“ದರ್ಶನ್ ಫ್ಯಾನ್ಸ್”ಹೆಸರಲ್ಲಿ ಬೆದರಿಕೆ ಪೊಲೀಸ್ ಆಯುಕ್ತರಿಗೆ ದೂರುನಿಡಿದ ರಮ್ಯಾ!
news buero

POWER CITYNEWS:BANGALURU/ಬೆಂಗಳೂರು: ಜಾಲತಾಣ ಮಾಧ್ಯಮಗಳಲ್ಲಿ ಅಸಹ್ಯಕರ ಸಂದೇಶ ರವಾನಿಸಿದ ಹಿನ್ನೆಲೆಯಲ್ಲಿ ನಟ ದರ್ಶನ್ ಫ್ಯಾನ್ಸ್ ಎಂದು ಹೇಳಲಾದ ಕಿಡಗೇಡಿಗಳ ವಿರುದ್ಧ ಕಾನೂನು ಸಮರ ಸಾರಿರುವ ನಟಿ ರಮ್ಯಾ, ಇದೀಗ ಬೆಂಗಳೂರು ಪೊಲೀಸ್ ಆಯುಕ್ತರಿಗೆ (Bangalore police commissioner) ದೂರು ನಿಡಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟಿ ರಮ್ಯಾ, ನಾನು ಸುಪ್ರೀಂಕೋರ್ಟ್ ಆದೇಶ ಒಂದನ್ನು ಜಾಲತಾಣದಲ್ಲಿ(social media) ಶೇರ್ ಮಾಡಿದ್ದೆ. ಇದಕ್ಕೆ ಪ್ರತಿಯಾಗಿ ಕಮೆಂಟ್ ಬಾಕ್ಸ್ನಲ್ಲಿ ತುಂಬಾ ಕೆಟ್ಟದಾಗಿ ಕಮೆಂಟ್ ಹಾಕಿದ್ದಲ್ಲದೆ, ನನಗೆ ವಿವಿಧ ದೂರವಾಣಿಗಳ ಮೂಲಕ ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ಚಿತ್ರದುರ್ಗದ (renukaswami)ರೇಣುಕಾಸ್ವಾಮಿ ಬದಲು ನಿಮ್ಮನ್ನು ಕೊಲೆ ಮಾಡ್ಬೇಕಿತ್ತು. ನಿಮ್ಮನ್ನು ಅತ್ಯಾಚಾರ ಮಾಡ್ತೀವಿ ಎಂದೆಲ್ಲಾ ಅವಹೇಳನಕಾರಿ ಸಂದೇಶ ಕಳುಹಿಸಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಇ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ ಈಗಾಗಲೇ ಪೊಲೀಸ್(police) ಆಯುಕ್ತರಿ ತಿಳಿಸಿದ್ದು ದೂರು ದಾಖಲಿಸಿದ್ದೇನೆ.ಸಮೀಪದಲ್ಲಿ ಸೈಬರ್ ಆಫೀಸ್ ಇದೆ. ಅಲ್ಲಿಗೆ ಫಾರ್ವರ್ಡ್ (forward)ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ. ಅದರಲ್ಲಿ ಒಟ್ಟು 43 ಕಮೆಂಟ್ಗಳನ್ನು ಮೆನ್ಷನ್ ಮಾಡಲಾಗಿದೆ. ತುಂಬಾ ಬೆದರಿಕೆ ಹಾಗೂ ಅಶ್ಲೀಲವಾಗಿ ಕಮೆಂಟ್ ಮಾಡಿದ್ದಾರೆ. ಅವರ ಹೆಸರುಗಳಿವೆ. ಪವಿತ್ರಾ ಗೌಡ ಬಗ್ಗೆ ಮಾತನಾಡಿದರೆ ನಿಮಗೆ ಕೋಪ ಬರುತ್ತೆ. ಆದರೆ ನಮಗೆ ಅಶ್ಲೀಲ ಸಂದೇಶ ಕಳಿಸಿದರೆ ಕೋಪ (angry)ಬರಲ್ವಾ? ನಾವು ಮಹಿಳೆಯರು ಅಲ್ವಾ ಎಂದು ದರ್ಶನ್ ಅಭಿಮಾನಿಗಳನ್ನ ಪ್ರಶ್ನೀಸಿದ್ದಲ್ಲದೆ ಕಮೆಂಟ್ ಹಾಕಿದವರ ವಿರುದ್ಧ ಕಿಡಿಕಾರಿದರು.
ನಾನು ಯಾರಿಗೂ ಹೆದರುವುದಿಲ್ಲ.
ಕನ್ನಡ ಚಿತ್ರರಂಗದಲ್ಲಿ(sandalwood) ಯಾರೂ ಬಹಿರಂಗವಾಗಿ ಮಾತನಾಡುತ್ತಿಲ್ಲ. ನನಗೇನೇ ಕೆಟ್ಟ ರೀತಿಯ ಪೋಸ್ಟ್ ಹಾಕಿ ಟ್ರೋಲ್ ಮಾಡುತ್ತಾರೆ. ಇನ್ನೂ ಸಾಮಾನ್ಯ ಹೆಣ್ಣು ಮಕ್ಕಳ ಗತಿಯೇನು? ರೇಣುಕಾಸ್ವಾಮಿ ಮಾಡಿದ್ದರು ಎನ್ನುವಂತಹ ಕೆಟ್ಟದಾದ ಮೆಸೇಜ್ ಹಾಗೆಯೆ ಈಗ ಕೆಲವರು ಮಾಡುತ್ತಿರುವ ಟ್ರೋಲ್ ಗೂ ಯಾವುದೇ ವ್ಯತ್ಯಾಸ ಇಲ್ಲ.
ಇಂತಹವರಿಗೆ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ದರ್ಶನ್ (darshan)ಅವರು ಒಮ್ಮೆ ಅಭಿಮಾನಿಗಳಿಗೆ ಮನವರಿಕೆ ಮಾಡಬೇಕು. ಫ್ಯಾನ್ಸ್ಗೆ(fans) ಅವರು ಹೇಳಬೇಕು ಎಂದು ಹೇಳಿದ್ದಾರೆ.