BJPBREAKING NEWSDHARWADHubballiL&TLife StylePoliceTWINCITY

ಹೆಣದ ವಾರಸುದಾರರಿಗೆ ಊರೂರು ಅಲೆಯುತ್ತಿರುವ ಪೊಲೀಸರು!

POWER CITY

POWER CITY NEWS :HUBBALLI/ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಪೊಲೀಸ್ ಎನ್ ಕೌಂಟರ್ ಗೆ ಬಲಿಯಾದ ರಿತೇಶಕುಮಾರ ಅಂತ್ಯ ಸಂಸ್ಕಾರಕ್ಕೆ ಕೊನೆಗೂ ಕೋರ್ಟ್ ಆದೇಶ ಹೊರಬಂದಿದೆ. ಇದರಿಂದ ಕೆಎಂಸಿಆರ್‌ಐ, ಸಿಐಡಿ ಪೊಲೀಸರು ನಿಟ್ಟುಸಿರು ಬಿಡುವಂತಾಗಿದೆ. ಈ ನಡುವೆ ಈತನ ಮೂಲ ಯಾವುದು? ಕುಟುಂಬಸ್ಥರು ಯಾರು? ಎಂಬುದು ಮಾತ್ರ ಇನ್ನೂ ಗೊತ್ತಾಗಿಲ್ಲ.

ಎ. 13ರಂದು ರಿತೇಶಕುಮಾರ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಆಕೆಯನ್ನು ನಿರ್ಮಾಣ ಹಂತದ ಕಟ್ಟಡದ ಶೌಚಾಲಯದೊಳಗೆ ಹತ್ಯೆ ಮಾಡಿ ಪರಾರಿಯಾಗಿದ್ದ. ಸಾರ್ವಜನಿಕರು ರೊಚ್ಚಿಗೆದ್ದು ತೀವ್ರ ಆಕ್ರೋಶವ್ಯಕ್ತಪಡಿಸಿದ್ದರು ಇಡೀ ಊರೆಲ್ಲ ಪ್ರತಿಭಟನೆಗಳು ನಡೆದಿದ್ದವು.

ಇದರಿಂದ ಪೊಲೀಸರು ಒತ್ತಡಕ್ಕೆ ಮಣಿದಿದ್ದರು. ಜತೆಗೆ ಸಂಜೆ ವೇಳೆಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆತನ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುವುದಕ್ಕಾಗಿ ಆತ ಇದ್ದ ಶೆಡ್ ಬಳಿ ಕರೆದುಕೊಂಡು ಹೋಗಿದ್ದರು. ರಾಯನಾಳ ಬ್ರಿಡ್ಜ್ ಬಳಿ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದರೂ ಈತ ಪರಾರಿಯಾಗುವ ತನ್ನ ಪ್ರಯತ್ನ ಮಾತ್ರ ಮುಂದುವರಿಸಿದ್ದ. ಆಗ ಆತ್ಮರಕ್ಷಣೆಗಾಗಿ ಪೊಲೀಸರು ಈತನ ಮೇಲೆ ಗುಂಡು ಹಾರಿಸಿದ್ದರು. ಆಗ
ಈತ ಸಾವಿಗೀಡಾಗಿದ್ದ.

ಈ ನಡುವೆ ಈತನ ಶವದ ಅಂತ್ಯಸಂಸ್ಕಾರ ಮಾಡ ಬಾರದು. ಸಾಕ್ಷ್ಯ ನಾಶವಾಗಬಹುದು ಎಂದು ಕೋರಿ ಬೆಂಗಳೂರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಈತನ ಮರಣೋತ್ತರ
ಪರೀಕ್ಷೆ ನಡೆಸಿ ಕೋರ್ಟ್ ಆದೇಶಕ್ಕಾಗಿ ದಾರಿ ಕಾಯುತ್ತಾ ಕೆಎಂಸಿಆರ್‌ಐ ವೈದ್ಯರು ಹಾಗೂ ಸಿಐಡಿ ಪೊಲೀಸರು ಇರುವ ಅನಿವಾರ್ಯವಿತ್ತು. ಶವ ಕೊಳೆಯುತ್ತಾ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಐಡಿ ಪೊಲೀಸರಿಗೆ ಶವ ಡಿಕಂಪೋಸ್ ಆಗುತ್ತಿದೆ. ಆದಕಾರಣ ಇದನ್ನು ವಶಕ್ಕೆ ಪಡೆಯಿರಿ ಎಂದು ಪತ್ರ ಕೂಡ ಕೆಎಂಸಿಆರ್‌ಐ ಬರೆದಿತ್ತು. ಸಿಐಡಿ ಪೊಲೀಸರು ಕೂಡ ಶವದ ಸಮಾಧಿ ಮಾಡುವ ಅಗತ್ಯವಿದೆ. ಶವ ಕೊಳೆಯುತ್ತಿದೆ ಎಂದು ಕೋರ್ಟ್‌ಗೆ ಮಾಹಿತಿ ನೀಡಿದ್ದರು. ಎಲ್ಲವನ್ನು ವಿಚಾರಣೆ ನಡೆಸಿರುವ ಕೋರ್ಟ್ ಇದೀಗ ಅಂತ್ಯ ಸಂಸ್ಕಾರ ಮಾಡಲು ಪರವಾನಗಿ ಕೊಟ್ಟಿದೆ. ಇದರಿಂದ ಸಿಐಡಿ ಪೊಲೀಸರು, ಕೆಎಂಸಿ ಆರ್ ಐ ವೈದ್ಯರು ನಿಟ್ಟುಸಿರು ಬಿಡುವಂತಾಗಿದೆ.

ಯಾರೂ ಸಿಗಲೇ ಇಲ್ಲ: ಈತನ ಎನ್‌ಕೌಂಟರ್ ಆಗುವ
ಮುನ್ನ ಈತ ತಾನು ಬಿಹಾರದ ಪಾಟ್ನಾದವನು ಎಂದು ಹೇಳಿಕೊಂಡಿದ್ದ. ಕಟ್ಟಡದ ಕೆಲಸ ಮಾಡುತ್ತಿದ್ದೇನೆ ಎಂದಷ್ಟೇ ಹೇಳಿದ್ದನಂತೆ. ಹೀಗಾಗಿ ಈತನ ಕುಟುಂಬಸ್ಥರ ಪತ್ತೆಗಾಗಿ ಪೊಲೀಸರು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಪೊಲೀಸರ 2-3 ತಂಡಗಳು ಬಿಹಾರ, ಉತ್ತರ ಪ್ರದೇಶ, ಜಾರ್ಖಾಂಡ್ ಸೇರಿದಂತೆ ವಿವಿಧ ರಾಜ್ಯಗಳಲ್ಲೆಲ್ಲ ಸುತ್ತಾಡಿ ಬಂದಿದೆ. ಆದರೂ ಈತನ ಕುಟುಂಬಸ್ಥರ ಪತ್ತೆ ಮಾತ್ರ ಆಗಿಲ್ಲ. ಹೀಗಾಗಿ ಇದೀಗ ಸಿಐಡಿ ಪೊಲೀಸರು ಶವದ ಅಂತ್ಯ ಸಂಸ್ಕಾರವನ್ನು ಇಂದು ಅಥವಾ ನಾಳೆ ನಡೆಸಲಿದ್ದಾರೆ ಎಂದು ಪೊಲೀಸ ಮೂಲಗಳು ತಿಳಿಸಿವೆ.

Related Articles

Leave a Reply

Your email address will not be published. Required fields are marked *