Jannah Theme License is not validated, Go to the theme options page to validate the license, You need a single license for each domain name.
Uncategorized

ಹಿರಿಯ ಉಪನೊಂದಣಾಧಿಕಾರಿಗಳಿಗೆ ಸಾರ್ವಜನಿಕರಿಂದ ಸನ್ಮಾನ!

Honors programme

POWER CITYNEWS : HUBBALLI

ಹುಬ್ಬಳ್ಳಿ :ಹುಬ್ಬಳ್ಳಿಯ ಉತ್ತರ ಭಾಗದ ಹಿರಿಯ ಉಪನೊಂದಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಮಲ್ಲಿಕಾರ್ಜುನ ಹೆಚ್ ಇವರನ್ನು ಸಮಾಜ ಸೇವಕರು ಹಾಗೂ ಕೆಪಿಸಿಸಿ ವಕ್ತಾರರಾದ ಗಂಗಾಧರ ದೊಡ್ಡವಾಡ ಸನ್ಮಾನಿಸಿ ಗೌರವಿಸಿದರು.

ಇಲ್ಲಿನ ಉತ್ತರ ಭಾಗದ ಹಿರಿಯ ಉಪನೊಂದಣಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದ ಇವರನ್ನು ಸರ್ಕಾರ ಗುಲಬುರ್ಗಾ ಜಿಲ್ಲಾ ನೊಂದಣಾಧಿಕಾರಿಯಾಗಿ ಮುಂಬಡ್ತಿ ನೀಡಿದ್ದ ಹಿನ್ನೆಲೆಯಲ್ಲಿ ಅವರಿಗೆ ಶುಭಾಶಯಗಳನ್ನು ಕೋರಲಾಯಿತು ಈ ಸಂದರ್ಭದಲ್ಲಿ ಕೆ ಪಿ ಸಿ ಸಿ ಮಾಧ್ಯಮ ವಕ್ತಾರರಾದ ಗಂಗಾಧರ ದೊಡ್ಡವಾಡ ರಫೀಕ್ ದೊಡ್ಡಮನಿ ಮೋದಿನ ನದಾಫ, ಧಾವಲವಸಾಬ ಪಟೇಲ, ಹಾಗೂ ದತ್ತುಸಾ ಬದ್ದಿ ಇತರರು ಉಪಸ್ಥಿತರಿದ್ದರು ಮಲ್ಲಿಕಾರ್ಜುನ ಎಚ್ ಅವರು ಹುಬ್ಬಳ್ಳಿ ಕಚೇರಿಯಲ್ಲಿ ಅತ್ಯಂತ ಶಿಸ್ತಿನಿಂದ ಸೇವೆ ಸಲ್ಲಿಸಿ ಜನಾನುರಾಗಿಯಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಮುಂದೆಯೂ ಸಹ ಅವರು ಉನ್ನತ ಹುದ್ದೆಗೇರಿ ಸಮಾಜಕ್ಕೆ ಉತ್ತಮ ಸಂದೇಶ ಕೊಡುವಂತಾಗಲಿ ಎಂದು ಕೆಪಿಸಿಸಿ ವಕ್ತಾರ ಗಂಗಾಧರ ದೊಡವಾಡ ಶುಭ ಹಾರೈಸಿದರು.

Related Articles

Leave a Reply

Your email address will not be published. Required fields are marked *