BREAKING NEWSCITY CRIME NEWSDHARWADL&TLife StylePoliceTWINCITY
ವರ್ಗಾವಣೆ ಆದೇಶವಿದ್ದರೂ “ಡೊಂಟ್ ಕೇರ್”..?

POWER CITYNEWS:DHARWAD
ಹುಬ್ಬಳ್ಳಿ: ಅವಳಿನಗರದ ಪೊಲೀಸ್ ಇಲಾಖೆಯಲ್ಲಿ ಕೆಲವು ಠಾಣೆಗಳ ಸಿಬ್ಬಂದಿಗಳ ವರ್ಗಾವಣೆಗೊಂಡರು ಸಹ ಇನ್ನೂವರೆಗೂ ಸ್ಥಾನ ಪಲ್ಲಟವಾಗದಿರೋದು ಇಲಾಖೆಯಲ್ಲೇ ನಸುಗುಸು ನಡದಿದೆ.
ಕಳೆದ ಎರಡ್ಮೂರು ತಿಂಗಳುಗಳ ಹಿಂದೆ ಅವಳಿನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕೆಳಹಂತದ ಪೊಲೀಸ್ ಅಧಿಕಾರಿಗಳನ್ನ ಇಲಾಖೆಯ ನಿರ್ದೆಶನದಂತೆ ಒಂದೆ ಠಾಣೆಯಲ್ಲಿ ಬೇರೂರಿದ್ದ ಸಿಬ್ಬಂದಿಗಳನ್ನು ಸ್ಥಾನಪಲ್ಲಟ ಮಾಡಲಾಗಿತ್ತೆನ್ನಲಾಗಿದೆ. ಆದರೆ ಕೆಲವರು ಇಲಾಖೆಯ ಹಿರಿಯ ಅಧಿಕಾರಿಗಳ ಆದೇಶವನ್ನು ಕಡೆಗಣಿಸಿದ್ದಾರೆ ಎನ್ನಲಾಗುತ್ತಿದೆ. ಇಂತಹದೊಂದು ಘಟನೆಗೆ ಕಸಬಾ ಪೇಟೆ ಪೊಲೀಸ್ ಠಾಣೆಯೂ ಕೂಡ ಹೊರತಾಗಿಲ್ಲ
ಒಂದು ವೇಳೆ ಕರ್ತವ್ಯ ಲೋಪ ಎಸಗಿರುವುದು ಬೆಳಕಿಗೆ ಬಂದರೆ ದಕ್ಷತೆ ಹಾಗೂ ಪ್ರಾಮಾಣಿಕತೆಗೆ ಸಾಕ್ಷಿಯಾಗಿರುವ ಪೊಲೀಸ್ ಆಯುಕ್ತರ ನಡೆ ಹೇಗಿರಲಿದೆ ಎಂಬುದನ್ನ ಕಾದು ನೋಡಬೇಕಿದೆ.