ಧಾರವಾಡ

ಸೇನಾಧಿಕಾರಿಯ ದುರ್ಮರಣ ಕುಟುಂಬಸ್ಥರ ರೋದನ

ಧಾರವಾಡ

ರಾಜಕಾರಣಿಗಳು ನೋಡಲೇಬೇಕಾದ ಸುದ್ದಿ ಇದು.

ಏಕೆಂದ್ರೆ ವೋಟ್ ಹಾಕಿಸಿಕೊಳ್ಳುವಾಗ ಏರಿಯಾ ವ್ಯಾಪ್ತಿ ಬಿಟ್ಟು ಉಳಿದೆಲ್ಲ ಕಡೆಗಳಲ್ಲಿ ಪ್ರಚಾರ ಮಾಡುವವರು ದೇಶ ಕಾಯುವ ಸೈನಿಕರೊಬ್ಬರು ಕರ್ತವ್ಯದಲ್ಲಿರುವಾಗಲೇ ರಸ್ತೆ ಅಪಘಾತದಲ್ಲಿ ಶಾಸಕರ ಕ್ಷೇತ್ರದ ವ್ಯಾಪ್ತಿಯಲ್ಲಿ ಮೃತರಾದ್ರೆ ಕುಟುಂಬಕ್ಕೆ ಯಾವ ರೀತಿ ಸಹಾಯ ಮಾಡ್ತಾರೆ ಎನ್ನುವುದರ ಪ್ರಶ್ನೆ ಇದು.

ಹೌದು ಇಂತಹದೊಂದು ಘಟನೆ
ಧಾರವಾಡ ತಾಲೂಕಿನ ಯರಿಕೊಪ್ಪ ಬಳಿ ನಡೆದಿದೆ.

ಯರಿಕೊಪ್ಪ ಕಲಘಟಗಿ ಮತಕ್ಷೇತ್ರಕ್ಕೆ ಬರುತ್ತೆ. ಕಲಘಟಗಿ‌ ಶಾಸಕ ನಿಂಬಣ್ಣವರ್ ವ್ಯಾಪ್ತಿ ಇದು. ಇನ್ನು ಪ್ರಕರಣ ದಾಖಲಾದ ಪೊಲೀಸ್ ಠಾಣೆ ಧಾರವಾಡ ಗ್ರಾಮೀಣ. ಇದು ಗ್ರಾಮೀಣ ಶಾಸಕರಾದ ಅಮೃತ ದೇಸಾಯಿ ಅವರ ಗ್ರಾಮೀಣ ಭಾಗದ ವ್ಯಾಪ್ತಿ. ಅದರಲ್ಲೂ ಅವರ ಮನೆ ಮುಂದಿನ ಪೊಲೀಸ್ ಠಾಣೆ.

ಹೀಗಾಗಿ ಇಬ್ಬರು ಶಾಸಕರು ಈ ಸೇನಾಧಿಕಾರಿಯ ಕುಟುಂಬದ ಬಗ್ಗೆ ಹಾಗೂ ಅವರ ಅಂತ್ಯಸಂಸ್ಕಾರದ ಕುರಿತು ಮಾತನಾಡಬೇಕಿದೆ.

ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದೇಶ ಸೇವೆ ಮಾಡುವ ಸೇನಾಧಿಕಾರಿಯೊಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ರಾಜಸ್ಥಾನದಲ್ಲಿ ಸೇನೆಯಲ್ಲಿ ಸುಬೇದಾರ ಆಗಿ ಸೇವೆ ಸಲ್ಲಿಸುತ್ತಿದ್ದ ವಸಂತರಾಜ್ 2 ತಿಂಗಳು ಕಾಲ ರಜೆ ತೆಗೆದುಕೊಂಡು ಬಂದಿದ್ದರು.

ಅಪಘಾತದಲ್ಲಿ ಮೃತನಾಗಿರುವ ಸೇನಾಧಿಕಾರಿ ಮಗಳನ್ನು ಬೆಂಗಳೂರಿನಲ್ಲಿ ಬಿಟ್ಟು ಬರ್ತಾ‌ ಇರುವಾಗ ಈ ಅವಘಡ ಸಂಭವಿಸಿದೆ.

ವಸಂತರಾಜ್ ಮೃತ ಸೈನಿಕನಾಗಿದ್ದು, ಇನ್ನು 2 ವರ್ಷಗಳ‌ ಕಾಲ ಸೇವೆ ‌ಬಾಕಿ‌ ಇತ್ತು.

ಪತ್ನಿ ಸುರೇಖಾ ಹಾಗೂ‌ ಮಗನೊಂದಿಗೆ ಕೂಡಿಕೊಂಡು ಕಾರನಲ್ಲಿ ಪ್ರಯಾಣ ಬೆಳೆಸಿದ್ದರು.

ಮೂಲತಃ ತುಮಕೂರು‌ ಜಿಲ್ಲೆಯ ಹೂವಿನಳ್ಳಿಯ ಗ್ರಾಮದ ಸೇನಾಧಿಕಾರಿ ಇವರಾಗಿದ್ದಾರೆ.

ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ‌ಮೃತ ದೇಹ‌ ರವಾನೆ‌ ಮಾಡಲಾಗಿದ್ದು, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಪ್ರಕರಣ ಸಂಬಂಧ ಮೃತ ಸೇನಾಧಿಕಾರಿಯ ಪತ್ನಿ ನನ್ನ ಪತಿ ಅಂತ್ಯಸಂಸ್ಕಾರ ಸರ್ಕಾರಿ ಗೌರವದೊಂದಿಗೆ ಆಗಲಿ. ಸತ್ತ ಮೇಲೆ ಸರ್ಕಾರಿ ಗೌರವದಿಂದ ಅಂತ್ಯಸಂಸ್ಕಾರ ಮಾಡಿಸಿಕೊಳ್ಳುವ ಗೌರವವೇ ಬೇರೆ ಅಂತಾ ಇದ್ದರು ನನ್ನ ಪತಿ ಎಂದು ದುಃಖ ತೋಡಿಕೊಂಡರು ಮೃತ ಯೋಧನ ಪತ್ನಿ.

ಹಿರಿಯ ವಕೀಲರಾದ ಜಗದೀಶ್ ಗುಂಡಕಲಮಠ ಅವರು ಮೃತ ಸೇನಾಧಿಕಾರಿಯ ಪೋಸ್ಟ್ ಮಾಟಂ ಆಗುವವರೆಗೂ ಕುಟುಂಬಸ್ಥರ ಜೋತೆಗೆ ನಿಂತು ಮಾನವೀಯತೆ ತೋರಿದ್ರು.

ಅದೇನೆ ಆಗಲಿ ಸದಾಕಾಲ ದೇಶ ಸೇವೆ ಎನ್ನುವ ಸೇನಾಧಿಕಾರಿ ರಜೆಯ ಮೇಲೆ ಊರಿಗೆ ಬಂದು ಈ ರೀತಿ ದಾರುಣ ಸಾವನ್ನಪ್ಪಿದ್ದು ಮಾತ್ರ ವಿಪರ್ಯಾಸವೇ ಸರಿ…

Related Articles

Leave a Reply

Your email address will not be published. Required fields are marked *

Back to top button