Uncategorized

ಪ್ರತಿಷ್ಠಿತ“ರಾಮನಾಥ ಗೊಯಂಕಾ”ಪ್ರಶಸ್ತಿ ಪತ್ರಕರ್ತ“ಆನಂದ ಸೌದಿ” ಮುಡಿಗೆ!

Anand soudi

POWER CITYNEWS:HUBBALLI

ಯಾದಗಿರಿ : ಭಾರತೀಯ ಪತ್ರಿಕಾರಂಗದ ಭೀಷ್ಮ, ಪ್ರತಿಷ್ಠಿತ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯ ಸಂಸ್ಥಾಪಕ ದಿ. ರಾಮನಾಥ ಗೋಯೆಂಕಾ ಅವರ ಸ್ಮರಣಾರ್ಥ ನೀಡಲಾಗುವ, ‘ರಾಮನಾಥ ಗೋಯೆಂಕಾ ಎಕ್ಸಲೆನ್ಸ್ ಇನ್ ಜರ್ನಲಿಸಂ-2022’ನೇ ಸಾಲಿನ ಪ್ರಶಸ್ತಿಗೆ ‘ಕನ್ನಡಪ್ರಭ’ ಪತ್ರಿಕೆಯ ಯಾದಗಿರಿ ಜಿಲ್ಲೆಯ ಪ್ರಧಾನ ವರದಿಗಾರ ಆನಂದ ಮಧುಸೂದನ ಸೌದಿ ಆಯ್ಕೆಯಾಗಿದ್ದಾರೆ.
ದೈನಿಕ ಕೆಲಸದ ಒತ್ತಡಗಳ ನಡುವೆ ವೃತ್ತಿ ಗುಣಮಟ್ಟ ಕಾಯ್ದುಕೊಂಡು, ಸಾರ್ವಜನಿಕರಲ್ಲಿ ನಂಬಿಕೆ, ಪರಿಣಾಮ ಬೀರುವ ಪತ್ರಕರ್ತರ ಧೈರ್ಯ ಮತ್ತು ಬದ್ಧತೆ ಗುರುತಿಸಿ, 2005 ರಿಂದ ಇಂಡಿಯನ್ ಎಕ್ಸಪ್ರೆಸ್ ಸಂಸ್ಥೆಯ ರಾಷ್ಟ್ರಮಟ್ಟದ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ದೇಶದ ವಿವಿಧೆಡೆಯಿಂದ ಬಂದಿದ್ದ ಅನೇಕ ವರದಿಗಳ ಪೈಕಿ ತೀರ್ಪುಗಾರರು ಆನಂದ ಎಂ. ಸೌದಿಯವರ “ಪಿಎಸೈ ಅಕ್ರಮ” ಸುದ್ದಿಯನ್ನು ಪ್ರಾದೇಶಿಕ ಭಾಷಾ ವಿಭಾಗದ ಪ್ರಶಸ್ತಿಯಲ್ಲಿ ಆಯ್ಕೆ ಮಾಡಿದ್ದಾರೆ.ರಾಜ್ಯ, ರಾಷ್ಟ್ರವ್ಯಾಪಿ ಸದ್ದು ಮಾಡಿದ, ‘ಕನ್ನಡಪ್ರಭ’ ಬಯಲಿಗೆಳೆದ 545 ಹುದ್ದೆಗಳ ಪಿಎಸೈ ನೇಮಕ ಹಗರಣದ ಕುರಿತ ಸರಣಿ ತನಿಖಾ ವರದಿಗಳು ತೀರ್ಪುಗಾರರ ಗಮನ ಸೆಳೆದಿವೆ.

ಪ್ರಶಸ್ತಿಯು 1 ಲಕ್ಷ ರು.ಗಳು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

Related Articles

Leave a Reply

Your email address will not be published. Required fields are marked *

Back to top button