ಮಹಿಳೆಯ ಅನುಮಾನಸ್ಪದ ಸಾವು : ಪತಿ ಸೇರಿ ನಾಲ್ವರ ಬಂಧನ!
POWER CITY NEWS
POWERCITY NEWS : HUBBALLI / KALGHATAGI
ಧಾರವಾಡ:ಕಲಘಟಗಿ ತಾಲೂಕಿನ ಭೋಗೆನಾಗರಕೊಪ್ಪ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ಮೃತಪಟ್ಟ ಸುಮಂಗಲ ಪ್ರವೀಣ್ ತಿಪ್ಪಣ್ಣವರ (30) ಎಂಬುವರು ಮನೆಯಲ್ಲಿನ ಕೊಣೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಸ್ಪಾದ ಸಾವನ್ನಪ್ಪಿದ್ದರು.
ಆದರೆ ಮಹೀಳೆಯ ಕುಟುಂಬಸ್ಥರು ಮಾತ್ರ ನಮ್ಮ ಮಗಳನ್ನು ಆಕೆಯ ಪತಿ ಹಾಗೂ ಕುಟುಂಬ ಸದಸ್ಯರೆ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆಂದು ಆರೋಪಿಸಿ ಕಲಘಟಗಿ ಪೊಲಿಸ್ ಠಾಣೆಗೆ ದೂರು ನೀಡಿದ್ದಾರೆ. ಇ ಹಿನ್ನೆಲೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತಳ ಪತಿ ಹಾಗೂ ಆತನ ಕುಟುಂಬಸ್ಥರು ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಸುಮಂಗಲ ಅವರ ಪತಿ ಪ್ರವೀಣ್ ಬಸವಣ್ಣಪ್ಪ ತಿಪ್ಪಣ್ಣವರ್ (35) ಬಸವಣ್ಣಪ್ಪ ತಿಪ್ಪಣ್ಣವರ್ (65) ಚೆನ್ನವ್ವ ತಿಪ್ಪಣ್ಣವರ್ (55) ಮಹೇಶ್ ತಿಪ್ಪನ್ನವರ್ (38) ಅವರು ಬಂದಿತರಾಗಿದ್ದಾರೆ.
ಮೃತಳ ಕುಟುಂಬಸ್ಥರ ಆರೋಪ : ಸುಮಂಗಲ ಅವರನ್ನು ಕೊಲೆ ಮಾಡಿ ಬಳಿಕ ಅನುಮಾನ ಬರಬಾರದು ಎಂದು ನೇಣು ಹಾಕಿದ್ದಾರೆಂದು ಕುಟುಂಬದವರು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೃತ ಸುಮಂಗಲ ಪತಿಯಾದ ಪ್ರವೀಣ್ ತಿಪ್ಪಣ್ಣವರ್ ಮತ್ತು ಅವರ ಕುಟುಂಬದವರು ನಾಲ್ಕು ವರ್ಷಗಳಿಂದ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಸುಮಂಗಲ ಅವರ ಕುಟುಂಬದವರು ದೂರಿನಲ್ಲಿ ತಿಳಿಸಿದ್ದಾರೆ. ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದನ್ನ ಪೊಲಿಸರ ತನಿಖೆಯಿಂದಲೆ ತಿಳಿಯಬೇಕಿದೆ!