armyBELAGAVIBHAIRATI SURESHBJPL&TPolicesoldiersSportsTechTWINCITY

ಖೊಟ್ಟಿ ದಾಖಲೆಗಳಿಗೆ ಆಯುಕ್ತರ ಹೆಬ್ಬಟ್ಟು..?

POWER CITY NEWS:HUBBALLI/ಹುಬ್ಬಳ್ಳಿ : ಅವಳಿನಗರದ ನಗರಾಭಿವೃದ್ಧಿ(huda) ಇಲಾಖೆಯಲ್ಲಿ ಭಾರಿ ಗೋಲ್ಮಾಲ್ ಅಧಿಕಾರಿಗಳೇ ನೇರ ಶಾಮೀಲು ಭ್ರಷ್ಟಾಚಾರದಲ್ಲಿ ಆಯುಕ್ತರ(commitioner)ಪಾಲೇಷ್ಟು? ಎನ್ನುವಂತಹ ಪ್ರಶ್ನೇ ಇದೀಗ ಪ್ರಜ್ಙಾವಂತ ನಾಗರಿಕರ ಪ್ರಶ್ನೇಯಾಗಿದೆ.

ಅವಳಿನಗರದ ಪ್ರತಿಷ್ಠಿತ ಹಾಗೂ ಬೆಲೆಬಾಳುವ ಸೈಟ್‌ಗಳನ್ನ 1996-97ರ ಅವಧಿಯಲ್ಲಿ ಬಡ ಫಲಾನುಭವಿಗಳಿಗೆ ಹಂಚಿಕೆಯಾಗಿದ್ದವು.ಆದರೆ ಈಗಾಗಲೇ ನಗರಾಭಿವೃದ್ಧಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ಕೆಲವು ಅಧಿಕಾರಿಗಳು‌ ಇಲ್ಲಿರುವ ಮಾಹಿತಿ‌ ಹಾಗೂ ದಾಖಲೆಗಳನ್ನು ಕದ್ದು ಭೂಗಳ್ಳರಿಗೆ(landmafia) ಮಾಹಿತಿ ನೀಡುತ್ತಿದ್ದಾರೆ. ಕೋಟಿ ಕೋಟಿ ಮನೆ ಹಾಗೂ ಐಶಾರಾಮಿ ಜೀವನ ನಡೆಸುತ್ತಿದ್ದಾರಲ್ಲದೆ ಕೆಲವು ಅಧಿಕಾರಿಗಳ ಮೇಲೆ ಲೋಕಾಯುಕ್ತ ಪ್ರಕರಣ ಕೂಡ ವಿಚಾರಣೆ ಹಂತದಲ್ಲಿ ಇದ್ದರು ತಮ್ಮ ಹಳೆಚಾಳಿ ಮುಂದುವರೆಸಿದ್ದಾರಲ್ಲದೆ, ಮೂಲ ಫಲಾನುಭವಿಗಳ ಖೊಟ್ಟಿ‌ ದಾಖಲೆ(fakedoccuments) ಸೃಷ್ಟಿಸಿ ಹುಬ್ಬಳ್ಳಿಯ ಲೋಹಿಯಾನಗರದ ಅನೇಕ ಸೈಟ್ ಗಳನ್ನ ಹಾಡಹಗಲೇ ತಮ್ಮ-ತಮ್ಮ ಸಂಭಂದಿಗಳ ಮೂಲಕ ಖೊಟ್ಟಿ ದಾಖಲೆಗಳನ್ನು ನೀಡಿ ಸರ್ಕಾರಕ್ಕೆ ವಂಚಿಸುತ್ತಿದ್ದಾರೆ. ಆದರೆ ಸೈಟ್ ವರ್ಗಾವಣೆ ಮಾಡುವ (ಶುದ್ದ ಕ್ರಯಪತ್ರ) ಮೊದಲೇ‌ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ದಾಖಲೆಗಳನ್ನು ಪರಿಸಿಲಿಸುವುದು ಕಡ್ಡಾಯ ನಿಯಮ ವಾದರೂ ಹುಢಾ ಆಯುಕ್ತರೆ ಯಾರ್ದೋ ಸೈಟನ್ನ ಇನ್ಯಾವುದೋ ಖೊಟ್ಟಿ ದಾಖಲೆ ಸೃಷ್ಟಿಸಿದ ಭೂಗಳ್ಳರಿಗೆ ನೇರವಾಗಿ ಹಸ್ತಾಂತರಿಸಿದ್ರಾ..? ಎನ್ನುವುದೆ ಪ್ರಶ್ನೆಯಾಗಿದೆ.

ಆದರೆ ಇಂತಹದೆ ಪ್ರಕರಣ ಒಂದನ್ನು ಬಯಲಿಗೆಳೆದು ರಾಯನಾಳ ಸರ್ವೆ ನಂಬರ್ (೮೮) ಮೊದಲನೆ ಹಂತದ ನಿವೇಶನ(site) ಸಂಖ್ಯೆ 256 ರಕ್ಕೆ ಸಂಭಂಧಿಸಿದ ಮೂಲ ಫಲಾನುಭವಿ ಶಾಂತವ್ವ ಶಿರಹಟ್ಟಿಯ ಬದಲು,ಸೌದತ್ತಿ ಮೂಲದ ಮಹಾದೇವಿ ರುದ್ರಪ್ಪ ಕವಲಾಪುರ ಎಂಬಾಕೆಯ ಹೆಸರಿಗೆ ಖೊಟ್ಟಿ ದಾಖಲೆ ಸೃಷ್ಟಿಸಿ ಭ್ರಷ್ಟಾಚಾರ ನಡೆಸಿರುವುದು ಇದೀಗ ಬಹಿರಂಗಗೊಂಡಿದೆ.

ಅಕ್ರಮ ಮಾರಾಟ ನಡೆಸಿರುವ ಸೈಟ್ ಗಳ‌ ಸಂಪೂರ್ಣ ದಾಖಲೆಗಳನ್ನು ಈಗಾಗಲೇ ಧಾರವಾಢ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ಕಚೇರಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಆಯುಕ್ತ ಸಂತೋಷ ಬಿರಾದರ ಅವರಿಗೆ ನೀಡಿ ವರ್ಷವೆ ಕಳೆಯುತ್ತಿದೆ. ಆದರೂ ಸಹ ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಇರುವುದು ಹುಡಾ ಅಧಿಕಾರಿಗಳು ಸಹ ಇದರಲ್ಲಿ ಪಾಲು ಪಡೆದಿದ್ದಾರಾ..? ಎನ್ನುವ ಪ್ರಶ್ನೇ ಅಧಿಕಾರಿಗಳ ಮೇಲಿನ ಸಂಶಯಕ್ಕೆ ಕಾರಣವಾಗಿದೆ.

ಆಡಳಿತ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಸಚಿವರು ಅವಳಿನಗರಕ್ಕೆ ಒಂದೊಮ್ಮೆ ಭೇಟಿ ನೀಡಿ ಇಲಾಖೆಯ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತಾರೋ ಅಥವಾ ಫೋಟೊ ಶ್ಯೂಟ್ ಗೆ ಸಿಮಿತವಾಗಿರ್ತಾರೋ ಎನ್ನುವುದನ್ನು ಕಾದು ನೋಡಬೇಕಿದೆ.

ರಾಜ್ ದಖನಿ
ಪವರ್ ಸಿಟಿನ್ಯೂಸ್

Related Articles

Leave a Reply

Your email address will not be published. Required fields are marked *