armyBELAGAVIBREAKING NEWSDHARWADGood jobL&TLife StylesoldiersTWINCITY

ಕಾರ್ಗಿಲ್ ವಿಜಯ ದಿವಸ..!

dakhani

POWER CITY NEWS:DHARWAD/ಧಾರವಾಡ: ಕಾರ್ಗಿಲ್ (CARGIL)ಯುದ್ಧದಲ್ಲಿ ಹೋರಾಡಿ ಜಯಗಳಿಸಿದ ಯೋಧರ ಗೌರವಾರ್ಥ ತಾಲೂಕಿನ ನಿಗದಿ ಗ್ರಾಮದಲ್ಲಿ “ಕಾರ್ಗಿಲ್ ವಿಜಯ ದಿವಸ”ವನ್ನು(vijaydivas) ಶನಿವಾರ ಆಚರಿಸಲಾಯಿತು.
ಗ್ರಾಮದಲ್ಲಿನ ಹುತಾತ್ಮ (death)ಯೋಧ ಮಹಾದೇವ ಶಿಗನಳ್ಳಿ(mahadevshinalli) ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ(bjp) ಮುಖಂಡ ಕರಿಯಪ್ಪ ಅಮ್ಮಿನಭಾವಿ, 1999 ಜುಲೈ 26 ರಂದು ಪಾಕಿಸ್ತಾನದ(pakistan) ವಿರುದ್ಧ
ಭಾರತೀಯ ವೀರ ಯೋಧರು ಕಾರ್ಗಿಲ್ ಜಿಲ್ಲೆಯ ಪರ್ವತ ಶಿಖರಗಳಲ್ಲಿ ಹೋರಾಡಿ(war) ಜಯಗಳಿಸಿದ್ದು ಎಲ್ಲ ಭಾರತೀಯರು ಹೆಮ್ಮೆ ಪಡೆಬೇಕಾದ ಸಂಗತಿ. ದೇಶದ ರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿರುವ ಯೋಧರನ್ನು ಗೌರವದಿಂದ(respect) ಕಾಣಬೇಕು. ಮತ್ತು ಅವರ ಸೇವೆಯು ನಮಗೆಲ್ಲ ಮಾದರಿಯಾಗಬೇಕು. ಈ ದಿಸೆಯಲ್ಲಿ ಎಲ್ಲ ತಂದೆ-ತಾಯಿಗಳು ತಮ್ಮ ಮಕ್ಕಳನ್ನು ಸೈನ್ಯಕ್ಕೆ(soldiers) ಸೇರಿಸುವ ಉದಾತ್ತ ಗುರು ಹೊಂದಬೇಕು ಎಂದರು.
ಇದೇ ಸಂದರ್ಭದಲ್ಲಿ ಸೇವೆಯಲ್ಲಿ ವೀರ ಮರಣ ಹೊಂದಿದ ಯೋಧ ಮಹಾದೇವ ಶಿಗನಳ್ಳಿ ಅವರ ತಂದೆ ಚನ್ನಬಸಪ್ಪ ಮತ್ತು ತಾಯಿ ಪಾರವ್ವ ಹಾಗೂ ಸೈನಿಕರಾದ ಅಶ್ವಿನ ಕುಂದರಗಿ, ಬಸವರಾಜ ಟವಳಿ, ನಿಂಗಪ್ಪ ಹಳಿಯಾಳ, ಪ್ರವೀಣ ಮಗದುಮ, ಬಸವರಾಜ ಸುಣಗಾರ, ಪರಮೇಶ್ವರ ಮುಗದ, ಮಂಜುನಾಥ ಹಾಲಿಗೇರಿ ಅವರನ್ನುಸನ್ಮಾನಿಸಿ ಗೌರವಿಸಲಾಯಿತು.
ಬಿಜೆಪಿ ಮುಖಂಡರಾದ ಯಲ್ಲಪ್ಪ ಹುಲೆಪ್ಪನವರ, ಬಸವರಾಜ ಗುಂಡಗೋವಿ, ಶಿವಾಜಿ ಡೊಳ್ಳಿನ, ಕಲ್ಮೇಶ ಬೇಲೂರ, ಚನ್ನಪ್ಪ ಜಗದಪ್ಪನವರ, ಶಿವಾನಂದ ಗುಂಡಗೋವಿ, ರಾಯನಗೌಡ ಪಾಟೀಲ, ಶಿವಯ್ಯ ಬೆಳ್ಳಕ್ಕಿಮಠ, ಕಲ್ಲಪ್ಪ ಹಳಿಯಾಳ ಇತರರಿದ್ದರು.

Related Articles

Leave a Reply

Your email address will not be published. Required fields are marked *