assemblyBHAIRATI SURESHCITY CRIME NEWSDHARWADGadagHubballiರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಯಶಸ್ವಿ ಕ್ರಿಕೇಟ್ ಪಂದ್ಯದ ಹಿಂದೆ ಹಿರಿಯರ ಆಶಿರ್ವಾದ ಇದೆ:ಚೇತನ ಹಿರೆಕೆರೂರ!

raja dakhani

POWER CITY NEWS :HUBBALLIಹುಬ್ಬಳ್ಳಿ: ಕಳೆದ ಮೂರ್ನಾಲ್ಕು ದಿನಗಳಿಂದ ನಗರದ ಪ್ರತಿಷ್ಟಿತ ನೆಹರು ಮೈದಾನದಲ್ಲಿ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ದಿ.ಸಹದೇವ ಯಲ್ಲಪ್ಪ ಹಿರೇಕೆರೂರು.ಇವರ ಸ್ಮರಣಾರ್ಥ ವಾಗಿ ಹಮ್ಮಿಕೊಳ್ಳಲಾದ “ಎಚ್ ಪಿ ಎಲ್ ಕ್ರೀಕೇಟ್” ಪಂದ್ಯಾವಳಿಯು ಬಹುಮಾನಗಳ ಸುರಿಮಳೆ ಗೈಯುವುದರ ಮೂಲಕ ಅತ್ಯಂತ ವಿಜೃಂಭನೆಯಿಂದ ತೆರೆಕಂಡಿದೆ.

ಹೌದು ಪಾಲಿಕೆ ಸದಸ್ಯ ಚೇತನ ಹಿರೆಕೆರೂರ ತಮ್ಮ ತಂದೆ ದಿ.ಸಹದೇವ ಯಲ್ಲಪ್ಪ ಹಿರೆಕೆರೂರ ಅವರ ಸ್ಮರಣಾರ್ಥವಾಗಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಎಚ್ ಪಿ ಎಲ್ ಕ್ರೀಕೇಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿತ್ತು.ಸಮಾಜಮುಖಿಯಾಗಿಯಾಗಿರುವ ಯುವ ರಾಜಕಾರಣಿ ಚೇತನ ಹಿರೆಕೆರೂರ ಅವರು “ಪವರ್ ಸಿಟಿ ನ್ಯೂಸ್” ನೊಂದಿಗೆ ಮಾತನಾಡಿ ಅವಳಿನಗರದಲ್ಲಿ ಈಗಾಗಲೇ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತವು ಯುವಕರಲ್ಲಿ ಮಾದಕವಸ್ತು ನಿಷೇಧ ಹಾಗೂ ಅದರಿಂದಾಗುವ ದುಷ್ಪರಿಣಾಮದ ಕುರಿತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ನಿಟ್ಟಿನಲ್ಲಿ ಯುವಕರಲ್ಲಿ ಕ್ರೀಡಾಸಕ್ತಿ ಬೆಳೆಸುವುದರ ಮೂಲಕ ಶಾರಿರಕ ಕ್ರೀಡಾ ಚಟುವಟಿಕೆಗಳತ್ತ ತೊಡುಗುವುದರಿಂದ ದೈಹಿಕ, ಆರೋಗ್ಯ ಹಾಗೂ ಮಾನಸಿಕವಾಗಿ ಸದೃಢರಾಗುವುದರಿಂದ ಆನ್‌ಲೈನ್ ಗೇಮ್ ಹಾಗೂ ಮಾದಕ ವಸ್ತುಗಳ ಸೇವನೆಗಳಿಗೆ ಬಲಿಯಾಗುವುದನ್ನ ತಪ್ಪಿಸಲು ಇದೊಂದು ಸಣ್ಣ ಪೃಯತ್ನ ಎಂದರು.
ಆದ್ದರಿಂದ ತಂದೆಯ ಸ್ಮರಣಾರ್ಥವಾಗಿ ಎಚ್ ಪಿ ಎಲ್ ಕ್ರೀಕೇಟ್ ಪಂದ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಪಂದ್ಯವನ್ನು ಯಶಸ್ವಿಯಾಗಿಸಲು ಶ್ರಮಿಸಿದ ಎಲ್ಲ ಸ್ನೇಹಿತ ಹಾಗೂ ಬಾಂಧವರಿಗೆ ಅಭಿನಂದನೆ ತಿಳಿಸಿದರು.

ಇನ್ನೂ ಪಂದ್ಯದ ಅಂತಿಮವಾಗಿ ನಡೆದ ನೇರ ಹಣಾಹಣಿಯಲ್ಲಿ ಎಫ್ ಎಮ್ ೧೧ ತಂಡ ಹಾಗೂ ಕಿತ್ತೂರು ಸ್ಟಾರ್ ನಡುವೆ ನಡೆದ ಪಂದ್ಯವು ರೋಚಕ ಪ್ರದರ್ಶನ ನೀಡುವ ಮೂಲಕ ಕ್ರೀಕೇಟ್ ಪ್ರೇಮಿಗಳಿಗೆ ಭರ್ಜರಿ ಪ್ರದರ್ಶನ ತೋರಿದವು. ಅಂತಮವಾಗಿ ಎಫ್ ಎಮ್ ೧೧ತಂಡವು ಜಯಭೇರಿ ಬಾರಿಸುವ ಮೂಲಕ ಪ್ರಥಮ ಬಹುಮಾನ ೧೫೦.೦೦೦ರೂ. ನಗದು ಹಾಗೂ ಉತ್ತಮ ಬ್ಯಾಟ್ಸ್‌ಮನ್ ಹಾಗೂ ಉತ್ತಮ ಆಟ ಪ್ರದರ್ಶನಕ್ಕೆ ಬಹುಮಾನವಾಗಿ ಒಂದು ಆಕ್ಟಿವಾ ಹಾಗೂ ಟಿವಿಯೊಂದನ್ನು ತಮ್ಮದಾಗಿಸಿಕೊಂಡ ಅರ್ಜುನ್ ಭೋಸ್ಲೆ ಪಂದ್ಯ ಶ್ರೇಷ್ಠ ಆಟಗಾರ ಎನಿಸಿಕೊಂಡರು.

ದ್ವಿತೀಯ ಬಹುಮಾನವಾಗಿ ಕಿತ್ತೂರು ಸ್ಟಾರ್ ತಂಡವು ೭೫೦೦೦ರೂ‌.ಗಳ ನಗದು ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿತು.

ಇ ವೇಳೆ ಸೇಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ,ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರ ಹಾಗೂ ಮಾಜಿ ಪಾಲಿಕೆ ಸದಸ್ಯ ಶಿವು ಹಿರೆಕೆರೂರ ಲ,ಹಿರಿಯ ಪತ್ರಕರ್ತ ಮಹೇಂದ್ರ ಚವ್ಹಾನ, ಪ್ರಶಸ್ತಿ ಕಾರ್ಯಕ್ರಮದಲ್ಲಿ ಬಾಗವಹಿಸಿ ವಿಜೇತ ತಂಡ ಸೇರಿದಂತೆ ಪಂದ್ಯದಲ್ಲಿ ಪಾಲ್ಗೊಂಡ ಎಲ್ಲ ಕ್ರೀಡಾ ತಂಡಗಳಿಗೆ ಅಭಿನಂದನೆ ಸಲ್ಲಿಸಿದರು.

Related Articles

Leave a Reply

Your email address will not be published. Required fields are marked *