ನಂಬಿಗಸ್ಥರೆ ಮಾಡಿದ್ರೂ ಕೊಲೆಗೆ ಸಂಚು!

POWER CITY NEWS:HUBBALLIಹುಬ್ಬಳ್ಳಿ: ಹಣಕಾಸಿನ ವಿಚಾರವಾಗಿ ವ್ಯಕ್ತಿಯೊರ್ವನ ಮೇಲೆ ವಾಹನ ಚಲಾಯಿಸಿ ಕೊಲೆಗೆ ಯತ್ನಿಸಿರುವ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡದಿದೆ.
ಘಟನೆಯಲ್ಲಿ ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಇಲ್ಲಿನ ಮಂಜುನಾಥನಗರದ ನಿವಾಸಿ ತ್ಯಾಗರಾಜ್ ಎಂದು ಗುರುತಿಸಲಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ದ್ವಿಚಕ್ರ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.
ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು.ಮೂವರನ್ನು ವಶಕ್ಕೆ ಪಡೆದಿದ್ದು ಇಬ್ಬರು ತಲೆಮರೆಸಿಕೊಂಡಿದ್ದಾರೆ.
ಘಟನೆ ವಿವರ!
ಹಣದ ವಿಚಾರವಾಗಿ ತ್ಯಾಗರಾಜ್‌ನ ಮೇಲೆ ಪದೆ ಪದೆ ವಿರೇಶ ಹಾಗೂ ನಾಗರಾಜ್ ಚಿಂಚಳ್ಳಿ ಎಂಬಿಬ್ಬರು ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಆದರೆ ಕೊಲೆ ಮಾಡುವ ಮಟ್ಟಕ್ಕೆ ಬೆಳೆದಿದ್ದ ವಿಚಾರ ತ್ಯಾಗರಾಜನ ಗಮನಕ್ಕೆ ಬಂದಿರಲಿಲ್ಲ ಎನ್ನಲಾಗಿದೆ. ಎಂದಿನಂತೆ ಸಲುಗೆಯಿಂದ 13/10/2025ರ ಬೆಳಿಗ್ಗೆ 9:25ರ ಸುಮಾರಿಗೆ ತ್ಯಾಗರಾಜ್‌ಗೆ ದೂರವಾಣಿ ಕರೆ ಮಾಡಿದ ಪಾತಕಿಗಳು ತೋಟದ ಮನೆಯ ಹತ್ತಿರ ತುರ್ತಾಗಿ ಬರುವಂತೆ ಕರೆಯಿಸಿಕೊಂಡಿದ್ದಾರೆ. ಮೊದಲೆ ಸುಸಜ್ಜಿತವಾಗಿದ್ದ ಆರೋಪಿತರು ದಾರಿಯ ಮಾರ್ಗ ಮಧ್ಯದ ನಿರ್ಜನ ಪ್ರದೇಶದಲ್ಲಿ ಬಿಳಿ ಬಣ್ಣದ ಸ್ಕಾರ್ಪಿಯೋ ವಾಹನದ ಮೂಲಕ ಬೆನ್ನು ಬಿದ್ದಿದ್ದಾರೆ. ಇತ್ತ ದ್ವಿಚಕ್ರ ವಾಹನದ ಮೇಲೆ ಪ್ರಯಾಣಿಸುತ್ತಿದ್ದ ತ್ಯಾಗರಾಜ್ ವಾಹನಕ್ಕೆ ಹಿಂದಿನಿಂದ ರಭಸವಾಗಿ ಡಿಕ್ಕಿ ಹೊಡಿದಿದ್ದಾರೆ. ಕೆಳಗೆ ಬಿದ್ದ ತಕ್ಷಣ ಸಂಚು ಅರಿತ ತ್ಯಾಗರಾಜ್ ಪೊಲೀಸ ಸಹಾಯವಾಣಿಯ ಮೂಲಕ ಪೊಲೀಸರನ್ನ ಕರೆಯಿಸಿಕೊಂಡು ಹಂತಕ ಪಡೆಯಿಂದ ಜೀವ ಉಳಿಸಿಕೊಂಡಿದ್ದಾನೆ.
ಪ್ರಮುಖ ಆರೋಪಿಗಳಾದ ೧)ನಾಗರಾಜ್ ಚಿಂಚಳ್ಳಿ@ಕರಿ ನಾಗ್ಯಾ ೨)ಮಣಿ ಎಂಬಿಬ್ಬರು ಕೊಲೆ ಯತ್ನಕ್ಕೆ ಬಳಸಿದ್ದರು ಎನ್ನಲಾದ ವಾಹನದ ಸಮೇತ ಪರಾರಿಯಾಗಿದ್ದಾರೆ. ತ್ಯಾಗರಾಜ್ ಹಾಗೂ ವಿರೇಶ್ ಎಂಬಾತನ ನಡುವೆ ಹಣದ ವಿಚಾರ ಹಿನ್ನೆಲೆಯಲ್ಲಿ ತ್ಯಾಗರಾಜ್‌ನ ಕೊಲೆಗೆ ಸಂಚು ರೂಪಿಸಿದ ವಿರೇಶ ತನ್ನೊಂದಿಗೆ ಶರಣಪ್ಪ @ಶರಣ್ ಹಾಗೂ ನಾಗರಾಜ್ ತೆಗ್ಗಿಹಳ್ಳಿ ಎಂಬಾತರನ್ನ ಒಗ್ಗೂಡಿಸಿ ಹತ್ಯೆಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ.
ಸದ್ಯಕ್ಕೆ ಮೂರು ಜನ ಜೈಲು ಪಾಲಾಗಿದ್ದು ಇನ್ನಿಬ್ಬರ ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ.