BELAGAVIBREAKING NEWSHubballiKMC HOSPITALರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಬಾಲಕಿಯ ಸಾವಿಗೆ ಹೆಚ್ಚಿನ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ!

dakhani

power city news:hubballi/ಹುಬ್ಬಳ್ಳಿ: ನಗರದಲ್ಲಿ ಕೊಲೆಗೀಡಾದ ಬಾಲಕಿ ಕುಟುಂಬಸ್ಥರಿಗೆ ಸರ್ಕಾರ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಕುರುಬ ಸಂಘ ನಗರದಲ್ಲಿ ಆಗ್ರಹಿಸಿದೆ.
ಈಗಾಗಲೇ ಸರ್ಕಾರ ೧೦ ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದು ಸ್ವಾಗತಾರ್ಹ. ಮೃತ ಬಾಲಕಿ ಆದ್ಯಾಳ ಸಹೋದರಿ ಅನ್ವಿತಾ ವಿಶೇಷಚೇತನರಾಗಿದ್ದು ಈ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಾಗೂ ಅನಾಥ ಮತ್ತು ಏಕಪೋಷಕ ಅಭಿವೃದ್ಧಿ ಇಲಾಖೆಯ ಪ್ರಾಯೋಜಕತ್ವದಡಿ ನೀಡುವಂತಹ ಸೂಕ್ತ ಧನ ಸಹಾಯ ನೀಡಲು ಜಿಲ್ಲಾಧಿಕಾರಿಯವರಿಗೆ ಆದೇಶ ನೀಡಬೇಕು.
ಮೃತಳಾದ ಬಾಲಕಿ ಸಹೋದರಿ ವಿಕಲಚೇತನರಿದ್ದು ಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡುವುದೇನೆಂದರೆ ೫೦ ಲಕ್ಷ ರೂ. ಪರಿಹಾರ ಹಾಗೂ ಹುಡಾ ಪ್ರಾಧಿಕಾರದಿಂದ ಸ್ವಂತ ಮನೆ ನಿರ್ಮಾಣ ಮಾಡಿಕೊಡಬೇಕು ಎಂಬುದು ಧಾರವಾಡ ಜಿಲ್ಲಾ ಹಾಗೂ ಹುಧಾ ಮಹಾನಗರ ಕುರುಬ ಸಮಾಜದ ಗಣ್ಯರು ವಿನಂತಿಯಾಗಿರುತ್ತದೆ ಎಂದು ಸಂಘ ಒತ್ತಾಯಿಸಿದೆ.

Related Articles

Leave a Reply

Your email address will not be published. Required fields are marked *