BREAKING NEWSCITY CRIME NEWSHubballi
ಮೆರವಣಿಗೆ ವೇಳೆ ರಸ್ತೆ ಅಪಘಾತ ತಪ್ಪಿದ ಭಾರಿ ಅನಾಹುತ!
Auto tractor accident

POWER CITYNEWS : HUBALI
ಹುಬ್ಬಳ್ಳಿ: ರಾಮ ಹಾಗೂ ಹನುಮ ಜಯಂತಿಯ ನಿಮಿತ್ತವಾಗಿ ನಡೆಯುತ್ತಿದ್ದ ಮೆರವಣಿಗೆಯಲ್ಲಿ ಡಿಜೆ ಸೌಂಡಬಾಕ್ಸ್ ಹೊತ್ತಿದ್ದ ಟ್ರ್ಯಾಕ್ಟ್‌ರ್ ಚಾಲಕನ ನಿಯಂತ್ರಣ ಕಳೆದುಕೊಂಡು ಎದುರಿಗೆ ಬಂದ ಆಟೋ ಒಂದಕ್ಕೆ ಡಿಕ್ಕಿ ಹೊಡೆದ ಘಟನೆ ಆನಂದನಗರದಲ್ಲಿ ನಡೆದಿದೆ.

ಇಲ್ಲಿನ ಪ್ರದೇಶವೊಂದರ ದೇವಸ್ಥಾನದಲ್ಲಿ ಹನುಮ ದೆವರ ಮೂರ್ತಿ ಪ್ರತಿಷ್ಠಾನ ಹಾಗೂ ರಾಮ ಹನುಮ ಜಯಂತಿ ಆಚರಣೆ ಪ್ರಯುಕ್ತವಾಗಿ ಡಿಜೆ ಹಚ್ಚಿಕೊಂಡು ಮೆರವಣಿಗೆ ಮೂಲಕ ಆನಂದನಗರದ ಹಳೆಹುಬ್ಬಳ್ಳಿ ರಸ್ತೆಯ ಮುಖಾಂತರ ಮೆರವಣಿಗೆ ಸಾಗುತ್ತಿತ್ತು.
ಈ ವೇಳೆ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಎದುರಿಗೆ ಬರುತ್ತಿದ್ದ ಆಟೋಗೆ ಡಿಕ್ಕೆ ಹೊಡೆದ ಪರಿಣಾಮ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದ್ದು ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ.

ಅಪಘಾತದಲ್ಲಿ ಆಟೊ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಹಳೆಹುಬ್ಬಳ್ಳಿ ಪೊಲೀಸರು ಭೇಟಿ ನೀಡಿದ್ದು. ಕಾನೂನು ಕ್ರಮ ಜರುಗಿಸಿದ್ದಾರೆ.