assemblybangaluruBJPBREAKING NEWSDHARWADTechTWINCITYರಾಜಕೀಯರಾಜ್ಯಹುಬ್ಬಳ್ಳಿ

ಪ್ರಧಾನಿ ಜನ್ಮದಿನ ನಿಮಿತ್ತ ‘ನಶೆಮುಕ್ತ ಭಾರತ ಜಾಗೃತಿ ಅಭಿಯಾನ!

power citynews:hubballi/ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ನಿಮಿತ್ತ ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ನಗರದ ತೋಳನಕೆರೆ ಬಳಿ ನಮೋ ಯುವ ಓಟಕ್ಕೆ ಚಾಲನೆ ನೀಡಲಾಯಿತು.
ಓಟವು ತೋಳನಕೆರೆಯಿಂದ ಶಿರೂರ ಪಾರ್ಕ್ ರಸ್ತೆ ಮಾರ್ಗವಾಗಿ ಕೆಎಲ್‍ಇ ಸಂಸ್ಥೆಯ ಶ್ರೀ ಕಾಡಸಿದ್ದೇಶ್ವರ ಕಲಾ ಹಾಗೂ ಎಚ್.ಎಸ್. ಕೋತಂಬ್ರಿ ವಿಜ್ಞಾನ ಕಾಲೇಜ್‍ವರೆಗೆ ತಲುಪಿ, ಅಲ್ಲಿಂದ ಮರಳಿ ತೋಳನಕೆರೆಗೆ ಆಗಮಿಸಿತು.
ಮಾಜಿ ಕ್ರಿಕೆಟಿಗ ವೆಂಕಟೇಶ ಪ್ರಸಾದ, ಕೇಂದ್ರ ಸಚಿವ ಪಲ್ಲಾದ ಜೋಶಿ, ಕೆಎಲ್‍ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ ಇತರರು ಓಟದಲ್ಲಿ ಭಾಗಿಯಾಗಿದ್ದರು. ಸಾವಿರಾರು ಜನರು ‘ನಶೆಮುಕ್ತ ಭಾರತ ಜಾಗೃತಿ ಅಭಿಯಾನ’ಕ್ಕೆ ಕೈ ಜೋಡಿಸಿದರು.


ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಮೊಳಗಿದವು. ಓಟದಲ್ಲಿ ಭಾಗಿಯಾದವರಿಗೆ ನಂತರ ಪ್ರಮಾಣ ಪತ್ರ ವಿತರಿಸಲಾಯಿತು. ಇದಕ್ಕೂ ಮೊದಲು ಏರ್ಪಡಿಸಿದ್ದ ಚಾಲನೆ ಸಮಾರಂಭದಲ್ಲಿ ಮಾಜಿ ಕ್ರಿಕೆಟಿಗ ವೆಂಕಟೇಶ ಪ್ರಸಾದ ಮಾತನಾಡಿ, ಮನುಷ್ಯನಿಗೆ ಸದೃಢ ದೇಹ ಬಹಳ ಅವಶ್ಯಕ. ನಾವು ಫಿಟ್ ಇದ್ದರೆ, ದೇಶವೂ ಫಿಟ್ ಇರುತ್ತದೆ. ಪ್ರಧಾನಿ ಮೋದಿ ಅವರು ಖೇಲೋ ಇಂಡಿಯಾ ತರುವ ಮೂಲಕ ಕ್ರೀಡೆಗೆ ವಿಶೇಷ ಆದ್ಯತೆ ನೀಡಿದರು. ಮಕ್ಕಳನ್ನು ಕೇವಲ ಓದಿಗೆ ಸೀಮಿತಗೊಳಿಸಬಾರದು. ಪ್ರತಿದಿನ 2 ಗಂಟೆಯಾದರೂ ಕ್ರೀಡೆಯಲ್ಲಿ ಭಾಗವಹಿಸಲು ಪೆÇ್ರೀತ್ಸಾಹಿಸಬೇಕು ಎಂದು ಪಾಲಕರಿಗೆ ಸಲಹೆ ನೀಡಿದರು.
ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಮಾತನಾಡಿ, ಯಾವ ದೇಶದ ಜನರು ಫಿಟ್ ಆಗಿರುತ್ತಾರೋ ಆ ದೇಶ ಎಲ್ಲ ಕ್ಷೇತ್ರದಲ್ಲೂ ಬಲಿಷ್ಠವಾಗಿರುತ್ತದೆ. ಫಿಟ್ ಇಂಡಿಯಾದ ಮೂಲ ಉದ್ದೇಶ ಭಾರತ 2047ಕ್ಕೆ ಬಲಿಷ್ಠ ಹಾಗೂ ವಿಕಸಿತವಾಗಬೇಕು ಎಂಬುದು. ಪ್ರಧಾನಿ ನರೇಂದ್ರ ಮೋದಿ ಅವರಿಗೆ 75 ವರ್ಷವಾದರೂ ಲವಲವಿಕೆಯಿಂದ ಕೆಲಸ ಮಾಡುತ್ತಿದ್ದಾರೆ.
ಇದಕ್ಕೆ ಕಾರಣ ಅವರು ದೇಹವನ್ನು ಬಲಿಷ್ಠವಾಗಿಟ್ಟುಕೊಂಡಿರುವುದು. ಜಗತ್ತಿನ ಸಮಸ್ಯೆಗಳು ಎದುರಾದಾಗ ಧೈರ್ಯ, ಬುದ್ಧಿವಂತಿಕೆಯಿಂದ ಪರಿಹರಿಸುತ್ತಾರೆ ಎಂದರು.
ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು 75 ವರ್ಷದಲ್ಲಿ ದೇಶದ ಅಭಿವೃದ್ಧಿ ಕಾರ್ಯದಲ್ಲಿ ಉತ್ಸಾಹದಿಂದ ತೊಡಗಿದ್ದಾರೆ. ಭಾರತದ ದೇಶದ ಹೆಸರು ಜಗತ್ತಿಗೆ ತೊರಿಸಿ ಕೊಟ್ಟಿದ್ದಾರೆ. ಯುವಕರು ನಶೆಯಿಂದ ದೂರವಿರಬೇಕು. ನಶೆ ಮುಕ್ತ ಭಾರತ ಆಗಬೇಕು. ಮುಂಬರುವ ದಿನಗಳು ನಿಮ್ಮದಾಗಿದ್ದು, ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಹೇಳಿದರು.


ಶಾಸಕ ಮಹೇಶ ಟೆಂಗಿನಕಾಯಿ, ನಶೆ ಸಮಾಜಕ್ಕೆ ದೊಡ್ಡ ಪಿಡುಗು. ಇದರಿಂದ ಭಾರತ ಮುಕ್ತವಾಗಬೇಕು. ಭಾರತ ಬಲಿಷ್ಠವಾಗಿ ಜಗತ್ತಿಗೆ ಜಗನ್ಮಾತೆಯಾಗಬೇಕು ಎಂದರು. ವಿಧಾನಸಭೆ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ಯುವಕರಿಗೆ ದುಶ್ಚಟಗಳು ಮಾರಕವಾಗಿವೆ. ಬಹುತೇಕ ಅಪರಾಧಗಳು ನಶೆಯಿಂದಲೇ ಆಗಿರುವುದು ಬೆಳಕಿಗೆ ಬಂದಿವೆ. ಆದ್ದ ರಿಂದ ಪಾಲಕರು, ತಮ್ಮ ಮಕ್ಕಳಿಗೆ ದುಶ್ಚಟಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಕೆಎಲ್‍ಇ ತಾಂತ್ರಿಕ ವಿವಿ ಸಹ ಕುಲಾಧಿಪತಿ ಅಶೋಕ ಶೆಟ್ಟರ್, ಮಾಜಿ ಅಶೋಕ ಕಾಟವೆ, ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಯುವ ಘಟಕದ ಜಿಲ್ಲಾಧ್ಯಕ್ಷ ಪ್ರೀತಂ ಅರಿಕೇರಿ ಇತರರಿದ್ದರು. ನಂತರ ತಾಯಿ ಹೆಸರಿನಲ್ಲಿ ಸಸಿ ನೆಡಲಾಯಿತು.

Related Articles

Leave a Reply

Your email address will not be published. Required fields are marked *