BREAKING NEWSCITY CRIME NEWSL&TLife StylePolicePolitical newsTWINCITYVINAYKULKARNIಬೆಂಗಳೂರು

ಸುಪ್ರೀಂಕೋರ್ಟ್‌ನಲ್ಲಿ “ದರ್ಶನ್” ಭವಿಷ್ಯ..!?

POWER CITY

POWER CITY NEWS:BANGALURU

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್‌ (Darshan), ಪವಿತ್ರಾಗೌಡ ಸೇರಿ ಇತರೆ ಆರೋಪಿಗಳ ಜಾಮೀನು ಭವಿಷ್ಯ ಇಂದು ಸುಪ್ರೀಂ ಕೋರ್ಟ್ ‌ನಲ್ಲಿ ನಿರ್ಧಾರವಾಗಬೇಕಿತ್ತು. ಆದರೆ ಈಗಾಗಲೇ ಸರ್ಕಾರದ ಪರ ವಿಚಾರಣೆ ನಡೆಸಿರುವ ಸುಪ್ರಿಂ ಕೋರ್ಟ್ (Supreme Court) ಇಂದು ದರ್ಶನ್ ಸೇರಿ 7 ಆರೋಪಿಗಳ ಪರ ವಾದವನ್ನು ಆಲಿಸಬೇಕಿತ್ತು.ಆರೋಪಿಗಳು ಹೈ ಪ್ರೋಫೈಲ್ ಹೊಂದಿರುವ ಕಾರಣ ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾ.ಜೆ ಬಿ ಪಾರ್ದಿವಾಲಾ ನೇತೃತ್ವದ ದ್ವಿಸದಸ್ಯ ಪೀಠ ಮುಂದುವರಿಸಲಿದೆ. ರಾಜ್ಯ ಸರ್ಕಾರ ಪರ ವಕೀಲರ ವಾದ ಆಲಿಸಿ, ದಾಖಲೆಗಳನ್ನು ಸ್ವೀಕರಿಸಿರುವ ಪೀಠ, ಆರೋಪಿಗಳ ಪರ ವಕೀಲರ ವಾದ ಮಂಡನೆ ಆಲಿಸಿದೆ ಎನ್ನಲಾಗಿದ್ದು. ನಟ ದರ್ಶನ್‌ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮುಂದೂಡಿದೆ. ಗುರುವಾರ ದರ್ಶನ್‌ ಜಾಮೀನು ಭವಿಷ್ಯ ನಿರ್ಧಾರ ಆಗಲಿದೆ ಎಂದು ವರದಿಯಾಗಿದೆ.

Related Articles

Leave a Reply

Your email address will not be published. Required fields are marked *