BREAKING NEWSCITY CRIME NEWSDHARWADHubballiKMC HOSPITALL&TLife StylePolicePolitical newsTechTWINCITY

ಕಾರು ಅಪಘಾತ ಬಾಲಕಿಯ ಸಾವು!

shekar p

POWER CITY NEWS: ಹುಬ್ಬಳ್ಳಿ : ಪುಟ್ಟ ಕಂದಮ್ಮನ ಮೇಲೆ ಕಿಯಾ ಕಾರು ಹರಿದ ಪರಿಣಾಮ ಸ್ಥಳದಲ್ಲೆ ಪ್ರಾಣ ಬಿಟ್ಟ ಘಟನೆ ಇದೀಗ ನಡೆದಿದೆ.

ಇಲ್ಲಿನ ಹಳೆ ಹುಬ್ಬಳ್ಳಿಯ ಆನಂದ ನಗರದ ನಿವಾಸಿ ಜಾವೀದ ಹಾಗೂ ಖುರ್ಷಿದ್ ಕುಡಚಿ ಎಂಬುವವರ ಮೂರು ವರ್ಷದ ಮಗು ಮನೆಯ ಅಂಗಳದಲ್ಲಿ ನಿಂತಿತ್ತು ಎನ್ನಲಾಗಿದೆ. ಇವೇಳೆ ಅಲಿಜಾ ಮೇಲೆ ಕಿಯಾ ಕಾರು ಹತ್ತಿಸಿದ ಪರಿಣಾಮ ಮಗು ಸ್ಥಳದಲ್ಲೆ ಪ್ರಾಣ ಬಿಟ್ಟಿದೆ.

ಚಾಲಕನನ್ನು ಆನಂದನಗರದ ನಿವಾಸಿ ಅಲ್ತಾಫ್ ಇಮಾಮಸಾಬ್ ತೊರಗಲ್ ಎಂದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ. ಅಜಾಗರೂಕತೆ ಕಾರು ಚಾಲನೆಯೆ ದುರ್ಘಟನೆಗೆ ಕಾರಣ ಎನ್ನಲಾಗಿದ್ದು. ಕೂಡಲೇ ಆತನ ಮೇಲೆ ಕಾನೂನು ಕ್ರಮ ಜರುಗಿಸ ಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಇನ್ನೂ ಮೃತ ಬಾಲಕಿಯನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆರವಾನಿಸಲಾಗಿದೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪೋಷಕರಿಂದ ಮಾಹಿತಿ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *