲಿ ಇರಿತಕ್ಕೊಳಗಾದ ಯುವತಿಯನ್ನು ನೇಹಾ ನಿಂರಂಜನ್ ಹಿರೇಮಠ ಎಂದು ಗುರುತಿಸಲಾಗಿದೆ.ಎಮ್‌ಸಿ‌ಎ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ನೇಹಾ ಕೆಲವು ದಿನಗಳ ಹಿಂದಿನಿಂದ ಆಕೆಯ ಗೆಳೆಯ ಫಯಾಜ್ ನಿಂದ ಅಂತರ ಕಾಯ್ದುಕೊಂಡಿದ್ದಳು ಇದರಿಂದ ಹತಾಶಗೊಂಡಿದ್ದ ಫಯಾಜ್ ಇಂದು ನೇಹಾಳ ಮೇಲೆ ರಕ್ಕಸನಂತೆ ವರ್ತಿಸಿ ಕಾಲೇಜಿನ ಆವರಣದೊಳಗೆ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಕೊಲೆಗೆಡುಕ ಫಯ್ಯಾಜ್ ಸೌದತ್ತಿ ತಾಲೂಕಿನ ಮುನವಳ್ಳಿ ಗ್ರಾಮದವನು ಎಂದು ಗುರುತಿಸಲಾಗಿದೆ. ನೇಹಾ ಫಯಾಜ್ ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು.ಓದಿನಲ್ಲಿ ಫಯ್ಯಾಜ್ ಹಾಗೂ ನೇಹಾ ರ‌್ಯಾಂಕ್ ಸ್ಟೂಡೆಂಟ್ ಎನ್ನಲಾಗಿದೆ. ಆದರೆ ಅದ್ಯಾಕೊ ಕೆಲವು ದಿನಗಳಿಂದ ನೇಹಾ ಫಯ್ಯಾಜ್ ನಿಂದ ಅಂತರ ಕಾಯ್ದು ಕೊಂಡಿದ್ದರಿಂದ ಫಯ್ಯಾಜ್‌ ಸಹಿಸಿಕೊಳ್ಳದೆ ಇಂದು ನೇಹಾಳೊಂದಿಗೆ ಮಾತನಾಡಲು ಮುಂದಾಗಿದ್ದಾನೆ. ಇ ವೇಳೆ ನಿಲ್ಲದ ಆಕೆಯನ್ನು ನೆಲಕ್ಕೆ ಕೆಡವಿ ಹತ್ಯೆಗೈದು ಸ್ಥಳದಿಂದ ಪರಾರಿಯಾಗಿದ್ದಾನೆ.

ಇ ವೇಳೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ವಿದ್ಯಾನಗರದ ಪೋಲೀಸರು ತಲೆ ಮರೆಸಿಕೊಂಡಿದ್ದ ಆರೋಪಿಯ ಜಾಡು ಹಿಡಿದು ಹೊರಟಾಗ ಆತ ನಗರದ ರಾಜ್ ಕಾಲುವೆಯೊಂದರಲ್ಲಿ ಬಚ್ಚಿಟ್ಟು ಕೊಂಡಿದ್ದ ಫಯ್ಯಾಜ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೂ ಕೊಲೆಗೆ ಬಳಸಿದ ಚಾಕು ಹಾಗೂ ಒಂದು ಸ್ಕೂಟರ್ ಜಪ್ತಿ ಮಾಡಿದ್ದು. ಕೊಲೆಗೆ ನಿಖರವಾದ ಕಾರಣವನ್ನು ಹುಡುಕುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button