ಪೊಲೀಸ್ ಠಾಣೆ ಎದುರಲ್ಲೇ ಮಹಿಳೆಯ ಮೇಲೆ ಹಲ್ಲೆ!

POWER CITYNEWS: HUBLI
ಹುಬ್ಬಳ್ಳಿ: ಅರ್ಜಿ ವಿಚಾರಣೆಗೆ ಹಾಜರಾದ ಮಹಿಳೆಯ ಮೇಲೆ ಠಾಣೆಯ ಎದರಲ್ಲೇ ಹಲ್ಲೆ ನಡೆಸಿದ ಘಟನೆ ನಿನ್ನೆ ರಾತ್ರಿ ಕೇಶ್ವಾಪುರ ಪೊಲೀಸ್ ಠಾಣೆ ಎದುರು ನಡೆದಿದೆ.
ರೋಣ ತಾಲೂಕಿನ ಕಾವ್ಯ ಎಂಬ ಮಹೀಳೆ ವರ್ಷದ ಹಿಂದೆ ನಮ್ಮ ಕುಟುಂಬದಲ್ಲಿ ಚಾಡಿ ಹೇಳಿದ್ದಳು ಎಂದು ಆರೋಪಿಸಿ ಅಕ್ಷತಾ ಎಂಬ ಮಹಿಳೆ ಕೇಶ್ವಾಪುರ ಪೊಲಿಸ್ ಠಾಣೆಗೆ ಅರ್ಜಿ ನೀಡಿದ್ದಳು. ಇ ಹಿನ್ನೆಲೆಯಲ್ಲಿ ಕೇಶ್ವಾಪುರ ಪೊಲೀಸರು ವಿಚಾರಣೆಗೆ ಬರುವಂತೆ ಕಾವ್ಯ ಅವರಿಗೆ ತಿಳಿಸಿದ್ದರಿಂದ ಠಾಣೆಗೆ ಬಂದು ವಿಚಾರಣೆಗೆ ಹಾಜರಾಗಿ ಮರಳಿ ಠಾಣೆಯಿಂದ ಹೊರಬಂದಿದ್ದಾರೆ. ಇ ವೇಳೆ ಕಾವ್ಯಳನ್ನು ಅಡ್ಡಗಟ್ಟಿ ಮೇಲೆ ಅಕ್ಷತಾ ಹಾಗೂ ಮಾರುತಿ ನಗರದ ರಾಜೇಶ್ವರಿ ಎಂಬಾಕೆ ತನ್ನೊಂದಿಗೆ ಕರೆತಂದಿದ್ದ ಅಪರಿಚಿತ ಮಹಿಳೆಯರಿಂದ ನನ್ನನ್ನು ಕೊಲೆ ಉದ್ದೇಶದಿಂದ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಕಾವ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಹೀಗೆ ಅರ್ಜಿ ವಿಚಾರಣೆಗೆ ಪೊಲಿಸ್ ಠಾಣೆಗೆ ಬಂದ ಒಬ್ಬೊಂಟಿ ಮಹಿಳೆ ಮೇಲೆ ಠಾಣೆಯ ಎದುರಲ್ಲೆ ಹಲ್ಲೆಗೆ ಮುಂದಾಗುವುದು ಪೊಲಿಸ್ ಇಲಾಖೆ ಹಾಗೂ ಕಾನೂನು ಸುವ್ಯವಸ್ಥೆಯನ್ನೆ ಪ್ರಶ್ನಿಸುವಂತಿದೆ.
