ಸ್ಥಳೀಯ ಸುದ್ದಿ

ಮೆಹಬೂಬ ಮುನವಳ್ಳಿ ಎಂದರೆ – ಮಾನವೀಯತೆಯ ಅಸಲಿ ಮುಖ.

ಬೆಂಗಳೂರು.

ನಾಡಿನ ಹಿರಿಯ ಕ್ರೈಂ ಪತ್ರಕರ್ತ ರವಿ ಬೆಳೆಗೆರೆ ಜನ್ಮದಿನೋತ್ಸವದಂದೆ ಅವರಂತೆ ವೃತ್ತಿ ನಿಷ್ಟೆ ಮೆರೆದ ಇನ್ನೊಬ್ಬ ಕ್ರೈಂ ಪತ್ರಕರ್ತನನ್ನು ಬಂಧಿಸಿರುವುದು ಸೋಜಿಗವೇ ಸರಿ.

ಪೋಲಿಸರ ಹತಾಶೆ – ಪತ್ರಕರ್ತನ ಮೇಲೆ ದರ್ಪ ತೋರಿತೆ.?

STAND WITH MEHABOOB MUNAVALLI

*ಮಾಧ್ಯಮ ಸ್ವಾತಂತ್ರ್ಯ ಸತ್ತು ಹೋಗಿದೆಯೆ..?

  • ಪತ್ರಕರ್ತರು ಪೋಲಿಸರ ನಡುವಿನ ಬಾಂಧವ್ಯ ಹಳಸಿ ಹೋಯಿತೆ..?
  • ಪೋಲಿಸ್ ಇಲಾಖೆಗೆ – ಮಾಧ್ಯಮ ನೆರವು ಅಪರಾಧವಾದದ್ದು ಯಾವಾಗ?
  • ವೃತ್ತಿ ನಿಷ್ಟೆ ಅನ್ಯಾಯವೇ…?
  • ವೃತ್ತಿಯಲ್ಲಿ ಮಾನವೀಯತೆಯ ಮೌಲ್ಯ ತೂರಿ ಬಂದರೆ ಅದಕ್ಕೆ ಶಿಕ್ಷೆಯೇ..?
  • ತೀರಾ ಆ್ಯಕ್ಟಿವ್ ಜರ್ನಲಿಸಂ ಅಪಾಯಕಾರಿ ಎಂಬ ಸಂದೇಶವನ್ನು ಸಮಾಜಕ್ಕೆ ಕೊಡುತ್ತಿರುವಿರೆ.?

ತೀರಾ ಇತ್ತೀಚಿಗೆ ಮಾಧ್ಯಮ ಲೋಕಕ್ಕೆ ಕಾಲಿಡುತ್ತಿರುವ ಪತ್ರಕರ್ತರು ನೋಡಿ ಕಲಿಯುವ ಹಾಗೆ ಬೆಳೆದು ನಿಂತಿದ್ದ ಹೆಮ್ಮರ ಒಂದಕ್ಕೆ ಘಾಸಿ ಮಾಡಿದಂತಾಗಿದೆ.

ಯಾವ ಪೋಲಿಸ್ ಇಲಾಖೆ ಇವತ್ತು ನಿಷ್ಟಾವಂತ ಪತ್ರಕರ್ತನೊಬ್ಬನ ಮಾಧ್ಯಮ ಧರ್ಮವನ್ನು ಪ್ರಶ್ನಿಸುತ್ತಿದೆಯೋ,
ಅದೇ ಮಾಧ್ಯಮ ಧರ್ಮದ ಮೂಲಕವೇ ಅನೇಕ ಪೋಲಿಸ್ ಅಧಿಕಾರಿಗಳಿಗೆ ಅನ್ಯಾಯವಾದಾಗ ಪೋಲಿಸರ ಪರ ದ್ವನಿ ಎತ್ತುತ್ತಿದ್ದ ಆ ಪತ್ರಕರ್ತ ತೋರಿದ ನಿಷ್ಟೆಯನ್ನಾದರು ನೀವು ಇಂದು ತೋರ ಬೇಕಿತ್ತು ಛೇ…!

ಅಂತಹ ಹಿರಿಯ ಪತ್ರಕರ್ತನನ್ನು, ಇಂದು ಅದ್ಯಾವುದೋ ಸುಳ್ಳು ಸಂಶಯದ ಮೇರೆಗೆ ಬಂಧನ ಮಾಡಿದ್ದಾರೆ.

ಮಹೆಬೂಬ ಮುನವಳ್ಳಿ ಎಂದರೆ, ಅದು ಮಾನವೀಯತೆಯ ಇನ್ನೊಂದು ಮುಖ, ಈ ನಾಡಿನ ಅನೇಕ ಕಿರಿಯ ಪತ್ರಕರ್ತರಿಗೆ ಸ್ಪೂರ್ತಿ, ಧೈರ್ಯ, ಅಂತಃಶಕ್ತಿ ದಿಟ್ಟತನ ತುಂಬಿದವರು ಅಷ್ಟೆ ಅಲ್ಲ ರಾಜ್ಯದಲ್ಲಿ ಇರುವ ಅರ್ಧಕ್ಕೂ ಹೆಚ್ಚು ಪತ್ರಿಕೆ, ದೃಶ್ಯ ಮಾಧ್ಯಮ ಸಂಸ್ಥೆಗಳಲ್ಲಿ ಅನವರತ ಸೇವೆ ಸಲ್ಲಿಸಿ, ಮಾಧ್ಯಮ ಜಗತ್ತಿಗೆ ಅಭೂತಪೂರ್ವ ಕೊಡುಗೆ ನೀಡಿದ ಒಬ್ಬ ಹಿರಿಯ ಪತ್ರಕರ್ತ.
ಅಂತಹ ಕಾಳಜಿಯುಳ್ಳ, ವೃತ್ತಿ ಧರ್ಮವನ್ನು ಅಚ್ಚುಕಟ್ಟಾಗಿ ಪಾಲಿಸಿದ, ಚೇತನವೊಂದನ್ನು ಪೋಲಿಸರು ಬಂಧಿಸಿರುವುದು ಖಂಡನೀಯ.

ತುಸು ಹೆಚ್ಚೆ ಕಾರ್ಯತತ್ಪರತೆ, ಚಾಣಾಕ್ಷತೆ, ಮಾನವೀಯತೆಯನ್ನು ಮೆರೆದರೆ ಅದು ಅಪರಾಧವಾಗುತ್ತದೆಯೇ..

ತಮ್ಮ ಇಳಿ ವಯಸ್ಸಿನಲ್ಲೂ ಆ್ಯಕ್ಟಿವ್ ಜರ್ನಲಿಸಂ ನಿಂದ ಹಿಂದೆ ಸರಿಯದೇ ಒಂದೂ ಬ್ರೇಕಿಂಗ್ ಮಿಸ್ ಆಗದ ಹಾಗೆ ತನಗೆ ಕೆಲಸ ಕೊಟ್ಟ ಸಂಸ್ಥೆಯೊಂದಕ್ಕೆ ನಿಯತ್ತಿನಿಂದ ಶ್ರಮ ಪಡುವ, ಪರಿತಪಿಸುವ ಪತ್ರಕರ್ತರನ್ನು, ಪೋಲಿಸರು ಬಂಧಿಸುತ್ತಾ ಹೋದರೆ, ಇಂದು ಅದೆಷ್ಟೋ ಪತ್ರಕರ್ತರು ಜೈಲಲ್ಲಿ ಇರಬೇಕಾಗುತ್ತದೆ.

ಪೋಲಿಸ್ ಇಲಾಖೆಗೆ ಸಹಾಯ ಮಾಡಲಿಲ್ಲ, ಆರೋಪಿಗಳ ಕುರಿತು ಮಾಹಿತಿ ನೀಡಲಿಲ್ಲ ಎಂಬ ಕಾರಣಕ್ಕೆ wide networking( ಸುದ್ದಿ ಮಾಹಿತಿ ಜಾಲ) ಹೊಂದಿರುವ ವೃತ್ತಿನಿಷ್ಟ ಪತ್ರಕರ್ತನ್ನು ನೀವು ಬಂಧಿಸಿದರೆ. ಇಡೀ ಸಮಾಜಕ್ಕೆ ನೀವೊಂದು ತಪ್ಪು ಸಂದೇಶವನ್ನು ನೀಡುತ್ತಿದ್ದೀರೆಂದೆ ಲೆಕ್ಕ.

ಮಾಹಿತಿ ಇತ್ತು ಅಂದ ಮಾತ್ರಕ್ಕೆ, ನೀವು ಹುಡುಕುವ ಮುಂಚೆಯೇ ಅವರು ಹುಡುಕಿದರು ಎಂಬ ಕಾರಣಕ್ಕೆ, ನಿಮಗಿಂತ ಪತ್ರಕರ್ತನೊಬ್ಬನ ರೀಚ್ ದೊಡ್ಡದಿದೆ ಎಂಬ ಕಾರಣಕ್ಕೆ, ಅವರನ್ನು ಬಂಧನಕ್ಕೊಳಪಡಿಸುವುದಾದರೆ, ಇದು ನಿಮ್ಮದು ಹತಾಶ ಮನೋಭಾವವಲ್ಲದೇ ಮತ್ತಿನ್ನೇನು….?
ಮಾಧ್ಯಮದ ಶಕ್ತಿ ಹೀಗಿದೆ ಎಂದು ಮಾಧ್ಯಮ ಸ್ವಾತಂತ್ರ್ಯದ ಕತ್ತು ಹಿಸುಕಲು ಕೆಲವರು ಮುಂದಾಗಿರುವಾಗ, ಮಾಧ್ಯಮ ಲೋಕ, ಜರ್ನಲಿಸ್ಟ್ ಸಂಘಗಳು ಒಬ್ಬ ಪತ್ರಕರ್ತನ ಪರವಾಗಿ ನಿಲ್ಲಲು ಮುಂದಾಗಬಾರದೇಕೆ…!

ಕೊಲೆ ಗಡುಕರನ್ನು ಹಿಡಿಯಲು ಸಾಧ್ಯವಾಗದ ಅಧಿಕಾರಿ ಒಬ್ಬ, ಯಾರೋ ಮಾಹಿತಿ ನೀಡಲಿಲ್ಲ ಎಂದು, ಹತಾಶೆಯಲ್ಲಿ ಬಂಧಿಸುವುದು ಅವರ ಅಸಹಾಯಕತೆಯನ್ನು ಎತ್ತಿ ತೋರಿಸುತ್ತದಲ್ಲದೇ ಮತ್ತಿನ್ನೆನೂ…!

ಇಲಾಖೆಯ ಹತ್ತಾರು ಕೇಸುಗಳಲ್ಲಿ ಸ್ವತಃ ಪೋಲಿಸರು ಅನ್ಯಾಯಕ್ಕೊಳಗಾದಾಗ ಅವರ ಸಹಾಯಕ್ಕೆ ನಿಂತು ಸುದ್ದಿ ಪ್ರಕಟಿಸಿದ ಪತ್ರಕರ್ತನೊಬ್ಬನನ್ನು ಇಲಾಖೆ ಬಂಧಿಸಿರುವುದು ತಲೆತಗ್ಗಿಸುವ ಕೃತ್ಯ…..!


ಅಧಿಕಾರಿಗಳೆ,
ಗಾಳಿಯಲ್ಲಿ ಹರಿದಾಡುತ್ತಿರುವ ಕೆಲವು ಸುದ್ದಿಗಳ ಪ್ರಕಾರ ಮಹೆಬೂಬ ಮುನವಳ್ಳಿಯವರ ಬಂಧನಕ್ಕೆ ಕಾರಣಗಳು ಇವುಗಳಾದರೆ – ಅವಕ್ಕೆ ತಕ್ಕ ಈ ಕೆಳಗಿನ ಉತ್ತರಗಳನ್ನೂ ಒಮ್ಮೆ ಪರಿಗಣಿಸಿ….

ದಿನ ಬೆಳಗಾದರೆ ನಡೆಯುವ ಕೊಲೆ, ಸುಲಿಗೆ, ಕಳ್ಳತನದಂತಹ ಘಟನೆಗಳು ಇಡೀ ಊರಿಗೆ ತಿಳಿದಿದ್ದರು, ಅದೆಷ್ಟೋ ಬಾರಿ ಪೋಲಿಸರಿಗೆ ಗೊತ್ತಿರುವುದಿಲ್ಲ. ಹಾಗಂತ ಊರವರು ವಿಷಯ ತಿಳಿಸಿಲ್ಲ ಅಂತ ಜನರನ್ನೆಲ್ಲಾ ತಂದು ಲಾಕಪ್ ನಲ್ಲಿ ಇಡುತ್ತೀರೇ…?

ಇಲ್ಲ ಅಂದ ಮೇಲೆ ಜವಾಬ್ದಾರಿಯುತ ನಾಡಿನ ಹಿರಿಯ ಪತ್ರಕರ್ತನನ್ನು ತರಾತುರಿಯಲ್ಲಿ ಬಂಧಿಸಿದ್ದು ಅನ್ಯಾಯವಲ್ಲವೇ…ಸರ್…

ಕೊಲೆಗೆ – ಕೊಲೆ , ಹೇಗೆ ಸಮರ್ಥನೀಯವಲ್ಲವೋ ಅದೇ ರೀತಿ ಕೊಲೆಗಡುಕರಿಗೆ – ಎನ್ ಕೌಂಟರ್ ಒಂದೇ ದಾರಿಯಲ್ಲ ಹಾಗೂ ಅದು ಕಾನೂನಾ ರೀತ್ಯ ನ್ಯಾಯಯುತವು ಅಲ್ಲ. ನ್ಯಾಯಾಲಯದ ವಿಚಾರಣೆ ನಂತರವೇ ಅವರಿಗೆ ಶಿಕ್ಷೆ ನಿರ್ಧಾರವಾಗುತ್ತದೆ.
ರಾಜ್ಯದಲ್ಲಿ ಬಹಳ ಸದ್ದು ಮಾಡಿದ ರೌಡಿ ಶೀಟರ್ ಒಬ್ಬನ ಪ್ರಕರಣದಲ್ಲಿ ಮುಂದೆ ನಡೆಯಬಹುದಾದ ಅನಾಹುತಗಳನ್ನು ತಪ್ಪಿಸಲು..

ಆರೋಪಿಗಳನ್ನು ತಪ್ಪೊಪ್ಪೊಕೊಳ್ಳುವಂತೆ ಮನಃ ಪರಿವರ್ತನೆ ಮಾಡಿ, ಪೋಲಿಸರೆದುರು ಹಾಜರಾಗುವಂತೆ , ಅವರು ಮಾಡಿದ್ದೇ ನಿಜವಾದಲ್ಲಿ …ಇದರಲ್ಲಿರುವ ತಪ್ಪಾದರು ಏನೂ…
ಆರೋಪಿಗಳು ತಪ್ಪಿಸಿಕೊಂಡು ಹೋಗ ಬೇಕಿತ್ತೆ? ಆರೋಪಿಗಳನ್ನು ಮಾನವೀಯ ನೆಲೆಗಟ್ಟಿನಲ್ಲಿ ನ್ಯಾಯದೇವತೆಯ ಮುಂದೆ ಮಂಡಿಯೂರುವಂತೆ ಮಾಡಿದ್ದು ಮಹೆಬೂಬ ಮುನವಳ್ಳಿಯವರು ಮಾಡಿದ್ದೆ ಮಹಾ ಅಪರಾದವಾಗಿ ಹೋಯಿತೆ…..!

ವೃತ್ತಿ ನಿಷ್ಟೆಗಾಗಿ ತಮ್ಮ ಇಳಿ ವಯಸ್ಸಿನಲ್ಲೂ ಚೂರೂ ವಿಶ್ರಮಿಸದೇ, ತನ್ನ ಸುದ್ದಿ ಸಂಸ್ಥೆಗೆ ಬ್ರೆಕಿಂಗ್ ನ್ಯೂಸ್ ನೀಡಲು ಸುದ್ದಿಗಾಗಿ ಪೋಲಿಸರನ್ನು ಆಶ್ರಯಿಸದರೆಂದು, ಪೋಲಿಸರನ್ನು ಸಂಪರ್ಕಿಸಿದರೆಂದು, ಇಂತಹ ನಿಷ್ಟಾವಂತ ಆಕ್ಟಿವ್ ಪತ್ರಕರ್ತನನ್ನು ನೀವು ಬಂಧಿಸಿ ಮುಜುಗರಕ್ಕೆ ಒಳಗಾದಿರೆ…!.

ವೃತ್ತಿಯೊಂದನ್ನು ನಿಯತ್ತಿನಿಂದ ನಿಷ್ಟೆಯಿಂದ ತುಸು ಹೆಚ್ಚೆ ಪ್ರೀತಿಯಿಂದ ಪಾಲಿಸಿದ್ದೆ ಇಲ್ಲಿ ತಪ್ಪಾಗಿ ಹೋಯಿತೆ….?
ಒಂದು ಮಾಧ್ಯಮ ಸಂಸ್ಥೆಯ ಬ್ಯೂರೋ ಮುಖ್ಯಸ್ಥರಾಗಿರುವ ಪತ್ರಕರ್ತನೊಬ್ಬನಿಗೆ ರಾಜ್ಯವಿಡಿ ಸಂಪರ್ಕ ಇರುವುದೇ ಪ್ರಮುಖ ಅರ್ಹತೆಯಾಗಿದೆ. ಹಾಗಿರುವಾಗ ಅನೇಕರು ಸಂಪರ್ಕದಲ್ಲಿರುತ್ತಾರೆ, ಹಾಗಂತ ಸರಿಯಾದ ಆಧಾರಗಳಿಲ್ಲದೇ ಬಂಧನಕ್ಕೆ ಒಳಪಡಿಸುವುದು ಅನ್ಯಾಯವಲ್ಲವೇ….ಒಂದೇ ಒಂದು ನೋಟಿಸ್ ನೀಡಿ ಪ್ರತ್ಯುತ್ತರಕ್ಕಾದರೂ ಕಾಯಬೇಕಿತ್ತಲ್ಲವೇ….

ಮಹೆಬೂಬ ಮುನವಳ್ಳಿ ಅವರು ಸಾಮಾನ್ಯ ಪತ್ರಕರ್ತನಲ್ಲ, ಮೊದಲಿನಿಂದಲೂ ಅವರೊಬ್ಬ ಕ್ರೈಂ ವರಿದಿಗಾರರು…ಹಾಗಾಗಿ ಕೊಲೆಗಡುಕರನ್ನು ಹುಡುಕುವುದು ಅವರಿಗೆ, ಸಿದ್ದಿಸಿರುವ ಜರ್ನಲಿಸಂ ಬಲ. ಈಗ ತಾನೆ ವೃತ್ತಿ ಆರಂಭಿಸಿದ ಎಷ್ಟೋ ಪೋಲಿಸರಿಗೆ ಇವರ ಸುದ್ದಿಗಳೇ ಕಳ್ಳ ಕಾಕರನ್ನು ಹುಡುಕುವ ಮೂಲ. ಹಾಗಿರುವಾಗ ಅವರ expertise ಅನ್ನು ಬಳಸಿಕೊಳ್ಳಬೇಕಾದ ಜಾಗದಲ್ಲಿ ಅವರನ್ನು miss understand ಮಾಡಿಕೊಂಡು ಕೊಲೆಗೆ ಸಂಬಂಧ ಇರುವವರ ಹಾಗೆ ಬಂಧಿಸಿರುವುದು ಎಷ್ಟು ಸರಿ.

ಸುದ್ದಿಯನ್ನೇ ಉಸಿರಾಡುವ, ಸುದ್ದಿಯಲ್ಲೇ ನಿದ್ರಿಸುವ, ಸುದ್ದಿಯನ್ನೇ ಬದುಕಿನ ಮಾರ್ಗವಾಗಿ ನಂಬಿರುವ ಅದೆಷ್ಟೋ ಪತ್ರಕರ್ತರು, ಸುದ್ದಿ ಮೂಲಕ್ಕಾಗಿ ಅನೇಕರ ಜೊತೆ ಸಂಪರ್ಕ ಹೊಂದಿರುತ್ತಾರೆ. ಹಾಗಂತ ಅವರೆಲ್ಲ ಅವರ ಜೊತೆ ಇದ್ದವರೆನ್ನುವುದು ಮೂರ್ಖತನದ ಪರಮಾವದಿ ಆದೀತು.
ಅಷ್ಟಕ್ಕೂ ಸರ್ ಒಬ್ಬರು ಕ್ರೈಂ ವರದಿಗಾರ ಸಾಮಾನ್ಯವಾಗಿ ಸುದ್ದಿಗಾಗಿ ಯಾರನ್ನೋ ಸಂಪರ್ಕಿಸಿರಬಹುದಷ್ಟೆ.

ತರಾ ತುರಿಯಲ್ಲಿ ನಡೆದು ಹೋದ ಘಟನೆಯಲ್ಲಿ ನಾಡಿನ ಹಿರಿಯ ಪತ್ರಕರ್ತರನ್ನು , ಬಂಧಿಸಿರುವುದು ನಿಜಕ್ಕೂ ವೃತ್ತಿ ದೆಸೆಯಿಂದ ಅಮಾನವೀಯ ಕೆಲಸ. ಕೂಡಲೇ ಅವರನ್ನು ಬಂಧನ ಮುಕ್ತಗೊಳಿಸಲು ಸರ್ಕಾರ, ಪೋಲಿಸ್ ಇಲಾಖೆ ಮುಂದಾಗಬೇಕಿರುವುದು ಈ ಕ್ಷಣದ ಅನಿವಾರ್ಯತೆ…!

ಅಭಿಮಾನಿಯ ಮನದಾಳ

ಡಾ. ಉಮರ ಫಾರೂಕ್ ಜೆ ಮೀರಾನಾಯಕ.

Related Articles

Leave a Reply

Your email address will not be published. Required fields are marked *

Back to top button