BREAKING NEWSDHARWADHubballiL&TLife StyleSportsTWINCITYರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ
ರಾಜ್ಯದ್ಯಂತ ಇನ್ಮುಂದೆ ಆನಲೈನ್ ಟ್ಯಾಕ್ಸಿಗಳ ಸಂಚಾರ ಸ್ಥಗಿತ: ರಾಮಲಿಂಗಾರೆಡ್ಡಿ!
NEWS TIME

POWER CITY NEWS: HUBBALLIಬೆಂಗಳೂರು: ರಾಜ್ಯದಲ್ಲಿ ಇನ್ಮುಂದೆ ಉಬರ್, ರಾಪಿಡೋ ಬೈಕ್ ,ಟ್ಯಾಕ್ಸಿಗಳ ಸೇವೆಗಳು ಬಂದ್ ಆಗಲಿವೆ. ಹೈಕೋರ್ಟ್ ಆದೇಶದಂತೆ ರಾಜ್ಯದಾದ್ಯಂತ ಉಬರ್, ರಾಪಿಡೋ ಬೈಕ್, ಟ್ಯಾಕ್ಸಿ ಸೇವೆ ಸ್ಥಗಿತಕ್ಕೆ ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.
ಹೈಕೋರ್ಟ್ ಬೈಕ್ ಟ್ಯಾಕ್ಸಿ ಸ್ಥಗಿತಕ್ಕೆ ಆರು ವಾರಗಳ ಕಾಲವಕಾಶ ನೀಡಿತ್ತು. ಅದರಂತೆ ಇದೀಗ ಕೋರ್ಟ್ ಆದೇಶದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆಯ ಕಾರ್ಯದರ್ಶಿ, ಸಾರಿಗೆ ಮತ್ತು ರಸ್ತೆ, ಸುರಕ್ಷತಾ ಆಯುಕ್ತರಿಗೆ ಸಚಿವ ರಾಮಲಿಂಗಾರೆಡ್ಡಿ ಪತ್ರ ಬರೆದು ಕೋರ್ಟ್ ಆದೇಶವನ್ನು ಕಾರ್ಯಗತಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.