ರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ
ನಡುರಸ್ತೆಯಲ್ಲೆ ಸುಟ್ಟ ಟವೇರಾ ಕಾರು.

ಹುಬ್ಬಳ್ಳಿ
ಹುಬ್ಬಳ್ಳಿಯ ಗಬ್ಬೂರು ಬೈಪಾಸ್ ಬಳಿ ಇದ್ದಕ್ಕಿದ್ದಂತೆ ಟವೇರಾ ಪ್ಯಾಸೆಂಜರ್ ಕಾರೊಂದು ಬೆಂಕಿ ಹೊತ್ತಿಉರಿದಿದೆ.
ಮೊದಲಿಗೆ ಎಂಜಿನ್ ನಿಂದ ಸಣ್ಣದಾಗಿ ಹೊಗೆ ಬರುವುದನ್ನ ಗಮನಿಸಿದ ಚಾಲಕ ವಾಹನ ವನ್ನ ರಸ್ತೆಯ ಪಕ್ಕಕ್ಕೆ ನಿಲ್ಲಿಸಿದ್ದಾನೆ. ಆದರೆ ಬೆಂಕಿ ಮಾತ್ರ ಸಂಪೂರ್ಣ ವಾಹನದಲ್ಲಿನ ಸೀಟುಗಳನ್ನು ಆವರಿಸಿಕೊಂಡಿದೆ.
ಇದರಿಂದ ಎಚ್ಚೆತ್ತು ಕೊಂಡ ಪ್ರಯಾಣಿಕರು ಮತ್ತು ಚಾಲಕ ಸೇರಿ ವಾಹನದಿಂದ ಹೊರಬಂದಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಸದ್ಯಕ್ಕೆ ವಾಹನ ಚಾಲಕ ಸಮೇತ ಸ್ಥಳದಿಂದ ಪಲಾಯನ ಗೈದಿದ್ದಾನೆ.
ಆದರೆ ಸದ್ಯ ಕಾರ್ ಎಲ್ಲಿಗೆ ಹೊರಟಿದ್ದರು? ಆ ವಾಹನ ಯಾರಿಗೆ ಸೇರಿದ್ದು? ಘಟನೆಗೆ ತಾಂತ್ರಿಕ ದೋಷವೆ? ಅಥವಾ ಅದರ ಹಿಂದಿನ ಉದ್ದೇಶ ಬೇರೆ ಇತ್ತಾ? ಎಂಬುದನ್ನ ಪೊಲಿಸರ ತನಿಖೆಯಿಂದಷ್ಟೆ ತಿಳಿಯಲಿದೆ.
ಸ್ಥಳಕ್ಕೆ ಭೆಟಿ ನಿಡಿರುವ ಬೆಂಡಿಗೇರಿ ಪೊಲೀಸರು ಘಟನೆ ಕುರಿತು ತನಿಖೆ ಕೈಗೊಂಡಿದ್ದಾರೆ.



