ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಸತ್ಯವನ್ನ ಆತ್ಮೀಯ ವಾಗಿ ಸ್ವಾಗತಿಸಿದ್ದ ರಜತ್ : ಶೆಟ್ಟರ್ ಗೆ ಸಾಥ್ ನೀಡಿದ್ದು ಕೂಡ ಅಷ್ಟೇ ಸತ್ಯ!

Powercity news

ಹುಬ್ಬಳ್ಳಿ: ಈ ಬಾರಿಯ ಸಾರ್ವತ್ರಿಕ ಚುನಾವಣೆಯ ಕೇಂದ್ರ ಬಿಂದುವಾಗಿದ್ದ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಸಮಯದಲ್ಲಿ ಮತ್ತು ಚುನಾವಣೆ ಸಂದರ್ಭದಲ್ಲಿ ನಡೆದ ಕೆಲವು ವಿಶೇಷ ಸಂಗತಿಗಳು ಜರುಗಿದವು ಇವುಗಳನ್ನ ಜನತೆ ತಿಳಿಯಲೇ ಬೇಕಾಗಿದೆ.

ಹೌದು ತಮ್ಮ ಸಂಬಂಧಿಗಳ ಮೂಲಕ ಶೆಟ್ಟರ್ ಕೊನೆಯ ಸಮಯದಲ್ಲಿ AICC ಮುಖ್ಯ ವ್ಯಕ್ತಿಯ ಜೊತೆ ಸಂವಹನ ನಡೆಸಿ ಟಿಕೆಟ್ ಪೈನಲ್ ಮಾಡಿಕೊಂಡು ಕಾಂಗ್ರೆಸ್ ಸೇರಲು ತಯಾರಾಗಿದ್ದರು.

ಮೊದಲ ಲಿಸ್ಟ್ ನಲ್ಲಿ ಬರಲಿದ್ದ ತನ್ನ ಹೆಸರನ್ನು ರಜತ್ ಉಳ್ಳಾಗಡ್ಡಿಮಠ ಆಂತರಿಕ ಕಲಹ ಆಗಬಾರದು ಅಂತ ಕೊನೆಯ ಲಿಸ್ಟ್ ನಲ್ಲಿ ಕೇಳಿದ್ದರು, ಅದೇ ಸಮಯದಲ್ಲಿ ನಾಮಪತ್ರ ತಯಾರಿಯಲ್ಲಿ ಇರುವಾಗ ದೆಹಲಿಯಿಂದ ಕರೆಮಾಡಿದ ಹೈ ಕಮಾಂಡ್ ಜಗದೀಶ್ ಶೆಟ್ಟರ್ ಅವರನ್ನ ಬೆಂಗಳೂರಿಗೆ ಕರೆತರುವ ಜವಾಬ್ದಾರಿ ನೀಡಿದರು. ಅಲ್ಲದೆ ಈ ಬಾರಿಯ ಚುನಾವಣೆಯಲ್ಲಿ ಮಾಜಿ ಸಿ ಎಮ್ ಶೆಟ್ಟರ್ ಅವರ ಪರವಾಗಿ ನಿಮ್ಮ ಹೃದಯವಂತಿಕೆ ಕೂಡ ಪ್ರಮುಖವಾಗಿದೆ ಅಂತಾನೂ ಹೇಳಿದರು. ಇದಕ್ಕೆ ತಕ್ಷಣ ಒಪ್ಪಿದ ರಜತ್ ಉಳ್ಳಾಗಡ್ಡಿಮಠ ಉದ್ಯಮಿಯೊಬ್ಬರ ಸಹಾಯದಿಂದ ಖಾಸಗಿ ವಿಮಾನ ಬುಕ್ ಮಾಡಿ,ಮಾದ್ಯಮದ ಕಣ್ಣು ತಪ್ಪಿಸಿ ಶೆಟ್ಟರ್ ಅವರನ್ನ ಬೆಂಗಳೂರಿಗೆ ಕರೆದುಕೊಂಡು ಹೋಗಿ ಪಕ್ಷ ಸೇರಿಸಿ ಬಿ ಪಾರಂ ನೊಂದಿಗೆ ಹುಬ್ಬಳ್ಳಿಗೆ ಮರಳಿದ್ದರು.

ಶೆಟ್ಟರ್ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಕಾಂಗ್ರೆಸ್ ಶೈಲಿಯ ಕೆಲ ಪರಿ ಪಾಠಗಳು ಅವರಿಗೆ ಇನ್ನಿಲ್ಲದೆ ಕಾಡತೊಡಗಿದವು,ಈ ವೇಳೆ ಕೆಲವರು ಕೇವಲ ಹಣಕ್ಕಾಗಿ ಶೆಟ್ಟರ್ ಹಿಂದೆ ಮುಂದೆ ಸುತ್ತಿದರೆ ಮತ್ತೆ ಕೆಲವರು ಪೋಟೋ ಪೋಸ್ ನೀಡಲು ಪ್ರತಿದಿನ ಸುತ್ತುತ್ತಿದ್ದರು,ಅಲ್ಲದೆ ಶೆಟ್ಟರ್ ಕೂಡ ಕೆಲ ಮುಖಂಡರ ವಿಶ್ವಾಸಕ್ಕೆ ಪಡೆದುಕೊಳ್ಳಲು ಲಕ್ಷಾಂತರ ಹಣ ನೀಡಿ,ಪಕ್ಷದಲ್ಲಿ ಗಟ್ಟಿಯಾಗಿ ನಿಲ್ಲವ ಪ್ರಯತ್ನ ಮಾಡಿದ್ದಾರೆ.

ರಜತ್ ಉಳ್ಳಾಗಡ್ಡಿಮಠ ತಾವೇ ಅಭ್ಯರ್ಥಿ ಅಂತ ಕೋಟಿ ಕೋಟಿ ಹಣ ಮೊದಲೇ ಕ್ಷೇತ್ರದಲ್ಲಿ ಖರ್ಚು ಮಾಡಿದ್ದರು, ತಮ್ಮ ಪೌಂಡೇಶನ್ ಹೆಸರಲ್ಲಿ ಕುಕ್ಕರ ಪಾತ್ರೆ,ಆಸ್ಪತ್ರೆ, ದೇವಸ್ಥಾನ, ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ, ದಿನಸಿ ವಿತರಣೆ, ಕಿಟ್ ವಿತರಣೆ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ದ್ವಜ ಹಾರಿಸುವ ತಯಾರಿಯಲಿದ್ದರು ಇದನೆಲ್ಲ ಹತ್ತಿರದಿಂದ ಅರಿತಿದ್ದ ಶೆಟ್ಟರ್ ರಜತ್ ಅವರಿಗೆ ಕೊಂಚ ಹಣಕಾಸು ಸಹಾಯ ಮಾಡಲು ಹೋಗಿದ್ದರು

ರಜತ್ ಉಳ್ಳಾಗಡ್ಡಿಮಠ ಅಂದಿನ ದಿನ ಜಗದೀಶ್ ಶೆಟ್ಟರ್ ಅವರಿಗೆ ತುಂಬು ಭರವಸೆ ನೀಡಿ ತನ್ನನ್ನು ತಮ್ಮ ಮೂರನೇ ಮಗ ಎಂದು ಭಾವಿಸುವಂತೆ ವಿನಯದಿಂದ ಹೇಳಿ ಪ್ರಚಾರ ಕಾರ್ಯದಲ್ಲಿ ದುಮುಕಿದ್ದರು ಇತ್ತ ಕೆಲವರು ಮಾತ್ರ ರಜತ್ ಶೆಟ್ಟರ್ ಜುಗಲ್ ಬಂದಿ ಸ್ವಾಭಿಮಾನ ಮತ್ತು ತ್ಯಾಗದ ಟ್ಯಾಗ್ ಲೈನ್ ಇಟ್ಟುಕೊಂಡೆ ಭರ್ಜರಿ ಪ್ರಚಾರಕ್ಕೆ ಮುಂದಾಳತ್ವ ವಹಿಸಿದ್ದರು.

ಕೆಪಿಸಿಸಿ ಅಧ್ಯಕ್ಷರು ನೀಡಿದ ಸೆಂಟ್ರಲ್ ಉಸ್ತುವಾರಿಯನ್ನು ಅಚ್ಚು ಕಟ್ಟಾಗಿ ನಿರ್ವಹಿಸಿ ಯಾವುದೇ ಬಂಡಾಯ ಏಳದೆ, ಕೈ ಕಟ್ಟಿ ಕೂರದೆ ಕಾಲಿಗೆ ಚಕ್ರ ಸುತ್ತಿಕೊಂಡು ರಜತ್ ಚುನಾವಣೆಯ ಪ್ರಚಾರ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಮತ ಕೇಳಿದ್ದಾರೆ, ಅಲ್ಲದೆ ಶೆಟ್ಟರ್ ಭರವಸೆ ಕೂಡ ಗೆದ್ದಿದ್ದಾರೆ ಇನ್ನೂ ನಾಳೆ ದಿನ ಪಲಿತಾಂಶ ಬರಲಿದ್ದು ಏನಾಗಲಿದೆ ಎಂದು ಕುತಹಲದಿಂದ ಎಲ್ಲರೂ ಕಾಯುವಂತಾಗಿದೆ

✍️ಮಲ್ಲಿಕ್ ಬೆಳಗಲಿ!!!!

Related Articles

Leave a Reply

Your email address will not be published. Required fields are marked *

Back to top button