ಶಕ್ತಿಯೋಜನೆಯ ಸೊಂಟ ಮುರಿದ ಉಚಿತ ಪ್ರಯಾಣ!

POWER CITYNEWS :ಹುಬ್ಬಳ್ಳಿ: ಮಹಿಳೆಯರಿಗೆಂದೆ ಜಾರಿ ಮಾಡಲಾಗಿರುವ ಉಚಿತ ಪ್ರಯಾಣದ (free travelling) ಆಧಾರವಾಗಿರುವ ಶಕ್ತಿಯೋಜನೆ ಇದೀಗ ಅನುಕೂಲಕ್ಕಿಂತ ಸಮಸ್ಯೆಗಳ ಕೇಂದ್ರ ಬಿಂದುವಾಗುತ್ತಿದೆ.
ಅವಳಿನಗರ ಸ್ಮಾರ್ಟ್ ಸಿಟಿ ಯೋಜನೆಯಡಿ(smartcity) ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದ ಒಂದೆಡೆಯಾದರೆ. ಇನ್ನೊಂದೆಡೆ ಅವಳಿನಗರದ ವ್ಯಾಪಾರ ವಹಿವಾಟುಗಳು ಸುಗಮವಾಗಿ ನಡೆಯದ ಕಾರಣ ಒಂದಲ್ಲ ಒಂದು ಸಮಸ್ಯೆಗಳು ದಿನನಿತ್ಯದ ಸಾರ್ವಜನಿಕ ವಲಯದಲ್ಲಿ ಅಸಹನೆಯ ಚಟುವಟಿಕೆಗಳಾಗಿವೆ.
ಹಿಗಿರುವಾಗ ಶಕ್ತಿಯೋಜನೆಯಡಿ ಸಮರ್ಪಕ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ(stategovt)ಸಂಪೂರ್ಣ ವಿಫಲವಾಗಿದೆ ಎನ್ನುವುದಕ್ಕೆ ಜೀವಂತ ಸಾಕ್ಷಿಯಾಗಿದೆ ಇಂದು ನಡೆದ ಘಟನೆ.
ಹೌದು ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ(@chennamacircle) ಬಳಿಯಲ್ಲಿ ಹಲವು ಘಂಟೆಗಳಿಂದ ಚಿಂಚೊಳಿ ಬಸ್‌ಗಾಗಿ ಕಾದು ನಿಂತಿದ್ದ ಮಹಿಳೆಯರು ಬಸ್ ಬಂದ ತಕ್ಷಣ ಹತ್ತುವುದಕ್ಕೆ ಮುಂದಾಗಿದ್ದಾರೆ. ಇ ವೇಳೆ ನಿರ್ವಾಹಕ ಮಹಿಳೆಯರನ್ನು ಬಸ್ (@bus)ಏರದಂತೆ ಸೂಚಿಸಿದ್ದಾನೆ. ಇದರಿಂದ ಸಹನೆ ಕಳೆದು ಕೊಂಡ ಮಹಿಳೆಯರು ಬಸ್ ತಡೆದು ಪ್ರತಿಭಟಿಸಿದ್ದಾರೆ. ಇದರಿಂದ ದೂರದ ಪ್ರಯಾಣ ಬೆಳಸಬೆಕಿದ್ದ ಪ್ರಯಾಣಿಕರು ರಾಜ್ಯ ಸರ್ಕಾರದ ಶಕ್ತಿಯೋಜನೆಗೆ ಹಿಡಿಶಾಪ ಹಾಕುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯ ಸರ್ಕಾರದ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳ ಲಾಭ ಕೆಲವರಿಗೆ ವರದಾನ ವಾದರೆ ಇನ್ನೂ ಕೆಲವರಿಗೆ ತೊಂದರೆ ತಂದಿಡುತ್ತಿದೆ. ಇನ್ನಾದರೂ ಸಿದ್ಧರಾಮಯ್ಯ(@siddhramiah) ಸರ್ಕಾರ ಶಕ್ತಿ ಯೋಜನೆಯ ಕುರಿತು ಸೂಕ್ತ ನಿರ್ಧಾರ ತೆಗೆದುಕೊಂಡರೆ ಆಗು ಹೋಗುವ ಅನಾಹುತಗಳಿಗೆ ಅಂಕುಶ ಹಾಕುವುದರೊಂದಿಗೆ ಇತರೆ ಪ್ರಯಾಣಿಕರ ಹಿತವನ್ನೂ ಕಾಪಾಡಿಕೊಳ್ಳಬೆಕಿದೆ.
