ಉಗ್ರರ ಹುಟ್ಟಡಗಿಸಲು ಕೇಂದ್ರ ಸರ್ಕಾರ ನಿರ್ಧಾರಕ್ಕೆ ಬದ್ಧರಾಗಬೇಕಿದೆ:ನಾಗರಾಜ್ ಛೆಬ್ಬಿ!
POWER CITY

POWER CITY NEWS :HUBBALLIಅಳ್ಳಾವರ: ಕಾಶ್ಮೀರದ ಪಹಲ್ಗಾಮ್ ಪ್ರವಾಸಿ ಸ್ಥಳವನ್ನು ಗುರಿಯಾಗಿಸಿಕೊಂಡು ಅಮಾಯಕ ಪ್ರವಾಸಿಗರನ್ನು ಹತ್ಯೆ ಮಾಡಿರುವುದು ಖಂಡನೀಯ ಎಂದು ವಿಧಾನ ಪರಿಷತ್‌ಮಾಜಿ ಸದಸ್ಯ ನಾಗರಾಜ ಛಬ್ಬಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರವಾದವನ್ನು ಬೇರು ಸಮೇತ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಈಗಾಗಲೇ ಕೇಂದ್ರ ಸರ್ಕಾರ ಕಠಿಣ ನಿರ್ಣಯ ತೆಗೆದುಕೊಂಡಿದ್ದು ದೇಶ ವಾಸಿಗರೆಲ್ಲರೂ ಜಾತಿ,ಧರ್ಮ ಮರೆತು ಸರ್ವತೋಮುಖವಾಗಿ ಬೆಂಬಲ ನೀಡಬೇಕಿದೆ. ಇಂತಹ ದಾಳಿಯ ಸಂದರ್ಭದಲ್ಲಿ ಉಗ್ರರು ಧರ್ಮದ ಆಧಾರವಾಗಿ ಗುಂಡಿಟ್ಟು ಕೊಂದಿದ್ದಾರೆ. ಪಾಕಿಸ್ತಾನಿ ಬೆಂಬಲಿತ ಧರ್ಮಾಂದ ಉಗ್ರರು ಒಂದೆ ಸಮುದಾಯವನ್ನು ಗುರಿಯಾಗಿಸಿಕೊಂಡು ನಡೆಸಿರುವ ಪೈಶಾಚಿಕ ಹೇಯ ಕೃತ್ಯ ಇದಾಗಿದೆ. ಇಂತಹವರಿಗೆ ಮತ್ತು ಉಗ್ರವಾದವನ್ನು ಬೆಂಬಲಿಸುವವರಿಗೆ ತಕ್ಕ ಪಾಠ ಕಲಿಸುವ ಸಮಯ ಒದಗಿ ಬಂದಿದೆ ಈ
ಸಂದರ್ಭದಲ್ಲಿ ರಾಜಕೀಯ ಮಾಡದೆ ಎಲ್ಲರೂ ಸರಕಾರದ ಪರವಾಗಿ ನಿಲ್ಲಬೇಕು ಎಂದಿದ್ದಾರೆ.
ಕಾಶ್ಮೀರದಲ್ಲಿ ಈಗಾಗಲೇ 370ನೇ ವಿಧಿಯನ್ನು ರದ್ದು ಮಾಡಿದ ನಂತರ ಅಸಹಾಯಕವಾಗಿರುವ ಒಂದು ಗುಂಪು ಇಂತಹ ನರಮೇಧ ಕೃತ್ಯಗಳನ್ನು ನಡೆಸಿ ಜನರಲ್ಲಿ ಭಯ ಹುಟ್ಟಿಸುವಕೆಲಸವಾಗಿದೆ. ಇದು ನಮಗೆಲ್ಲ ಎಚ್ಚರಿಕೆಯ ಘಂಟೆಯಾಗಿದೆ. ಭಾರತಿಯರಾದ ನಾವೆಲ್ಲ ಸಂಘಟಿತರಾಗಿ ಉಗ್ರರ ನಿರ್ನಾಮಕ್ಕಾಗಿ ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ಕೈ ಜೋಡಿಸಬೇಕಾಗಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಅಳ್ಳಾವರ ಮಂಡಳ ಅಧ್ಯಕ್ಷ ಯಲ್ಲಪ್ಪ ಹುಲೆಪ್ಪನವರ, ಶಕ್ತಿ ಕೇಂದ್ರದ ಅಧ್ಯಕ್ಷ ಲಖನ ಬರಗುಂಡಿ,ನಾರಾಯಣ ಬಿ ಮೋರೆ,ಕರೆಪ್ಪ ಅಮ್ಮಿನಭಾವಿ,ಶಿವಾಜಿ ಡೊಳ್ಳಿನ, ಪ್ರವೀಣ ಪವಾರ, ಲಿಂಗರಾಜ ” ಮೂಲಿಮನಿ ಮತ್ತಿತರರು ಇದ್ದರು.