ಅಲೂಡೆಕೋರ್ ಗೋದಾಮಿಗೆ ಚಾಲನೆ ನೀಡಿದ ಶಾಸಕ ಟೆಂಗಿನಕಾಯಿ!
dakhani

POWER CITYNEWS :ಹುಬ್ಬಳ್ಳಿ:ನಗರದ ಗೋಕುಲ ರಸ್ತೆಯಲ್ಲಿ ಆರಂಭಗೊಂಡ ಅಲೂಡೆಕೋರ್ ಕಂಪನಿಯ ಹುಬ್ಬಳ್ಳಿಯ ನೂತನ ಗೋದಾಮನ್ನು ಶಾಸಕ ಮಹೇಶ ಟೆಂಗಿನಕಾಯಿ ಅವರು ಉದ್ಘಾಟಸಿದರು.
ಪತ್ರಿಕಾಗೋಷ್ಠಿ ಕುರಿತು ಮಾತನಾಡಿದ ಅಲೂಡೆಕೂರ ಕಂಪನಿಯ ರಾಜ್ಯದ ಪ್ರಾದೇಶಿಕ ಮುಖ್ಯಸ್ಥರಾದ ರಾಘವೇಂದ್ರ, ಕಳೆದ 22 ವರ್ಷಗಳಿಂದ “ಅಲೂಡೆಕೋರ್” ಗ್ರಾಹಕರಿಗೆ ಅವರ ಅಭಿರುಚಿಗೆ ತಕ್ಕಂತೆ ಸೇವೆ ನೀಡುತ್ತಿದೆ. ದೇಶದ 250 ನಗರದಲ್ಲಿ ಕಂಪನಿಯ ಉತ್ಪನ್ನಗಳು ದೊರೆಯುತ್ತಿದ್ದು, 19 ಗೊದಾಮುಗಳನ್ನು

ಹೊಂದಿದೆ ಎಂದರು.
ಕಂಪನಿಯ ಮಾಲೀಕರಾದ ಅಶೋಕ ಬೈಯಾ ಅವರ ನೇತೃತ್ವದಲ್ಲಿ ಕಂಪನಿ ಅತ್ಯುತ್ತಮ ರೀತಿಯಲ್ಲಿ ನಡೆದುಕೊಂಡು ಬರುತ್ತಿದ್ದು, 1050 ಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಟ್ಟಿದೆ ಎಂದರು.
ಅಲೂಡೆಕೋರ್ ಭಾರತದ ಮೆಟಲ್ ಕಾಂಪೋಸಿಟ್ ಪ್ಯಾನೆಲ್ ಉದ್ಯಮದಲ್ಲಿ ಮುಂಚೂಣಿಯಲ್ಲಿದ್ದು, ನಾವೀನ್ಯತೆ, ಗುಣಮಟ್ಟ ಮತ್ತು ಸ್ಥಿರತೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಪೂರಣತೆಗೆ ತೋರಿದ ನಿಷ್ಠೆಯಿಂದ ಕಂಪನಿಗೆ ಯುರೋಪಿಯನ್ ಅಲ್ಯೂಮಿನಿಯಂ ಪ್ರಶಸ್ತಿ ಲಭಿಸಿದೆ ಎಂದರು.
ಕಂಪನಿಯು ಹರಿದ್ವಾರದಲ್ಲಿ ಉತ್ಪಾದನೆ ಘಟಕವನ್ನು ಹೊಂದಿದ್ದು, ಗ್ರಾಹಕರಿಗೆ ಸ್ಪೆಷಲ್ ಸಿರಿಸ್ ನೀಡುತ್ತಿದೆ. ಈಗಾಗಲೇ ದೇಶದಾದ್ಯಂತ 2 ಲಕ್ಷಕ್ಕೂ ಅಧಿಕ ಕಟ್ಟಡಗಳನ್ನು ಸುಂದರಗೊಳಿಸಲಾಗಿದೆ. 45 ಸಾವಿರ ಕಟ್ಟಡಗಳು 10 ವರ್ಷ ಪೂರೈಸಿದೆ. ಕಂಪನಿಯ ಉತ್ಪನ್ನಗಳಿಗೆ 10 ವರ್ಷ ಗ್ಯಾರಂಟಿ ಸಹ ನೀಡಲಾಗುತ್ತಿದೆ ಎಂದು ದಕ್ಷಿಣ ಭಾರತದ ಪ್ರಧಾನ ವ್ಯವಸ್ಥಾಪಕರಾದ ಸಂತೋಷ ಖಾನಾವಳಿ ತಿಳಿಸಿದರು.

ಕಟ್ಟಡಗಳಿಗೆ ಬಣ್ಣ ಬದಲು ಎಸಿಪಿ ಬಳಕೆ ಇತ್ತಿಚೆಗೆ ಹೆಚ್ಚಾಗಿದೆ. ಈ ಕಾರಣದಿಂದ ಎಲ್ಲ ಮಾದರಿಯಲ್ಲಿ ಗ್ರಾಹಕರಿಗೆ ಸೇವೆ ನೀಡುತ್ತಿದೆ. ನಿರಂತರವಾಗಿ ನಿರ್ವಹಣೆ ಮಾಡುವುದರಿಂದ ಹೆಚ್ಚಿನ ಬಾಳಿಕೆ ಬರಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಏರಿಯಾ ಮ್ಯಾನೇಜರ್ ಸುನಿಲ್ ಗೌಡ ಉತ್ತರಕರ್ನಾಕ,ಎಸ್ ಡಿ ರಾಘವೇಂದ್ರ, ಪ್ರಧಾನ ವ್ಯವಸ್ಥಾಪಕ ಸಂತೋಷ ಎಮ ಕನವಳ್ಳಿ,ಆಯಿಷಾನ್ ಅಲಿ,ಯೋಗೇಶ ಹಿರೇಮಠ,ಪ್ರವೇಶ ಚೌಧರಿ,ಅವಿನಾಶ್ ಗೌಡ್ ನಾಗೇಶ ಆರ್.ಇದ್ದರು.