Jannah Theme License is not validated, Go to the theme options page to validate the license, You need a single license for each domain name.
BREAKING NEWSCITY CRIME NEWSHubballi

ಮನೆಗೆ ನುಗ್ಗಿ ಯುವಕನ ಬರ್ಬರ ಹತ್ಯೆ!

M R DAKHANI

POWER CITYNEWS : HUBBALLI

ಹುಬ್ಬಳ್ಳಿ: ಮೊನ್ನೆಯಷ್ಟೆ ಹುಬ್ಬಳ್ಳಿಯಲ್ಲಿ ನಡೆಯಬಹುದಾದ ಕೊಲೆಯ ಸಂಚನ್ನು ಭೇದಿಸಿ ಮಾರಕಾಸ್ತ್ರಗಳ ಸಮೇತ ಆರುಜನರನ್ನ ಬಂಧಿಸಿದ್ದ ಘಟನೆ ಮಾಸುವ ಮುನ್ನವೆ ಇಂದು ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ ಮತ್ತೆ ನಡೆಯಬಾರದ ಘಟನೆ ನಡೆದಿದೆ. ಪರಿಚಯಸ್ತರೊಂದಿಗೆ ತೆರಳಿದ್ದ ಯುವಕನನ್ನು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಲೋಹಿಯಾ ನಗರದಲ್ಲಿ ನಡೆದಿದೆ.

ಘಟನೆಯಲ್ಲಿ ಹತ್ಯೆಗಿಡಾದ ಯುವಕನನ್ನು,ಆಕಾಶ್ ಮಠಪತಿ(26) ಎಂದು ಗುರುತಿಸಲಾಗಿದೆ. ಉತ್ತರ ಕರ್ನಾಟಕ ಆಟೋ ಚಾಲಕರ ಸಂಘದ ಅಧ್ಯಕ್ಷ ಹಾಗೂ ಸಾಮಾಜಿಕ ಹೊರಾಟಗಾರ ಚಂದ್ರಶೇಖರಯ್ಯ ಮಠಪತಿಯರವ ಪುತ್ರ ಆಕಾಶ ಎಂದು ತಿಳಿದುಬಂದಿದೆ.
ಇನ್ನೂ ಪ್ರೀತಿ ವಿಚಾರಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಹುಬ್ಬಳ್ಳಿಯ ಲೋಹಿಯಾ ನಗರದಲ್ಲಿ ನಡೆದಿದ್ದು, ಸ್ಥಳಕ್ಕೆ ಹಳೇ ಹುಬ್ಬಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *