ಧಾರವಾಡ

ಆರೋಗ್ಯ ಸಚಿವರೇ ನೀವು ನೋಡಲೇ ಬೇಕಾದ ಸ್ಟೋರಿ ಇದು!

ಧಾರವಾಡ

ಆರೋಗ್ಯ ಸಚಿವರೆ ನೀವು ನೋಡಲೇ ಬೇಕಾದ ಸ್ಟೋರಿ ಇದು!

ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ಸುಶ್ರೂಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರು ಸ್ನೇಹಿತರು ರವಿವಾರ ಸಂಜೆ ಕಲಘಟಗಿ ರಸ್ತೆಯ ಸಮೀಪ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಆದರೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಕ್ಕಿದ್ದರೆ ಭಾಗಶಃ ಇಬ್ಬರು ಬದುಕುಳಿಯುವ ಸಾಧ್ಯತೆ ಹೆಚ್ಚಿತ್ತು ಅಂತಾರೆ‌ ಸ್ಥಳೀಯ ಪ್ರತ್ಯಕ್ಷದರ್ಶಿಗಳು.

ತಲೆಗೆ ಹಾಗೂ ಕೈ ಕಾಲುಗಳಿಗೆ ದೇಹದ ಇತರೆ ಭಾಗಕ್ಕೆ

ತೀವ್ರವಾಗಿ ಪೆಟ್ಟು ಬಿದ್ದು, ಗಂಭೀರ ನೋವಿನಿಂದ ಬಳಲುತ್ತಿದ್ದ ನೂರಅಹ್ಮದ ಮತ್ತು ಜಾವೇದ ಪಠಾಣ ಸಂಕಟ ಪಡುವುದನ್ನ ಕಣ್ಣಾರೆ ಕಂಡರು ನಿಸ್ಸಹಾಯಕ ‌ವಾಗಿದ್ದರು ದಾರಿಹೋಕರು.

ಸರ್ಕಾರಿ ಅಂಬ್ಯುಲೆನ್ಸ್ ಗೆ ಕರೆ ಮಾಡಿದ ಯಾರೋ ಪುಣ್ಯಾತ್ಮರು, ಅಂಬ್ಯುಲೆನ್ಸ್ ಬೇಗ ಬರಬಹುದೆಂಬ ನಿರೀಕ್ಷೆಯಲ್ಲಿದ್ದರು.

ಆದರೆ ಘಟನಾ ಸ್ಥಳಕ್ಕೆ ಪ್ರೋಟೊಕಾಲ್ ಮುಗಿಸಿ ಅಂಬ್ಯುಲೆನ್ಸ್ ಸ್ಥಳ ಮುಟ್ಟು ವಷ್ಟರಲ್ಲಾಗಲೆ ಬಡಪಾಯಿ ಜೀವಗಳೆರಡು ನರಳಿ ನರಳಿ ಪ್ರಾಣ ಬಿಡುವಂತಾಗಿದೆ.

ಸ್ಥಳಕ್ಕೆ ಬರಲು ಅಂಬ್ಯುಲೆನ್ಸ್ ಚಾಲಕ ಹೆಚ್ಚಿನ ಸಮಯ ಕಳಿದಿದ್ದರಿಂದ, ಊರಿನ ಜನ ಸರ್ಕಾರದ ಸಹೀತ ಚಾಲಕನನ್ನ ತರಾಟೆಗೆ ತೆಗೆದುಕೊಂಡರು.

ಅಪಘಾತ ಯಾವುದೆ ಆಗಿರಲಿ ಸ್ಥಳೀಯ ಪೊಲೀಸ್ ಸರ್ವಿಸ್ ನಂತೆ ಅಂಬ್ಯುಲೆನ್ಸ್ ಕೂಡ ಸರಳ ವಾದರೆ ಸಾರ್ವಜನಿಕರಿಗೆ ಮತ್ತಷ್ಟು ಅನೂಕುಲ ವಾಗಲಿದೆ.

ಅಪಘಾತದಲ್ಲಿ ಸಕಾಲಕ್ಕೆ ಚಿಕಿತ್ಸೆ ಕೊಟ್ಟು, ಹಲವರ ಜೀವ ಉಳಿಸಿದ್ದ ಮೃತರು, ಕರೋನಾ ವಾರಿಯರ್ಸ್‌ ಕೂಡ ಹೌದು.

ಈ ಬಗ್ಗೆ ಮತ್ತಷ್ಟು ಕಾಳಜಿ ವಹಿಸಬೇಕಿರುವ ಆರೋಗ್ಯ ಇಲಾಖೆ ಯಾವೇಲ್ಲಾ ಕ್ರಮಕ್ಕೆ ಮುಂದಾಗುತ್ತದೆ ಎಂದು ಕಾದು ನೀಡಬೇಕಿದೆ.

Related Articles

Leave a Reply

Your email address will not be published. Required fields are marked *

Back to top button