ಮಹದಾಯಿ ವಿಚಾರ ಮುಂದಿನ ವಾರ ಸಿಹಿಸುದ್ದಿ-ಬೊಮ್ಮಾಯಿ..!
DAKHANI

POWER CITYNEWS:HUBBALLI/ನವಲಗುಂದ: ನಮ್ಮ ಭಾಗದ ಸಂಸದರಾದ ಪ್ರಲ್ಲಾದ ಜೋಶಿ(PRAHLADJOSHI), ಜಗದೀಶ ಶೆಟ್ಟರ್(xcm), ಪಿ.ಸಿ.ಗದ್ದಿಗೌಡ್ರ ಅವರೊಂದಿಗೆ ಕೇಂದ್ರ ಸಚಿವರನ್ನು(centralminister) ಮುಂದಿನವಾರ ಭೇಟಿ ಮಾಡಲಿದ್ದೇವೆ. ಆದಷ್ಟು ಬೇಗನೇ ಮಹದಾಯಿ(mahadai) ರೈತ ಹೋರಾಟಗಾರರಿಗೆ ಒಳ್ಳೆಯ ಸುದ್ದಿಯನ್ನು ಕೊಡುತ್ತೇವೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಪಟ್ಟಣಕ್ಕೆ(urban) ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆಯಲ್ಲಿ ಮಹದಾಯಿ ಕಳಸಾ ಬಂಡೂರಿ ರೈತ ಹೋರಾಟ ವೇದಿಕೆಯಿಂದ ಮನವಿ ಸ್ವೀಕರಿಸಿ ಮಾತನಾಡಿದರು. ನದಿಜೋಡಣೆ ವಿಚಾರ ಅಂತಿಮ ಘಟ್ಟಕ್ಕೆ ಬಂದಿದೆ. ಮಹದಾಯಿ ನೀರು ಮಲಪ್ರಭೆಗೆ ಸೇರಿ ಯಲ್ಲಮ್ಮನ ಪಾದದಿಂದ ಬಾದಾಮಿ ಬನಶಂಕರಿ ಪಾದಕ್ಕೆ ಹರಿಯುವವರೆಗೂ ನಾವು ನಿಮ್ಮೊಂದಿಗೆ ಇರುತ್ತೇವೆ ಎಂದರು. (BJP)ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ(x minister) ಮಾತನಾಡಿ, ನೀರಿನ(water) ವಿಚಾರವಾಗಿ ಯಾವುದೇ ಪಕ್ಷದವರಾಗಲಿ ರಾಜಕೀಯ ಮಾಡುವುದು ಬೇಡ. ಏನೇ ಕಾನೂನು ತೊಡಕು ಇದ್ದರೂ ನಮ್ಮ ಭಾಗದ ಸಂಸದರಾದ ಪಲ್ಲಾದ ಜೋಶಿ, ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ(xcm) ಬಗೆಹರಿಸಿ ನಮಗೆ ನೀರು ಕೊಡಿಸುತ್ತಾರೆ ಎನ್ನುವ ಭರವಸೆ ಇದೆ ಎಂದರು. ಎ.ಬಿ. ಹಿರೇಮಠ, ಗಂಗಪ್ಪ ಮನವಿ, ದೇವರಾಜ ದಾಡಿಬಾವಿ, ಬಿ. ಬಿ.ಗಂಗಾಧರಮಠ, ಶಂಕರಗೌಡ್ರ ದಾನಪ್ಪಗೌಡ್ರ, ಸುಭಾಸಗೌಡ ಪಾಟೀಲ, ಮಲ್ಲೇಶ ಉಪ್ಪಾರ, ಬಸನಗೌಡ ಹುನಸಿಕಟ್ಟೆ, ಮುರ್ಗೆಪ್ಪ ಪಲ್ಲೇದ, ರವಿ ತೋಟದ, ಬಸಪ್ಪ ಮುಪ್ಪಯ್ಯನವರ, ಸಿದ್ದಲಿಂಗಪ್ಪ ಹಳ್ಳದ, ನಿಂಗಪ್ಪ ತೋಟದ, ಗಂಗಪ್ಪ ಸಂಗಟಿ, ಗುರಪ್ಪ ಗಡ್ಡಿ, ಸಂಗಪ್ಪ ನೀಡವಣಿ ಇತರರಿದ್ದರು.