BREAKING NEWSCITY CRIME NEWSDHARWADLife StylePolicePolitical news
ಕಿಮ್ಸ್ ಕಟ್ಟಡದ ಮೇಲಿಂದ ಬಿದ್ದ ಕಾರ್ಮಿಕನ ಸ್ಥಿತಿ ಗಂಭೀರ:ಗುತ್ತಿಗೆದಾರ ನಾಪತ್ತೆ..!
CRIME TIME

POWERCITY NEWS : HUBLI/ಕಟ್ಟಡದ ಮೇಲೆ ಬಣ್ಣ ಬಳೆಯಲು ಬಂದಿದ್ದ ಕೂಲಿ ಕಾರ್ಮಿಕನೋರ್ವ ಆಯತಪ್ಪಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿರುವ ಘಟನೆ ಇಲ್ಲಿನ ವಿದ್ಯಾ ನಗರದ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ನಡೆದಿದೆ.
ಗಾಯಗೊಂಡ ವ್ಯಕ್ತಿಯನ್ನು ಹಳೆಹುಬ್ಬಳ್ಳಿಯ ನಿವಾಸಿ ವಸೀಂ (೩೪)ಎಂದು ಗುರುತಿಸಲಾಗಿದೆ.ಕಿಮ್ಸ್ ಆವರಣದ ಕಟ್ಟಡವೊಂದಕ್ಕೆ ಬಣ್ಣ ಬಳೆಯಲು ಕೂಲಿ ಅರಸಿ ಬಂದಿದ್ದ ವ್ಯಕ್ತಿ ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಕಟ್ಟಡದ ಮೇಲಿಂದ ಬಿದ್ದು ಕೈ ಕಾಲು ಮೂಳೆ ಮುರಿದಿದ್ದರಿಂದ ದಿಕ್ಕೆತೋಚದಂತಾಗಿದ್ದು ಬಡ ಕುಟುಂಬ ಕಣ್ಣೀರ ಹಾಕುತ್ತಿದೆ.
ಇನ್ನೂ ಗಾಯಗೊಂಡ ವ್ಯಕ್ತಿಯ ಪತ್ನಿಗೆ ಗುತ್ತಿಗೆದಾರ ನೀಡಿದ್ದ ಭರವಸೆ ಈಡೇರಿಲ್ಲ ಈ ದಿಸೆಯಲ್ಲಿ ಗುತ್ತಿಗೆದಾರನ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದು ಸಂಭಂದಪಟ್ಟ ಅಧಿಕಾರಿಗಳು ಇ ಬಗ್ಗೆ ಗಮನಹರಿಸಿ ನ್ಯಾಯ ದೊರಕಿಸಿ ಕೊಡಬೇಕಿದೆ.