ಶಾಶ್ವತ ಬೆಳೆ ಖರಿದಿ ಕೇಂದ್ರಕ್ಕೆ ನ್ಯಾಯಾಲಯದ ಆದೇಶ:ಸರ್ಕಾರದ ನಿರ್ಲಕ್ಷ್ಯ..!
DAKHANI

POWER CITYNEWS: HUBBALLIಹುಬ್ಬಳ್ಳಿ: ರೈತರು ಬೆಳೆದ ಬೆಳೆಗಳಿಗೆ ಶಾಶ್ವತ ಬೇಲೆ(FIX) ನಿಗದಿ ಪಡಿಸುವಂತೆ ಆಗ್ರಹಿಸಿ ರೈತ ಸೇನಾ ಕರ್ನಾಟಕ ಸಂಘಟನೆ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ಉಚ್ಛನ್ಯಾಲಯವು(HIGHCOURT) ಸರ್ಕಾರಕ್ಕೆ ನಿರ್ದೇಶನ ನೀಡಿದರು ಸಹ ಸರ್ಕಾರ(GOVT) ಯಾವುದೇ ಕ್ರಮಕ್ಕೆ ಮುಂದಾಗದೆ ಸರ್ಕಾರ ನ್ಯಾಯಾಲಯದ ಆದೇಶ ಉಲ್ಲಂಘಿಸಿದೆ. ಎಂದು ರೈತಪರ ಹೋರಾಟಗಾರ ವೀರೇಶ ಸೊಬರದಮಠ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿ ಕುರಿತು ಮತನಾಡಿದ ಅವರು ಕಳೆದ 2013ರ ರಿಂದಲೇ ರಾಜ್ಯದ ರೈತರಿಗೆ ಶಾಶ್ವತ ಬೇಳೆ ಖರಿದಿ ಕೇಂದ್ರಗಳ ಸ್ಥಾಪನೆಗೆ ಸರ್ಕಾರ ಮುಂದಾಗಲು ಕುರಿತಂತೆ ಹೋರಾಟ ಮಾಡುತ್ತಲೆ ಬಂದಿದ್ದೆವೆ. ಆದರೆ ರೈತಸೇನಾ ಕರ್ನಾಟಕ ಸಂಘನೆ ಕಳೆದ 2021ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PAL) ಕರ್ನಾಟಕ ಉಚ್ಚನ್ಯಾಯಾಲಯ ಬೆಂಗಳೂರಿನಲ್ಲಿ ದಾಖಲಿಸಿತ್ತು. ವಾದ ವಿವಾದಗಳನ್ನು ಆಲಿಸಿದ ನಂತರ ಉಚ್ಛನ್ಯಾಯಾಲಯವು ರೈತರು ಬೆಳೆದ ಬೆಳೆಗಳಿಗೆ ಸರ್ಕಾರ ಶಾಶ್ವತ ಬೇಲೆ ನೀಡಲು ವೈಜ್ಞಾನಿಕ ಸಮೀಕ್ಷೆಯ ಮೂಲಕ ಜಿಲ್ಲಾವಾರು ಶಾಶ್ವತ ಬೆಳೆ ಖರಿದಿ ಕೇಂದ್ರ ಸ್ಥಾಪನೆಗೆ ಮುಂದಾಗ ಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕೆಂದು ಆದೇಶ ನೀಡಿದೆ.
ಆದೇಶದ(ORDER) ಪ್ರತಿಗಳನ್ನು ಈಗಾಗಲೇ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳಿಗೆ ನೀಡಲಾಗಿದೆ. ಆದ್ರೆ ಇದುವರೆಗೂ ನ್ಯಾಯಾಲಯದ ಆದೇಶದಂತೆ ಸರ್ಕಾರ ಯಾವುದೆ ಸಮೀಕ್ಷೆಯಾಗಲಿ, ಸಭೆಯಾಗಲಿ ಕರೆಯದೆ ಸ್ಪಷ್ಟ ನಿರ್ಲಕ್ಷ್ಯ ಮಾಡಿದೆ.
ಇನ್ನೂ ರೈತರು ಬೆಳೆದ ಬೆಳೆಗಳು ಸ್ವತಃ ರೈತರಿಗೆ ತಲುಪದೆ ನೇರವಾಗಿ ಮಧ್ಯವರ್ತಿಗಳ ಪಾಲಾಗುವುದಲ್ಲದೆ ಅವರ ಹಸ್ತಕ್ಷೇಪದಿಂದ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕಿದೆ.
ಒಂದು ವೇಳೆ ಸರ್ಕಾರ ಸೂಕ್ತವಾದ ನಿರ್ಧಾರಕ್ಕೆ ಮುಂದಾಗದಿದ್ದರೆ ನ್ಯಾಯಾಂಗ ನಿಂದನೆ ಪ್ರಕರಣ ಹೂಡುವ ಮೂಲಕ ಸರ್ಕಾರದ ವಿರುದ್ಧ ಬೀದಿಗಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಸುದ್ದಿ ಗೋಷ್ಠಿಯಲ್ಲಿ ರೈತ ಸೇನಾ ಕರ್ನಾಟಕದ ಹೋರಾಟಗಾರ ವಿರೇಶ್ ಸೊಬರದ ಮಠ,ಗುರು ರಾಯನಗೌಡ್ರು,ಮಲ್ಲನ್ನ ಅಲೇಕೆರ, ಜಯಂತ ವಾಡೇದ ಉಪಸ್ಥಿತರಿದ್ದರು.