BREAKING NEWSDAVANGEREDHARWADL&TLife StylePolitical newsTWINCITYಚಿತ್ರದುರ್ಗಬೆಂಗಳೂರು

ಹಜರತ್ ಫಕ್ರದ್ದೀನ್ ಶಾ ಖಾದ್ರಿಯವರ ಗೋರಿಯಲ್ಲಿ ಉಸಿರಾಟದ ಸಂಕೇತ..?

NEWS

POWER CITY NEWS:ಚಿತ್ರದುರ್ಗ: ಇಲ್ಲಿನ ಬಸವೇಶ್ವರ ಸಿನಿಮಾ ಮಂದಿರದ ಬಳಿಯಿರುವ ಹಜರತ್ ಫಕ್ರುದ್ದಿನ್ ಶಾ ಖಾದ್ರಿ ದರ್ಗಾದಲ್ಲಿ ಕೆಲವು ಅಚ್ಚರಿಯ ಘಟನೆಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.
ಅಂದಾಜು 250 ವರ್ಷಗಳಷ್ಟು ಹಳೆಯ ಗೋರಿ ಇದಾಗಿದ್ದು ಇದೀಗ ಈ ಗೊರಿಯಲ್ಲಿ ಉಸಿರಾಟದ ಅನುಭವ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ. ಇದನ್ನು ಸ್ಥಳೀಯ ಫಖ್ರುದ್ದಿನ್ ಶಾ ಬಾಬಾ ಖಾದ್ರಿಯವರ ಭಕ್ತರು ಜೀವಂತ ಪವಾಡ ಎಂದು ಹೇಳಿದ್ದಾರೆ.

ಹೌದು, ದರ್ಗಾಗಳಲ್ಲಿ ಸೂಫಿ ಸಂತರುಗಳು ಕಾಲಾನಂತರದ ಬಳಿಕ ಅವರ ಗೋರಿಯನ್ನು(ಸಮಾಧಿ) ನಿರ್ಮಿಸಲಾಗುತ್ತದೆ. ಅದೇ ರೀತಿ 250 ವರ್ಷಗಳಷ್ಟು ಹಳೆಯದಾದ ಈ ಗೋರಿಯಲ್ಲಿ ಇದೀಗ ಉಸಿರಾಡುವ ಅನುಭವವಾಗುತ್ತಿದೆಯಂದು ಪ್ರತ್ಯಕ್ಷ ಗೋರಿಯ ಮೇಲೆ ಮುಚ್ಚಿರುವ ಹೊದಿಕೆಯಲ್ಲಿ ಏರಿಳಿತ ಕಂಡುಬರುತ್ತಿದೆ ಎನ್ನಲಾಗಿದೆ. ಇದು ಸೂಫಿ ಸಂತ ಹಜರತ್ ಫಕ್ರುದ್ದಿನ್ ಶಾ ಖಾದ್ರಿಯವರ ಪವಾಡ ಹಾಗೂ ಉಸಿರಾಟದ ಸಂಕೇತ ಎಂದು ಜನರು ನಂಬುತ್ತಿದ್ದಾರೆ.

ಈ ಸುದ್ದಿ ಇದೀಗ ರಾಜ್ಯದ್ಯಂತ ಕಾಡ್ಗಿಚ್ಚಿನಂತೆ ಹರಡಿದ್ದು, ಘಟನೆಯನ್ನು ಕಣ್ಣಾರೆ ಕಾಣಲು ಜನರು ತಂಡೋಪ ತಂಡವಾಗಿ ದರ್ಗಾಕ್ಕೆ ಆಗಮಿಸುತ್ತಿದ್ದಾರೆ. ಸ್ಥಳೀಯರು ಈ ಘಟನೆಯನ್ನು ಪವಾಡ ಎಂದು ಭಾವಿಸಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *