ಚಿತ್ರದುರ್ಗ

ಗಣಿಗಾರಿಕೆ ಮಾಡುವ ಜನಪ್ರತಿನಿಧಿಗಳ ಬಗ್ಗೆ ಜನರು ಜಾಗೃತರಾಗಿರಿ: ಪಂಡಿತಾರಾಧ್ಯ ಶ್ರೀ

ಭರಮಸಾಗರ:
ಗಣಿಗಾರಿಕೆ ಜನ ಸಾಮಾನ್ಯರು ಮಾಡುವುದಿಲ್ಲ. ಬೆಟ್ಟಗುಡ್ಡಗಳನ್ನು ಬಗೆಯುವ ಜನಪ್ರತಿನಿಧಿಗಳ ಬಗ್ಗೆ, ಗಣಿದಣಿಗಳ ಬಗ್ಗೆ ಜನರು ಜಾಗೃತರಾಗಿಬೇಕು. ಪ್ರಕೃತಿಯನ್ನು ರಕ್ಷಿಸಲು ಜನ ಸಾಮಾನ್ಯರು ಮುನ್ನುಗ್ಗಬೇಕು ಎಂದು ತರಳಬಾಳು ಶಾಖಾ ಮಠದ ಸಾಣೆಹಳ್ಳಿಯ ಡಾ.ಪಂಡಿತಾರಾಧ್ಯ ಸ್ವಾಮೀಜಿ ಸೂಚ್ಯವಾಗಿ ಜನರಿಗೆ ಕರೆಕೊಟ್ಟರು.


ಭಾನುವಾರ ಭರಮಸಾಗರ ಹೋಬಳಿಯ ಕೋಗುಂಡೆ ಗ್ರಾಮದ ಹಳ್ಳದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ನಿರ್ಮಿಸಿರುವ ಚಕ್‌ಡ್ಯಾಂಗೆ ಬಾಗೀನ ಅರ್ಪಿಸಿದ ನಂತರ ಅವರು ವೇದಿಕೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಶ್ರೀಗಳು ಮಾತನಾಡಿದರು. ಗಣಿಗಾರಿಕೆ ಮಾಡಿ ಬೆಟ್ಟ-ಗುಡ್ಡಗಳನ್ನು ಬಗೆದು ಪ್ರಕೃತಿಯ ಸಮತೋಲನವನ್ನು ತಪ್ಪಿಸುತ್ತಿದ್ದಾರೆ ಹೀಗಾಗಿ ಅತಿವೃಷ್ಠಿ, ಅನಾವೃಷ್ಟಿಗಳು ಉಂಟಾಗುತ್ತಿವೆ ಎಂದರು.
ಜಗತ್ತಿನ ಎಲ್ಲ ಜೀವ ಜಂತುಗಳು ಬದುಕಬೇಕಾದರೆ ನೀರು ಬೇಕೇ ಬೇಕು. ಭರಮಸಾಗರ ಕೆರೆ ಭರ್ತಿಯಾಗುತ್ತಿರುವದನ್ನು ನೋಡಿ ಆನಂದವಾಯಿತು. ನಮ್ಮ ಗುರುಗಳಾದ ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ಸರ್ಕಾರದ ಜೊತೆ ಸಮಾಲೋಚಿಸಿ ತುಂಗಭದ್ರೆಯಿAದ ನೀರುತಂದು ನೂರಾರು ಹಳ್ಳಿಗಳ ಬರ ನೀಗುವಂತೆ ಮಾಡಿದ್ದಾರೆ. ಅವರ ಕಾರ್ಯ ಅಜರಾಮರ ಎಂದರು.
ಶಾಸಕ ಚಂದ್ರಪ್ಪನವರು, ಜನ ಬಯಸಲಿ ಬಯಸದೇ ಇರಲಿ ಏನೂ ಕೆಲಸ ಮಾಡಬೇಕು ಎಂಬುದನ್ನು ಗಮನಿಸಿ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಒಬ್ಬ ನಿಜವಾದ ಜನಪ್ರತಿನಿದಿ ಜನರಿಗೆ ಏನುಬೇಕು ಎಂಬುದನ್ನು ಗಮನಿಸಬೇಕು. ಆ ಕಾರ್ಯವನ್ನು ಹೊಳಲ್ಕೆರೆ ಶಾಸಕ ಚಂದ್ರಪ್ಪ ಮಾಡುತ್ತಿದ್ದಾರೆ. ಚಕ್‌ಡ್ಯಾಂ ಮಾಡಿಸಿ ಎಂದು ಯಾರೂ ಕೇಳಿಕೊಳ್ಳದಿದ್ದರೂ ಎರಡು ಕೋಟಿ ರೂ. ವೆಚ್ಚದಲ್ಲಿ ಚಕ್‌ಡ್ಯಾಂ ನಿರ್ಮಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ ಜನರಿಗೆ ಪೂರಕವಾಗಿರುವ ಕೆಸಲ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯಅತಿಥಿಗಳಾದ ಶಾಸಕ ಎಂ.ಚAದ್ರಪ್ಪ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮುಂಗಾರು, ಹಿಂಗಾರು ಮಳೆ ರಾಜ್ಯದಾದ್ಯಂತೆ ಸುರಿದು ರೈತಾಪಿ ವರ್ಗ ನೆಮ್ಮದಿಯಿಂದ ಇತ್ತು. ಪ್ರಸ್ತುತ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿರುವುದರಿAದ ವರ್ಷವಿಡೀ ಮಳೆಯಾಗುತ್ತಿರುವುದು ಅಧಿಕಾರದ ಚುಕ್ಕಾಡಿ ಹಿಡಿದ ಮುಖ್ಯಮಂತ್ರಿಗಳ ಕಾಲ್ಗುಣ ಚನ್ನಾಗಿದೆ ಎಂದು ಹೇಳಿಕೊಳ್ಳಲು ನನಗೆ ಸಂತೋಷವಾಗುತ್ತಿದೆ.
ಅಧಿಕಾರ ಶಾಶ್ವತವಲ್ಲ. ಮತಹಾಕುವುದು ಮತದಾರರಿಗೆ ಒಂದೇ ನಿಮಿಷದ ಕೆಲಸವಾದರೂ ನಿಮ್ಮ ಋಣ ತೀರಿಸುವುದು ನಮಗೆ ಐದು ವರ್ಷದ ಕೆಲಸವಾಗಿರುತ್ತದೆ. ೨೬ ವರ್ಷಗಳಿಂದ ಈ ಭಾಗದ ಎಲ್ಲ ಜನರು ನಿಮ್ಮ ಮನೆಯ ಮಗನಂತೆ ನನ್ನನ್ನು ನೋಡಿಕೊಂಡಿದ್ದೀರ. ನಿಮ್ಮ ಋಣವನ್ನು ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿ ತೀರಿಸುತ್ತೇನೆ. ಈ ಭಾಗದ ರಸ್ತೆ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ತಂದು ಖರ್ಚು ಮಾಡಿದ್ದೇನೆ. ತರಳಬಾಳು ಮಠ ನನಗೆ ಆದರ್ಶವಾದ ಮಠವಾಗಿದೆ. ಲಿಂಗೈಕ್ಯ ಶ್ರೀಗಳು, ಡಾ.ಶಿವಮೂರ್ತಿ ಸ್ವಾಮೀಜಿ ಮತ್ತು ಪಂಡಿತಾರಾಧ್ಯ ಶ್ರೀಗಳೇ ನನ್ನ ಅಭಿವೃದ್ಧಿ ಕಾರ್ಯಗಳಿಗೆ ಪ್ರೇರಣೆ ಎಂದರು.
ಚಿತ್ರದರ್ಗುದ ಟಿಎಪಿಎಂಸಿಎಸ್ ಅಧ್ಯಕ ಎಚ್.ಎಂ.ಮAಜುನಾಥಪ್ಪ ಮಾತನಾಡಿದರು. ಕೋಗುಂಡೆ ಗ್ರಾಮ.ಪಂ ಅಧ್ಯಕ್ಷ ತಿಪ್ಪೇಸ್ವಾಮಿ ಕಾರ್ಯಕ್ರದಮ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ.ಪಂ ಸದಸ್ಯರಾದ ಮಂಜುನಾಥ್, ಜಯಪ್ಪ, ರತ್ನಮ್ಮ ಶಿಲ್ಪ ಮೋಹನ್‌ದಾಸ್, ಬಸವರಾಜ್, ಕಲ್ಲೇಶಪ್ಪ, ನಾಗರಾಜು, ನಾಗವೇಣಿ, ಶಿವಕುಮಾರ್, ರಾಧಾ ರೇವಣಸಿದ್ದಪ್ಪ ಮತ್ತು ಸಣ್ಣ ನೀರಾವರಿ ಇಲಾಖೆಯ ಹೊಳಲ್ಕೆರೆ ವಿಭಾಗದ ಇಇ ವೆಂಕಟರಮಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button