BELAGAVIBJPBody buildersBREAKING NEWSCITY CRIME NEWSDHARWADPolicePolitical newsಧಾರವಾಡ

ಯೊಗೀಶ್ ಗೌಡ ಕೊಲೆ ಪ್ರಕರಣ ಕೆಲವರ ಜಾಮೀನು ರದ್ದು”ವಿಕೆ”ಗೆ ಬಿಸಿ ಉಸಿರು..!

POWER CITY

POWER CITY NEWS:HUBBALLIಧಾರವಾಡ ಜಿ.ಪಂ. ಸದಸ್ಯ ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಚಂದ್ರಶೇಖರ್‌ ಇಂಡಿ ಅಲಿಯಾಸ್‌ ಚಂದುಮಾಮನ ಜಾಮೀನನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರದ್ದುಪಡಿಸಿದೆ. ಸಾಕ್ಷ್ಯ ನಾಶ ಮತ್ತು ಬೆದರಿಕೆ ಆರೋಪದ ಮೇಲೆ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಚಂದ್ರಶೇಖರ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ವಿನಯ್‌ ಕುಲಕರ್ಣಿ ಜಾಮೀನು ವಿಷಯದಲ್ಲಿ ಸುಪ್ರೀಂಕೋರ್ಟ್‌ ಮೊರೆ ಹೋಗಲು ಸಿಬಿಐಗೆ ಸೂಚಿಸಲಾಗಿದೆ.

ಆರೋಪಿತರ ಮೇಲೆ ಬೆದರಿಕೆ ಸಾಕ್ಷ್ಯ ನಾಶದ ಹಿನ್ನೆಲೆಯಲ್ಲಿ ಆರೋಪಿಗಳಾದ ಚಂದ್ರಶೇಖರ್‌, ಶಾಸಕ ವಿನಯ್‌ ಕುಲಕರ್ಣಿ, ಅಶ್ವತ್ಥ್‌ ಗೌಡ ಜಾಮೀನು ರದ್ದುಪಡಿಸುವಂತೆ ಕೋರಿ ಸಿಬಿಐ ನ್ಯಾಯಾಲಯದಲ್ಲಿಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಾಲಯ, ಆರೋಪಿ ಚಂದ್ರಶೇಖರ್‌ ಜಾಮೀನು ರದ್ದುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಚಂದ್ರಶೇಖರ್‌ ಇದೇ ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು

Related Articles

Leave a Reply

Your email address will not be published. Required fields are marked *